Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಡಿ.ಕೆ. ಶಿವಕುಮಾರ್
Follow us
sandhya thejappa
|

Updated on: Mar 27, 2021 | 5:30 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) ಡಿಕೆಶಿಯಿಂದ ಮಗಳನ್ನು ರಕ್ಷಿಸಿ; ಯುವತಿಯ ತಂದೆ-ತಾಯಿ ಕಣ್ಣೀರು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಬಿರುಸಿನ ಬೆಳವಣಿಗೆಗಳಾಗುತ್ತಿದೆ. ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ಲಿಖಿತ ದೂರು ನೀಡಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸ್​ಐಟಿ ಕೈಗೆತ್ತಿಕೊಂಡಿದೆ. ಎಸ್​ಐಟಿ ಮುಂದೆ ಯುವತಿ ಪೋಷಕರು ಹೇಳಿದ್ದೇನು ಎಂಬ ಬಗ್ಗೆ ಉನ್ನತ ಮೂಲಗಳ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. Link: ಸಿಡಿ ಗ್ಯಾಂಗ್, ಡಿಕೆ ಶಿವಕುಮಾರ್ ಅವರಿಂದ ನಮ್ಮ ಮಗಳ ರಕ್ಷಿಸಿ; ಮಗಳ ಪ್ರಾಣಕ್ಕೇ ಅಪಾಯವಿದೆ: ಎಸ್​ಐಟಿ ಎದುರು ಕಣ್ಣೀರಾದ ಯುವತಿಯ ತಂದೆ-ತಾಯಿ

2) 65 ದಿನಗಳ ನಂತರ ಜೋ ಬೈಡೆನ್​ನ ಮೊದಲ ಮಾಧ್ಯಮ ಗೋಷ್ಠಿ   ಡೋನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಅಮೇರಿಕದ ಅಧ್ಯಕ್ಷರಾಗಿ ಆರಿಸಿ ಬಂದ 65 ದಿನಗಳ ನಂತರ ಮೊದಲ ಮಾಧ್ಯಮ ಗೋಷ್ಠಿ ನಡೆಸಿದ ಜೋ ಬೈಡೆನ್, ನಮ್ಮ ದೇಶದ ರಾಜಕಾರಿಣಿಗಳನ್ನು ಮೀರಿಸಿದ್ದಾರೆ. ಹಿಂದಿನ ರಿಪಬ್ಲಿಕನ್ ಅಧ್ಯಕ್ಷ ಮತ್ತು ಆ ಪಕ್ಷವನ್ನು ಸಿಕ್ಕಾಪಟ್ಟೆ ಬಯ್ದಿದ್ದಾರೆ. ಸಿಕ್ಕ ಮೊದಲ ಅವಕಾಶದಲ್ಲಿ, ಈ ಜೋ ಬೈಡನ್ ತುಂಬಾ ಒಳ್ಳೆಯವನು ಎಂದು ಹೇಳುತ್ತ ತಮ್ಮನ್ನೇ ತಾವು ಹೊಗಳಿಕೊಂಡಿದ್ದಾರೆ. Link: ಮೊದಲ ಮಾಧ್ಯಮ ಗೋಷ್ಠಿಯಲ್ಲಿ ತಮ್ಮನ್ನೇ ತಾವು ಹೊಗಳಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

3) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಚೇರಿಗೆ ಹೆಚ್ಚಿನ ಭದ್ರತೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೆಸರು ಕೂಡ ಕೇಳಿಬರುತ್ತಿದೆ. Link: ಸಿಡಿ ಯುವತಿ ಪೋಷಕರ ಹೇಳಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ-ಕಚೇರಿಗೆ ಹೆಚ್ಚಿನ ಭದ್ರತೆ

4) ಕ್ರಿಕೆಟ್​ ​ ಮೈದಾನದಲ್ಲಿ ದರ್ಶನ್​-ಅಭಿಷೇಕ್ ನಡುವೆ ಜಗಳ: ಏನಾಯ್ತು? ನಟ ಅಭಿಷೇಕ್​ ಅಂಬರೀಷ್​​ ಹಾಗೂ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಈ ಮೊದಲಿನಿಂದಲೂ ಗೆಳೆಯರು. ಅಂಬರೀಷ್​ ಜತೆ ದರ್ಶನ್​ ಒಳ್ಳೆಯ ಒಡನಾಟ ಹೊಂದಿದ್ದರು. ಹೀಗಾಗಿ, ಅಭಿಷೇಕ್​-ದರ್ಶನ್​ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿ ಆಗಿದೆ. ಅನೇಕ ಬಾರಿ ಅಭಿಷೇಕ್​ ನನ್ನ ತಮ್ಮ ಎಂದೇ ಹೇಳಿಕೊಂಡಿದ್ದಾರೆ ದರ್ಶನ್​. Link: ಕ್ರಿಕೆಟ್​ ಆಡುವಾಗ ಮೈದಾನದಲ್ಲೇ ಕಿತ್ತಾಡಿಕೊಂಡ ದರ್ಶನ್​-ಅಭಿಷೇಕ್​; ಅಸಲಿಗೆ ಅಲ್ಲಿ ನಡೆದಿದ್ದೇನು?

5) ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸದಸ್ಯರ್ಯಾರು? ಬಿಗ್​ ಬಾಸ್​ ಮನೆಯಲ್ಲಿ ನಾಲ್ಕನೇ ವಾರದ ಎಲಿಮಿನೇಷನ್​ ನಡೆಯುತ್ತಿದೆ. ಮನೆಯಲ್ಲಿರುವ 14 ಸದಸ್ಯರ ಪೈಕಿ 13 ಜನ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಾರ ದೊಡ್ಮನೆಯ ಪಯಣ ಮುಗಿಸುವವರು ಯಾರು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಆರಂಭವಾಗಿದೆ. Link: BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇನಾ?

6) ಭಾರತವನ್ನು ಸೋಲಿಸಲು ತಂಡದ ನಿರ್ಭಯತೆ ನೆರವಾಗಿದೆ: ಸ್ಟೋಕ್ಸ್ ಟೀಂ ಇಂಡಿಯಾದೆದುರು ಮೊದಲ ಏಕದಿನ ಪಂದ್ಯದ ಸೋಲಿನ ನಂತರ, ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಮತ್ತೆ ತಮ್ಮ ಗೆಲುವಿನ ಲಯಕ್ಕೆ ಮರಳಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ತಂಡದ ನಿರ್ಭಯತೆ ನೆರವಾಗಿದೆ ಎಂದು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ. Link: India vs England: ಟಾರ್ಗೆಟ್​ ಎಷ್ಟೇ ದೊಡ್ಡದಿದ್ದರು ನಾವು ಹೆದುರುವುದಿಲ್ಲ! 3ನೇ ಪಂದ್ಯಕ್ಕೂ ಮುನ್ನ ಸ್ಟೋಕ್ಸ್​ ಈ ರೀತಿ ಹೇಳಿದ್ಯಾಕೆ?

7) ಡ್ರೈವಿಂಗ್ ಲೈಸೆನ್ಸ್ ಆನ್​ಲೈನ್ ನವೀಕರಣದ ಬಗ್ಗೆ ಮಾಹಿತಿ ಇಲ್ಲಿದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್​ನ ಅವಧಿ ಈಗಾಗಲೇ ಮುಗಿದು ಹೋಗಿದೆಯಾ? ಆದರೆ ನಿಮಗೆ ಗೊತ್ತಿರಲಿ, ಅದರ ರಿನೀವಲ್​ಗೆ (ನವೀಕರಣ) ಮಾರ್ಚ್ 31, 2021ರ ತನಕ ವಿಸ್ತರಣೆ ಕಾಲಾವಧಿ ಮಾಡಲಾಗಿದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಣ ಮಾಡುವುದು ಹೇಗೆ ಅಂತ ತಿಳಿದುಕೊಳ್ಳಬೇಕು ಅಂತ ನಿಮಗೆ ಗೊತ್ತಾಗ ಬೇಕಿದ್ದಲ್ಲಿ ಈ ಲೇಖನ ಸಹಾಯ ಮಾಡುತ್ತದೆ. Link: Driving License Online Renewal: ಡ್ರೈವಿಂಗ್ ಲೈಸೆನ್ಸ್ ಆನ್​ಲೈನ್ ನವೀಕರಣ ಹೇಗೆ?

8) ಏಮ್ಸ್​ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೊವಿಂದ್ ಎದೆನೋವಿನಿಂದ ಆರ್ಮಿ ರಿಸರ್ಚ್​ ಆ್ಯಂಡ್​ ರೆಫರೆಲ್​ ಆಸ್ಪತ್ರೆಗೆ ದಾಖಲಾಗಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನು ಈಗ ದೆಹಲಿಯ ಏಮ್ಸ್​ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಸೈನ್ಸ್ )ಆಸ್ಪತ್ರೆಗೆ ದಾಖಲಾಗಿದೆ. ರಾಮನಾಥ ಕೋವಿಂದ ಅವರಿಗೆ ನಿನ್ನೆ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆರ್ಮಿ ಆಸ್ಪತ್ರೆಗೆ ಸೇರಿಸಿ, ಅಬ್ಸರ್ವೇಶನ್​ನಲ್ಲಿ ಇಡಲಾಗಿತ್ತು. Link: ಸೇನಾ ಆಸ್ಪತ್ರೆಯಿಂದ ಏಮ್ಸ್​​ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೋವಿಂದ್; ಬಾಂಗ್ಲಾದೇಶದಿಂದ ಕರೆ ಮಾಡಿದ ಪ್ರಧಾನಿ ಮೋದಿ​

9) ಸ್ಟ್ರೀಟ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ನಗರದ ಫ್ಯಾಶನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿದ್ದು, ಇಲ್ಲಿನ ಬೆಂಕಿಯನ್ನು ನಂದಿಸಿ ಮನೆಗೆ ತೆರಳುವಾಗ ಕರ್ತವ್ಯನಿರತ ಅಗ್ನಿಶಾಮಕ ದಳದ ಅಧಿಕಾರಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಪ್ರಕಾಶ್ ಹಸ್ಬೆ ಎಂದು ಗುರುತಿಸಲಾಗಿದೆ. Link: ಪುಣೆಯ ಫ್ಯಾಶನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಢ; ಅಗ್ನಿ ನಂದಿಸಿ ಮನೆಗೆ ತೆರಳುವಾಗ ಅಗ್ನಿಶಾಮಕ ದಳದ ಅಧಿಕಾರಿ ಸಾವು

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.