ಮಗಳ ಬಗ್ಗೆ ಹೆಮ್ಮೆಯಿದೆ, ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಕರ್ನಲ್ ಸೋಫಿಯಾ ಖುರೇಷಿ ಇಂದು ಆಪರೇಷನ್ ಸಿಂಧೂರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅವರ ತಂದೆ ತಾಜ್ ಮೊಹಮ್ಮದ್ ಖುರೇಷಿ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, "ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಮಗಳು ನಮ್ಮ ದೇಶಕ್ಕಾಗಿ ದೊಡ್ಡ ಕೆಲಸ ಮಾಡಿದ್ದಾಳೆ. ಪಾಕಿಸ್ತಾನ ನಾಶವಾಗಬೇಕು. ನನ್ನ ಅಜ್ಜ, ನನ್ನ ತಂದೆ ಮತ್ತು ನಾನು ಎಲ್ಲರೂ ಸೈನ್ಯದಲ್ಲಿದ್ದೆವು. ಈಗ ಅವಳು ಕೂಡ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ" ಎಂದಿದ್ದಾರೆ.
ನವದೆಹಲಿ, ಮೇ 7: ಪಾಕಿಸ್ತಾನದ ಮೇಲಿನ ದಾಳಿಗೆ ನಡೆಸಲಾದ ಕಾರ್ಯಾಚರಣೆ ಆಪರೇಷನ್ ಸಿಂಧೂರದಲ್ಲಿ ಮುಖ್ಯ ಪಾತ್ರ ವಹಿಸಿರುವ ಕರ್ನಲ್ ಸೋಫಿಯಾ ಖುರೇಷಿ (Sofiya Qureshi) ಬಗ್ಗೆ ಅವರ ತಂದೆ ಹೆಮ್ಮೆಯ ನುಡಿಗಳನ್ನಾಡಿದ್ದಾರೆ. “ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಮಗಳು ದೇಶಕ್ಕಾಗಿ ಉತ್ತಮ ಕೆಲಸ ಮಾಡಿದ್ದಾಳೆ. ಪಾಕಿಸ್ತಾನ ನಾಶವಾಗಬೇಕು. ನನ್ನ ಅಜ್ಜ, ನನ್ನ ತಂದೆ ಮತ್ತು ನಾನು ಮೂವರೂ ಸೈನ್ಯದಲ್ಲಿದ್ದೆವು. ಈಗ ನಮ್ಮ ಮಗಳು ಕೂಡ ಸೈನ್ಯದಲ್ಲಿದ್ದಾಳೆ. ನಮ್ಮ ಈ ಸಂಪ್ರದಾಯ ಮುಂದುವರೆದಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ” ಎಂದು ಕರ್ನಲ್ ಸೋಫಿಯಾ ಅವರ ತಂದೆ ತಾಜ್ ಮೊಹಮ್ಮದ್ ಖುರೇಷಿ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಭಾರತದ ಗಡಿಗಳ ರಕ್ಷಣೆ ಮತ್ತು ದೇಶದ ಭದ್ರತೆಗಾಗಿ ಶತ್ರುಗಳಿಗೆ ಸೂಕ್ತ ಉತ್ತರ ನೀಡಿದ ಧೈರ್ಯಶಾಲಿ ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರು ಈಗ ದಾಖಲಾಗಿದೆ. ವಿಶೇಷವೆಂದರೆ ಸೋಫಿಯಾ ಖುರೇಷಿ ಅವರು ಇಂತಹ ವಿಶೇಷ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಮುಸ್ಲಿಂ ಮಹಿಳಾ ಅಧಿಕಾರಿಯಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾನ್ಸ್ಟೇಬಲ್ ಜತೆ ಎಂಗೇಜ್ಮೆಂಟ್ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

