ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ; ಆನೆಗಳ ಉಪಟಳವನ್ನು ನಿಲ್ಲಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನೂತನ ಪ್ರಯೋಗ

ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ವಿಭಿನ್ನ ಯತ್ನದ ಮೂಲಕ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯುವ ಯೋಜನೆ ಮಾಡಿದ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಯೋಗಿಕವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಾಡಿದ ಈ ಮೊದಲ ಪ್ರಯತ್ನ ಯಶಸ್ವಿಯಾದ ಬಳಿಕ ಕಾಡಾನೆ ಸಮಸ್ಯೆ ಹೆಚ್ಚಾಗಿರುವ ಕಡೆಗೂ ಇದನ್ನ ವಿಸ್ತರಣೆ ಮಾಡುತ್ತಿದೆ.

ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ; ಆನೆಗಳ ಉಪಟಳವನ್ನು ನಿಲ್ಲಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನೂತನ ಪ್ರಯೋಗ
ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ
Follow us
preethi shettigar
| Updated By: sandhya thejappa

Updated on: Mar 27, 2021 | 5:39 PM

ಹಾಸನ: ಬರೊಬ್ಬರಿ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಮಲೆನಾಡು ಜನರನ್ನ ಬೆಂಬಿಡದೆ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಆನೆ ಮತ್ತು ಮಾನವನ ಸಂಘರ್ಷ. ಸರ್ಕಾರ ಬದಲಾದವು, ಅರಣ್ಯ ಸಚಿವರುಗಳು ಬಂದು ಹೋದರು ಆದರೆ ಗಜಪಡೆಗಳ ಗಲಾಟೆ ಮಾತ್ರ ಕಡಿಮೆಯಾಗಲೇ ಇಲ್ಲ.ಇನ್ನು ಈ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸೋಲ್ ಬೇಲಿಗಳು , ಆನೆ ಕಂದಕಗಳನ್ನು ಹಾಕಿದರು ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಆದರೆ ಸದ್ಯ ರೈಲ್ವೆ ಕಂಬಿಗಳ ಬೇಲಿ ಮೂಲಕ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯುವ ಪ್ರಯತ್ನಕ್ಕೆ ಜಿಲ್ಲೆ ಮುಂದಾಗಿದೆ.

ಹಾಸನ ಜಿಲ್ಲೆಯ ಸಕಲೇಶಫುರ ತಾಲೂಕು ಸೇರಿದಂತೆ ಬೇಲೂರು, ಅರಕಲಗೂಡು ಭಾಗಗಳ ಜನರನ್ನ ಬರೊಬ್ಬರಿ ಎರಡು ದಶಕಗಳಿಂದ ಕಾಡುತ್ತಿರುವ ಗಜ ಗಲಾಟೆ ನಿಯಂತ್ರಿಸಲು ಅರಣ್ಯ ಇಲಾಖೆ ಮಾಡದ ಪ್ರಯತ್ನ ಇಲ್ಲ. ಕೈಗೊಳ್ಳದ ಕ್ರಮಗಳಿಲ್ಲ. ಮೊದಲು ಆನೆ ಕಂದಕ ನಿರ್ಮಿಸಿ ಆನೆಗಳು ನಾಡಿನತ್ತ ಬಾರದಂತೆ ತಡೆಯುವ ಯತ್ನ ಮಾಡಲಾಯಿತು. ಆದರೆ ತನ್ನ ಚಾಣಾಕ್ಷ ಬುದ್ಧಿಯಿಂದ ಅದನ್ನು ದಾಟಿ ಪುಂಡಾನೆಗಳು ಬಂದವು. ಬಳಿಕ ಸೋಲಾರ್ ಬೇಲಿ ಮೊರೆ ಹೋದರು ಅದಕ್ಕೂ ಸೆಡ್ಡು ಹೊಡೆದವು. ನಂತರ ಜೇನು ನೊಣ ಬೇಲಿ, 70ಕ್ಕೂ ಹೆಚ್ಚು ಆನೆಗಳನ್ನು ಸ್ಥಳಾಂತರ ಮಾಡಿರುವುದು ಎಲ್ಲವೂ ಆದರೂ ಸಮಸ್ಯೆ ಕಡಿಮೆ ಆಗಲೇ ಇಲ್ಲ.

ಇನ್ನು 60ಕ್ಕೂ ಹೆಚ್ಚು ಜನರು ಆನೆಗಳ ಉಪಟಳಕ್ಕೆ ಬಲಿಯಾಗಿದ್ದಾರೆ. ಅಷ್ಟೇ ಆನೆಗಳು ಕೂಡ ಜೀವ ಕಳೆದುಕೊಂಡವು. ಆನೆ ಮಾನವ ಸಂಘರ್ಷ ತಡೆಯಲೇ ಬೇಕೆಂಬ ಒತ್ತಡ ಹೆಚ್ಚಿದಾಗ ಕಡೆಗೆ ಅರಣ್ಯ ಇಲಾಖೆ ಆಯ್ದುಕೊಂಡಿದ್ದು, ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಿದೆ. ಈಗಾಗಲೇ ನಾಗರಹೊಳೆ, ಬಂಡೀಪುರ, ಬನ್ನೇರುಘಟ್ಟಗಳಲ್ಲಿ ಈ ಮಾದರಿಯ ಬೇಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲೂ ಪ್ರಾಯೋಗಿಕವಾಗಿ 4.24 ಕಿಲೋಮೀಟರ್ ಉದ್ದದ ರೈಲ್ವೆ ಬೇಲಿ ನಿರ್ಮಿಸಲಾಗಿದೆ.

railway baricate

ಆನೆಗಳ ಉಪಟಳ ತಪ್ಪಿಸಲು ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ

ಈ ಬ್ಯಾರಿಕೇಡ್ ಕಾಮಗಾರಿ ಫೂರೈಸಿದ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಡಾ.ಬಸವರಾಜ್ ಜಿಲ್ಲೆಯಲ್ಲಿ ಇನ್ನೂ 32 ರಿಂದ 40 ಕಿಲೋಮೀಟರ್ ಇದೇ ರೀತಿಯ ರೈಲ್ವೆ ಕಂಬಿಗಳ ಬೇಲಿ ನಿರ್ಮಿಸುವ ಉದ್ದೇಶ ಇದ್ದು, ರೈತರ ಬೆಳೆ ರಕ್ಷಣೆ ಜೊತೆಗೆ ಆನೆ ಮಾನವ ಸಂಘರ್ಷ ತಡೆಗೆ ಇದು ಪರಿಣಾಮಕಾರಿ ಮಾರ್ಗ ಎಂದು ಹೇಳಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ವಿಭಿನ್ನ ಯತ್ನದ ಮೂಲಕ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯುವ ಯೋಜನೆ ಮಾಡಿದ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಯೋಗಿಕವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಾಡಿದ ಈ ಮೊದಲ ಪ್ರಯತ್ನ ಯಶಸ್ವಿಯಾದ ಬಳಿಕ ಕಾಡಾನೆ ಸಮಸ್ಯೆ ಹೆಚ್ಚಾಗಿರುವ ಕಡೆಗೂ ಇದನ್ನ ವಿಸ್ತರಣೆ ಮಾಡುತ್ತಿದೆ.

railway baricate

ಅರಣ್ಯ ಇಲಾಖೆ ಅಧಿಕಾರಿಗಳ ನೂತನ ಪ್ರಯೋಗ

ಹಾಸನ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಸುಮಾರು 5.28 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಗೊಳಿಸಿ, ಮೊದಲ ಹಂತದಲ್ಲಿ ಬಿಡುಗಡೆಯಾದ 4.65 ಕೋಟಿ ಹಣದಲ್ಲಿ ಇದೀಗ 4.24 ಕಿಲೋಮೀಟರ್ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಮುಗಿಸಲಾಗಿದೆ. ಕೊಡಗು ಜಿಲ್ಲೆಯ ಕಟ್ಟೇಪುರದ ಕಡೆಯಿಂದ ಹೇಮಾವತಿ ಜಲಾಶಯದ ಹಿನ್ನೀರನ್ನ ಈಜಿ ಹಾಸನದತ್ತ ಬರುವ ಗಜಪಡೆ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಮಾಡುತ್ತಿದ್ದವು.

ಆಲೂರು ತಾಲ್ಲೂಕಿನ ನಾಗಾವರ ಆನೆ ಕ್ಯಾಂಪ್​ನ ಹೇಮಾವತಿ ಹಿನ್ನೀರು ಪ್ರದೇಶದ ಭರತೂರು, ಪುರಭೈರವನಹಳ್ಳೀ, ಮಣಿಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬೇಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಉಪಯೋಗಿಸಿದ ರೈಲ್ವೆ ಕಂಬಿಗಳನ್ನ ತಂದು ಒಂದುವರೆ ಮೀಟರ್ ಆಳಕ್ಕೆ ಭೂಮಿಯಲ್ಲಿ ಹುದುಗಿಸಿ ಭೂಮಿ ಮೇಲೆ 2.4 ಮೀಟರ್ ಎತ್ತರಕ್ಕೆ ಕಂಬಗಳನ್ನ ನಿಲ್ಲಿಸಿ ಅದಕ್ಕೆ ಭೂಮಿಯಿಂದ 85 ಸೆಂಟಿಮೀರ್ ಎತ್ತರಕ್ಕೆ ಮೊದಲ ಅಡ್ಡ ಕಂಬಿ ನಂತರ ಅದರ ಮೇಲೆ ಮತ್ತೆ 90 ಸೆಂಟಿಮೀಟರ್ ಎತ್ತರಕ್ಕೆ ಇನ್ನೋದು ಅಡ್ಡ ಕಂಬಿ ಹಾಕಿ ಆನೆ ಯಾವುದೇ ಕಾರಣದಿಂದ ಬೇಲಿ ನೆಗೆದು ಅಥವಾ ಬೇಲಿ ನುಸುಳಿ ನಾಡಿನತ್ತ ಬಾರದಂತೆ ಇದನ್ನು ಕಟ್ಟಲಾಗಿದೆ. ಒಟ್ಟಾರೆ ಆನೆಗಳ ಸಮಸ್ಯೆಗೆ ಈ ರೈಲ್ವೆ ಕಂಬಿಗಳ ಬೇಲಿ ಸಹಾಯಕವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಮೊದಲ ಹಂತದಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಅದರೆ ಅರಣ್ಯ ಇಲಾಖೆ ನಿಧಾನಗತಿಯಲ್ಲಿ ಕಾಮಗಾರಿ ಮಾಡುತ್ತಿದೆ. ಹೀಗೆ ಮಾಡುವುದರಿಂದ ನಾಡಿನಲ್ಲಿರುವ ಆನೆಗಳು ನಾಡಿನಲ್ಲೇ ಬಂದಿಯಾಗಿ ಇಲ್ಲೇ ಹೆಚ್ಚು ಹಾನಿ ಮಾಡುತ್ತವೆ. ಈ ನಿಟ್ಟಿನಲ್ಲಿ ಏಕ ಕಾಲದಲ್ಲಿ ಎಲ್ಲೆಡೆ ಬೇಲಿ ನಿರ್ಮಿಸಿ, ಆನೆಗಳನ್ನ ಇಲ್ಲಿಂದ ಸ್ಥಳಾಂತರ ಮಾಡಿ ಇಲ್ಲವೇ ನಮ್ಮ ಭೂಮಿ ಪರಿಹಾರ ಕೊಟ್ಟು ನಮ್ಮನ್ನೇ ಸ್ಥಳಾಂತರ ಮಾಡಿ ಎಂದು ರೈತ ಜಗದೀಶ್ ಅಸಮಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: Elephant Human Conflict: ಆನೆ- ಮಾನವ ಸಂಘರ್ಷ ತಡೆಗೆ ವಿನೂತನ ತಂತ್ರ; ಗಳಿಕೆ-ನಿಯಂತ್ರಣ ಎರಡೂ ಒಟ್ಟೊಟ್ಟಿಗೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ