ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಎಸ್ಪಿ
ಕುಣಿಗಲ್ನ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗನೇ ತನ್ನ ಸ್ನೇಹಿತನೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿರುವ ವಿಚಾರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದ ಬೆಳಕಿಗೆ ಬಂದಿದೆ. ಹೆಬ್ಬೂರಿನ ತಿಮ್ಮಸಂದ್ರ ಗ್ರಾಮದ ನಿವಾಸಿ ನಾಗೇಶ್ (58) ಮಗನಿಂದ ಕೊಲೆಯಾದವರು. ಕೊಲೆ ಮುಚ್ಚಿಡಲು ತಂದೆಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಬಿಂಬಿಸಿದ್ದ ಮಗ ಸೂರ್ಯ ಹಾಗೂ ಆತನ ಸ್ನೇಹಿತ ಧನುಷ್ನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು, (ಮೇ 14): ಕುಣಿಗಲ್ನ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗನೇ ತನ್ನ ಸ್ನೇಹಿತನೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿರುವ ವಿಚಾರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದ ಬೆಳಕಿಗೆ ಬಂದಿದೆ. ಹೆಬ್ಬೂರಿನ ತಿಮ್ಮಸಂದ್ರ ಗ್ರಾಮದ ನಿವಾಸಿ ನಾಗೇಶ್ (58) ಮಗನಿಂದ ಕೊಲೆಯಾದವರು. ಕೊಲೆ ಮುಚ್ಚಿಡಲು ತಂದೆಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಬಿಂಬಿಸಿದ್ದ ಮಗ ಸೂರ್ಯ ಹಾಗೂ ಆತನ ಸ್ನೇಹಿತ ಧನುಷ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ತುಮಕೂರು ಎಸ್ಪಿ ಪ್ರತಿಕ್ರಿಯಿಸಿದ್ದು, ಇದೇ ತಿಂಗಳು ಅಂದರೆ ಮೇ 11ರಂದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಒಂದು ಯುಡಿಆರ್ ದಾಖಲಾಗಿತ್ತು. ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಅದರ ಮಾಲೀಕ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಮಲಗಿದ್ದ ಜಾಗದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಮೃತದೇಹದ ಕೈ ಭಾಗದಲ್ಲಿ ಕರೆಂಟ್ ಶಾಕ್ ಹಾಗೂ ಮುಖದ ಭಾಗದಲ್ಲಿ ಇರುವೆ ಕಚ್ಚಿದ ಗುರುತು ಪತ್ತೆಯಾಗಿತ್ತು. ಘಟನಾ ಸ್ಥಳದಲ್ಲಿ ಸಿಸಿಟಿವಿ ಪತ್ತೆಯಾಗಿದ್ದು, ಅದನ್ನು ಪರಿಶೀಲನೆ ನಡೆಸಿದಾಗ ಹಿಂದಿನ ದಿನ ರಾತ್ರಿ10 ಗಂಟೆಗೆ ಇಬ್ಬರು ಬಂದು ಕೊಲೆ ಮಾಡಿರುವುದು ಕಂಡುಬಂದಿದೆ
ಕುತ್ತಿಗೆ ಹಿಸುಕಿ ಕೊಲೆ ಮಾಡಿರೋದು ಕಂಡುಬಂದಿತ್ತು. ವಿಡಿಯೋ ಪರಿಶೀಲನೆ ಮಾಡಿದಾಗ ಕೊಲೆಯಾದ ನಾಗೇಶ್ ಮಗ ಸೂರ್ಯ ಹಾಗೂ ಆತನ ಸ್ನೇಹಿತ ಧನುಷ್ ಕೊಲೆ ಮಾಡಿರೋದು ಪತ್ತೆಯಾಗಿದೆ. ನಂತರ ಅಸಹಜ ಸಾವನ್ನ ಕೊಲೆ ಪ್ರಕರಣವನ್ನಾಗಿ ಮಾಡಿಕೊಂಡು ತನಿಖೆ ಮುಂದುಸಿದ್ದೇವೆ. ಇಬ್ಬರು ಆರೋಪಿಗಳನ್ನ ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಬಂಧಿಸಿ ಕರೆತರಲಾಗಿದೆ. ಆರೋಪಿಗಳನ್ನ ವಿಚಾರಣೆ ನಡೆಸಿ ಮತ್ತಷ್ಟು ಜನರನ್ನ ಬಂಧಿಸಲಾಗಿದೆ. ಬಂಧಿತರ ವಿಚಾರಣೆ ವೇಳೆ ಕೊಲೆಯಾದ ನಾಗೇಶ್ ವಿರುದ್ಧ ಹೇಳಿಕೆ ನೀಡಿದ್ದು. ನಾಗೇಶ್ ತನ್ನ ಮಗಳಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ. ಇನ್ನು ಅದರ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ. ಇದರ ಜೊತೆಗೆ ಆಸ್ತಿ ವಿಚಾರವಾಗಿ ಕಲಹ ಇತ್ತು ಎಂದು ಹೇಳಲಾಗ್ತಿದೆ. ಆ ವಿಚಾರವಾಗಿಯೂ ವಿಚಾರಣೆ ಮಾಡಲಾಗ್ತಿದೆ. ಆರೋಪಿಗಳು ಈ ಹಿಂದೆ ಕೂಡಾ ನಾಗೇಶ ಹತ್ಯೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಘಟನೆ ನಡೆಯುವ 15 ದಿನಗಳ ಹಿಂದೆ ಹುಲಿಯೂರುದುರ್ಗ ಬಳಿ ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಮಾಡಿ ಕೊಲೆ ಮಾಡುವ ತಂತ್ರ ಮಾಡಲಾಗಿತ್ತು. ಈ ಸಂಬಂಧವಾಗಿ 5 ಜನರನ್ನ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.