ಹೆಲ್ಮೆಟ್ ಧರಿಸದೆ ಡಬಲ್ ರೈಡಿಂಗ್ ಮಾಡುತ್ತಿದ್ದವರ ಮೇಲೆ ಶೂ ಎಸೆದ ಹೆಡ್ ಕಾನ್ಸ್ಟೇಬಲ್.. ಹಳೇ ವಿಡಿಯೋ ಈಗ ವೈರಲ್
ಹೆಲ್ಮೆಟ್ ಧರಿಸದೆ ಡಬಲ್ ರೈಡಿಂಗ್ ಮಾಡುತ್ತಿದ್ದವರಿಗೆ ಹೆಡ್ ಕಾನ್ಸ್ಟೇಬಲ್ ತನ್ನ ಬೂಟ್ನಿಂದ ಹೊಡೆದ ಘಟನೆ ಬೆಂಗಳೂರಿನ BEL ಸರ್ಕಲ್ ಬಳಿ ನಡೆದಿದೆ. ಒಂದೇ ಬೈಕ್ನಲ್ಲಿ ಬರುತ್ತಿದ್ದ ಇಬ್ಬರ ಪೈಕಿ ಹಿಂಬದಿ ಕುಳಿತಿದ್ದ ಯುವಕನ ಮೇಲೆ ಹೆಡ್ ಕಾನ್ಸ್ಟೇಬಲ್ ಓಲೇಕಾರ್ ತನ್ನ ಕಾಲಿನಿಂದ ಶೂ ಬಿಚ್ಚಿ ಎಸೆದಿದ್ದಾರೆ.
ನೆಲಮಂಗಲ: ಕೆಲ ದಿನಗಳ ಹಿಂದೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬೈಕ್ ಸವಾರನೊಬ್ಬ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಈ ಘಟನೆ ಬೇರೆಯದೇ ತಿರುವು ಪಡೆದುಕೊಳ್ತು. ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ 15 ಮಂದಿಯನ್ನು ಅರೆಸ್ಟ್ ಮಾಡಿದ್ರು. ಈ ಘಟನೆ ವಿರುದ್ಧ ಅನೇಕ ಕೂಗುಗಳು ಕೇಳಿಸಿದ್ದವು. ಇದೆಲ್ಲಾ ನಿಮಗೆ ಗೊತ್ತೇ ಇದೆ. ಆದ್ರೆ ಇದೇ ರೀತಿ ಟ್ರಾಫಿಕ್ ಪೊಲೀಸರ ಮತ್ತೊಂದು ವರ್ತನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೆಲ್ಮೆಟ್ ಧರಿಸದೆ, ಡಬಲ್ ರೈಡಿಂಗ್ ಮಾಡುತ್ತಿದ್ದವರಿಗೆ ಹೆಡ್ ಕಾನ್ಸ್ಟೇಬಲ್ ತನ್ನ ಬೂಟ್ನಿಂದ(ಶೂ) ಹೊಡೆದ ಘಟನೆ ಬೆಂಗಳೂರಿನ BEL ಸರ್ಕಲ್ ಬಳಿ ನಡೆದಿದೆ. ಒಂದೇ ಬೈಕ್ನಲ್ಲಿ ಬರುತ್ತಿದ್ದ ಇಬ್ಬರ ಪೈಕಿ ಹಿಂಬದಿ ಕುಳಿತಿದ್ದ ಯುವಕನ ಮೇಲೆ ಹೆಡ್ ಕಾನ್ಸ್ಟೇಬಲ್ ಓಲೇಕಾರ್ ತನ್ನ ಕಾಲಿನಿಂದ ಶೂ ಬಿಚ್ಚಿ ಎಸೆದಿದ್ದಾರೆ. ಈ ದೃಶ್ಯಗಳನ್ನು ಬೈಕ್ ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿ ಸೆರೆ ಹಿಡಿದಿದ್ದಾರೆ. ಆದರೆ ಇದು ಎರಡು ವರ್ಷದ ಹಳೆಯ ವಿಡಿಯೋ. ಸದ್ಯ ಮೈಸೂರಿನಲ್ಲಾದ ಘಟನೆ ಬಳಿಕ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಮೇಲೆ ತಮ್ಮ ಆಕ್ರೋಶವನ್ನು ಹೊರ ತೆಗೆದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಈ ರೀತಿ ಪೊಲೀಸರು ಸವಾರರ ಮೇಲೆ ತಮ್ಮ ದರ್ಪ ಪ್ರದರ್ಶಿಸುವುದೂ ಅನೇಕ ವರ್ಷಗಳಿಂದ ನಡೆಯುತ್ತಲೇ ಇದೆ. ಅನೇಕ ಬಾರಿ ಸವಾರರ ಮೇಲೆ ಲಾಠಿ ಬೀಸಿದ ಘಟನೆಗಳು ಸಹ ಸಂಭವಿಸಿವೆ. ಏಕಾಏಕಿ ಗಾಡಿಗಳ ಮುಂದೆ ಅಡ್ಡಗಟ್ಟಿ ಹಣ ಪೀಕಿದ್ದಾರೆ. ಬೈಕ್ ಕೀಗಳನ್ನು ವಶಕ್ಕೆ ಪಡೆದಿದ್ದಾರೆ. ಅದೆಷ್ಟೂ ಬಾರಿ ಸವಾರರ ಜೇಬಿಗೆ ಕೈ ಹಾಕಿ ಹಣ ಕಿತ್ತುಕೊಂಡಿದ್ದಾರೆ. ಕಾರಣವಿಲ್ಲದಿರೂ ದಾಖಲೆಗಳನ್ನು ಕೇಳಿ ಪರಿಶೀಲನೆ ನಡೆಸಿ ಸುಮ್ಮನೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಂತಹ ಪೊಲೀಸರಿಗೆ ಪಾಠ ಕಲಿಸಬೇಕು ಎಂದು ಕೆಲ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
Published On - 9:57 am, Sun, 28 March 21