AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದಿದ್ದ ವಿಜಯ್ ಶಾ ಈಗ ತನ್ನ ಸಹೋದರಿ ಎನ್ನುತ್ತಿದ್ದಾರೆ!

ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದಿದ್ದ ವಿಜಯ್ ಶಾ ಈಗ ತನ್ನ ಸಹೋದರಿ ಎನ್ನುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2025 | 6:14 PM

ಸುಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ವಿಜಯ್ ಶಾ ತಮ್ಮ ತಪ್ಪಿನ ಅರಿವಾಗಿದೆ. ಈಗ ಅವರು ಸೋಫಿಯಾ ಖುರೇಷಿ ತನಗೆ ಸ್ವಂತ ಸಹೋದರಿಗಿಂತಲೂ ಹೆಚ್ಚು ಮತ್ತು ಮಹತ್ವಪೂರ್ಣ ಎನ್ನುತ್ತಾರೆ. ಮಾತಿನ ಭರದಲ್ಲಿ ಆಡಬಾರದ ಮಾತುಗಳನ್ನಾಡಿದೆ, ನಾನೂ ಒಬ್ಬ ಮನುಷ್ಯನಾಗಿರುವ ಕಾರಣ ತಪ್ಪಾಗಿದೆ, ಆಗಿರುವ ತಪ್ಪಿಗೆ ಒಮ್ಮೆಯಲ್ಲ ಹತ್ತು ಬಾರಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರು, ಮೇ 14: ಮಧ್ಯಪ್ರದೇಶ ವಿಜಯ್ ಶಾ (Vijay Shah) ಹೆಸರಿನ ಮಂತ್ರಿಯೊಬ್ಬರು ಪಾಕಿಸ್ತಾದೊಂದಿಗೆ ಯುದ್ಧ ನಡೆಯುತ್ತಿದ್ದಾಗ ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ನೀಡುತ್ತಿದ್ದ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ (Lieutenant Colonel Sophia Qureshi) ವಿಷಯದಲ್ಲಿ ಕೆಲವು ಅನಪೇಕ್ಷಿತ ಪದಗಳನ್ನು ಬಳಸಿದ್ದರು. ಭಯೋತ್ಪಾದಕರ ಸಹೋದರಿಯಿಂದಲೇ ಉಗ್ರರಿಗೆ ತಕ್ಕ ಶಾಸ್ತಿಯನ್ನು ಮಾಡಿಸಲಾಗಿದೆ, ಉಗ್ರರು ಭಾರತೀಯರ ಪ್ಯಾಂಟ್​ಗಳನ್ನು ಬಿಚ್ಟಿಸಿ ಹತ್ಯೆ ಮಾಡಿದರು, ಆದರೆ ಅವರ ಹತ್ಯೆಯನ್ನು ಅವರದ್ದೇ ಸಮುದಾಯ ಮಹಿಳೆ ಮಾಡಿದಳು ಅಂತೆಲ್ಲ ಹೇಳಿದ್ದರು. ಅವರು ಆಡಿದ ಮಾತುಗಳು ವ್ಯಾಪಕ ಖಂಡನಗೆ ಗುರಿಯಾಗಿದ್ದವು. ಬಿಜೆಪಿ ನಾಯಕರು ಕೂಡ ವಿಜಯ್ ಶಾ ಮಾತುಗಳ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:   ಮಗಳ ಬಗ್ಗೆ ಹೆಮ್ಮೆಯಿದೆ, ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ