BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇನಾ?
ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಂದ್ರಕಲಾ, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ರಾಜೀವ್, ಮಂಜು ಪಾವಗಡ, ವಿಶ್ವ, ರಘು ಗೌಡ, ಶಮಂತ್ ಬ್ರೋ ಗೌಡ, ಶಂಕರ್ ಅಶ್ವತ್ಥ್ ಡೇಂಜರ್ ಜೋನ್ನಲ್ಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ ನಡೆಯುತ್ತಿದೆ. ಮನೆಯಲ್ಲಿರುವ 14 ಸದಸ್ಯರ ಪೈಕಿ 13 ಜನ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಾರ ದೊಡ್ಮನೆಯ ಪಯಣ ಮುಗಿಸುವವರು ಯಾರು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಆರಂಭವಾಗಿದೆ. ಎಲಿಮಿನೆಷನ್ಗೆ ನಾಮಿನೇಟ್ ಮಾಡಲು ಪ್ರತಿ ಬಾರಿ ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಈ ಅವಕಾಶವನ್ನು ಬಿಗ್ ಬಾಸ್ ಕಿತ್ತುಕೊಂಡಿದ್ದರು. ಕ್ಯಾಪ್ಟನ್ ಆಗಿದ್ದ ಅರವಿಂದ್ ಕೆ.ಪಿ. ಅವರನ್ನು ಹೊರತುಪಡಿಸಿ ಉಳಿದ 13 ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದರು. ವೀಕ್ಷಕರು ನಾಮಿನೇಟ್ ಆದ ಸ್ಪರ್ಧಿಗೆ ವೋಟ್ ಮಾಡಬೇಕು. ಅತಿ ಹೆಚ್ಚು ವೋಟ್ ಬಿದ್ದವರು ಸೇಫ್ ಆದಂತೆ. ಅತಿ ಕಡಿಮೆ ಮತ ಪಡೆದವರು ಮನೆಯಿಂದ ಹೊರಬೀಳುತ್ತಾರೆ.
ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಂದ್ರಕಲಾ, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ರಾಜೀವ್, ಮಂಜು ಪಾವಗಡ, ವಿಶ್ವ, ರಘು ಗೌಡ, ಶಮಂತ್ ಬ್ರೋ ಗೌಡ, ಶಂಕರ್ ಅಶ್ವತ್ಥ್ ಡೇಂಜರ್ ಜೋನ್ನಲ್ಲಿದ್ದಾರೆ. ಇವರಲ್ಲಿ ಒಬ್ಬರ ಪಯಣ ಈ ವಾರ ಅಂತ್ಯವಾಗಲಿದೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಕೆಲವರ ಪರ್ಫಾರ್ಮೆನ್ಸ್ ಉತ್ತಮವಾಗಿದೆ. ಇನ್ನೂ ಕೆಲವರ ಪರ್ಫಾರ್ಮೆನ್ಸ್ ಕುಗ್ಗಿದೆ. ಇದು ಎಲಿಮಿನೇಷನ್ನಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆ. ಮೊದಲ ಎರಡು ವಾರ ವೀಕ್ ಇದ್ದ ವಿಶ್ವ ನಂತರ ಆ್ಯಕ್ಟಿವ್ ಆಗಿದ್ದರು. ಅವರು ಮನೆಯ ಕ್ಯಾಪ್ಟನ್ ಕೂಡ ಆಗಿದ್ದಾರೆ. ಹೀಗಾಗಿ ಅವರು ಮನೆಯಿಂದ ಹೊರ ಹೋಗೋದು ಅನುಮಾನ.
ರಘು ಗೌಡ, ಶಮಂತ್ ಬ್ರೋ ಗೌಡ ಅವರ ಪರ್ಫಾರ್ಮೆನ್ಸ್ ತುಂಬಾನೇ ಸುಧಾರಿಸಿದೆ. ಹೀಗಾಗಿ ಇವರನ್ನು ಮನೆಯಿಂದ ಹೊರ ಕಳುಹಿಸುವುದು ಅನುಮಾನವೇ. ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ರಾಜೀವ್, ಮಂಜು ಪಾವಗಡ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಅವರು ಈ ವಾರವೂ ಸೇಫ್ ಆಗುವ ಸಾಧ್ಯತೆ ಇದೆ. ಉಳಿದಂತೆ, ವೈಷ್ಣವಿ ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಕೂಡ ಮನೆಯಲ್ಲಿ ಉತ್ತಮವಾಗಿಯೇ ಆಟವಾಡುತ್ತಿದ್ದಾರೆ. ಇವರು ಕೂಡ ಈ ವಾರ ಸೇಫ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಈ ವಾರ ಶಂಕರ್ ಅಶ್ವತ್ಥ್ ಅಥವಾ ಚಂದ್ರಕಲಾ ಮನೆಯಿಂದ ಹೊರ ಹೋಗಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಕಳೆದ ವಾರಗಳಿಗೆ ಹೋಲಿಸಿದರೆ ಶಂಕರ್ ಅಶ್ವತ್ಥ್ ಡಲ್ ಆಗಿದ್ದಾರೆ. ಆರೋಗ್ಯ ದೃಷ್ಟಿಯಲ್ಲೂ ಅವರು ಸ್ವಲ್ಪ ಕುಗ್ಗಿದಂತೆ ಕಾಣುತ್ತದೆ. ಇನ್ನು, ಮನೆಯಲ್ಲಿ ಚಂದ್ರಕಲಾ ಅವರಿಂದ ಅಷ್ಟೊಂದು ಅದ್ಭುತವಾಗಿ ಆಟ ಮೂಡಿ ಬರುತ್ತಿಲ್ಲ. ಹೀಗಾಗಿ, ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು.
ಇದನ್ನೂ ಓದಿ: ‘ಸ್ಕರ್ಟ್ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್ ಬಾಸ್ ಚಂದ್ರಕಲಾ ಬದುಕಿನ ಕಹಿ ಘಟನೆ!
ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್; ಬಿಗ್ ಬಾಸ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!