Elephant Human Conflict: ಆನೆ- ಮಾನವ ಸಂಘರ್ಷ ತಡೆಗೆ ವಿನೂತನ ತಂತ್ರ; ಗಳಿಕೆ-ನಿಯಂತ್ರಣ ಎರಡೂ ಒಟ್ಟೊಟ್ಟಿಗೆ

ಆನೆ- ಮಾನವ ಸಂಘರ್ಷ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗವನ್ನು ಕಂಡುಕೊಳ್ಳಲಾಗಿದೆ. ಇದರಿಂದ ಸಂಘರ್ಷವನ್ನು ತಡೆಗಟ್ಟುವ ಜತೆಗೆ ರೈತರ ಆದಾಯಕ್ಕೂ ಅನುಕೂಲ ಆಗಲಿದೆ ಎಂದು ಕೆವಿಐಸಿ ಗೌರವಾಧ್ಯಕ್ಷ ವಿನಯ್ ಸಕ್ಸೇನಾ ಹೇಳಿದ್ದಾರೆ.

Elephant Human Conflict: ಆನೆ- ಮಾನವ ಸಂಘರ್ಷ ತಡೆಗೆ ವಿನೂತನ ತಂತ್ರ; ಗಳಿಕೆ-ನಿಯಂತ್ರಣ ಎರಡೂ ಒಟ್ಟೊಟ್ಟಿಗೆ
ಆನೆ (ಸಂಗ್ರಹ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 16, 2021 | 5:02 PM

ಮಡಿಕೇರಿ: ಆನೆಗಳು ಜೇನುಹುಳುಗಳಿಗೆ ಹೆದರುತ್ತವೆ. ಅವುಗಳ ದೇಹದ ಸೂಕ್ಷ್ಮ ಭಾಗಗಳಾದ ಕಣ್ಣು ಮೊದಲಾದ ಕಡೆ ಅವು ಕಡಿಯುತ್ತವೆ ಎಂದು ಹೆದರುತ್ತವೆ. ಆದ್ದರಿಂದ ಜೇನುಗೂಡಿನ ಬೇಲಿಗಳನ್ನು ನಿರ್ಮಿಸುವ ಮೂಲಕ ಆನೆ-ಮಾನವ ನಡುವಿನ ಸಂಘರ್ಷವನ್ನು ತಡೆಯಲು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಆಯೋಗದ (ಕೆವಿಐಸಿ) ಗೌರವಾಧ್ಯಕ್ಷ ವಿನಯ್‍ಕುಮಾರ್ ಸಕ್ಸೇನ ಮಾಹಿತಿ ನೀಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾಹಿತಿ ನೀಡಿ, ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಆನೆಗಳು ಹೆಚ್ಚು ಸಮಸ್ಯೆಯನ್ನು ಉಂಟುಮಾಡುವ ಪ್ರದೇಶಗಳನ್ನು ಆಯ್ಕೆ ಮಾಡಿ, ಪ್ರಾರಂಭಿಕವಾಗಿ ಅಂತಹ ಪ್ರದೇಶಗಳಲ್ಲಿ ಜೇನುಗೂಡು ಬೇಲಿ ನಿರ್ಮಿಸುವ ವಿನೂತನ ತಂತ್ರವನ್ನು ರೂಪಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯ ಚೇಳೂರು ಗ್ರಾಮದ ಸುತ್ತಮುತ್ತಲಿನ ನಾಲ್ಕು ಸ್ಥಳಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಈ ಯೋಜನೆಯಿಂದ ಆನೆ- ಮಾನವ ಸಂಘರ್ಷವನ್ನು ತಡೆಗಟ್ಟುವುದರ ಜೊತೆಗೆ ಜೇನುಕೃಷಿಗೆ ಸಹಕಾರಿಯಾಗುವುದರ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ. ಆದಿವಾಸಿಗಳ ಹಾಡಿ ಪ್ರದೇಶಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಫಲಶ್ರುತಿಯನ್ನು ಕಂಡುಕೊಳ್ಳುವುದಕ್ಕೆ ಚಿಂತಿಸಲಾಗಿದೆ. ಈ ಯೋಜನೆ ಫಲದಾಯಕ ಎಂದು ಕಾಣಲು ಆರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

Honey Bee

ಆನೆ- ಮಾನವ ಸಂಘರ್ಷ ತಡೆಯುವುದಕ್ಕೆ ಜೇನು ಸಾಕಣೆ

ಖಾದಿ ಮತ್ತು ಗ್ರಾಮಾಭಿವೃದ್ಧಿ ಆಯೋಗದಿಂದ ನಡೆಸಿದ ಜೇನು ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಇದೇ ಸಂದರ್ಭದಲ್ಲಿ ಜೇನುಪೆಟ್ಟಿಗೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಖಾದಿ ಮತ್ತು ಗ್ರಾಮಾಭಿವೃದ್ಧಿ ಆಯೋಗದ ಉಪಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಶುಕ್ಲ, ಹಾಗೂ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಸಿ.ಜಿ.ಕುಶಾಲಪ್ಪ, ಎನ್.ಆರ್.ಎಂ. ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ, ಎಸ್.ಎ.ಎಫ್. ವಿಭಾಗದ ಮುಖ್ಯಸ್ಥ ರಾಮಕೃಷ್ಣ ಹೆಗ್ಡೆ ಹಾಗೂ ಡಾ. ಕೆಂಚರೆಡ್ಡಿ ಸೇರಿದಂತೆ ರೈತರು ಹಾಗೂ ಪ್ರಾಧ್ಯಾಪಕರು ಇದ್ದರು.

ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಾಗಿರುವ ಆನೆ ಹಾವಳಿ ತಡೆಗೆ ರೈಲ್ವೆ ಕಂಬಿಗಳ ಬಳಕೆ

ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು
ದಿವಾಕರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ, ಬಂಡಾಯವೆದ್ದಿಲ್ಲ: ರೆಡ್ಡಿ
ದಿವಾಕರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ, ಬಂಡಾಯವೆದ್ದಿಲ್ಲ: ರೆಡ್ಡಿ
ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ, ಲೈವ್ ನೋಡಿ​
ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ, ಲೈವ್ ನೋಡಿ​
ಯೋಗೇಶ್ವರ್ ಮನವೊಲಿಸಿದ ಸುರೇಶ್ ಬೆಳಗ್ಗೆಯೇ ಅಣ್ಣನ ಮನೆಯಲ್ಲಿ ಹಾಜರ್!
ಯೋಗೇಶ್ವರ್ ಮನವೊಲಿಸಿದ ಸುರೇಶ್ ಬೆಳಗ್ಗೆಯೇ ಅಣ್ಣನ ಮನೆಯಲ್ಲಿ ಹಾಜರ್!
ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು?
ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು?
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ