India vs England | ಧೋನಿಯೊಂದಿಗೆ ಹೋಲಿಸುವ ಮಟ್ಟಕ್ಕೆ ಪಂತ್ ಮತ್ತು ಕಿಷನ್ ಬೆಳೆದದ್ದು ಹೆಮ್ಮೆಯ ವಿಚಾರ: ಸಬಾ ಕರೀಮ್

‘ಇಶಾನ್ ಕಿಷನ್ ಮತ್ತು ರಿಷಬ್ ಪಂತ್ ಇಬ್ಬರೂ 2016ರ ಅಂಡರ್-19 ವಿಶ್ವಕಪ್​ನಲ್ಲಿ ಆಡಿದ್ದಾರೆ. ಹಾಗಾಗಿ ಅವರಿಗೆ ಭದ್ರವಾದ ಅಡಿಪಾಯ ಸಿಕ್ಕಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನ ಹೊಣೆಗಾರಿಕೆಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಮತ್ತು ತಮ್ಮ ಸಾಮರ್ಥ್ಯವನ್ನು ಹೇಗೆ ಸಾಬೀತು ಮಾಡಬೇಕೆನ್ನುವ ಅಂಶವನ್ನೂ ತಿಳಿದುಕೊಂಡಿದ್ದಾರೆ,’ ಎಂದು ಕರೀಮ್ ಹೇಳಿದರು.

India vs England | ಧೋನಿಯೊಂದಿಗೆ ಹೋಲಿಸುವ ಮಟ್ಟಕ್ಕೆ ಪಂತ್ ಮತ್ತು ಕಿಷನ್ ಬೆಳೆದದ್ದು ಹೆಮ್ಮೆಯ ವಿಚಾರ: ಸಬಾ ಕರೀಮ್
ರಿಷಭ್ ಪಂತ್ ಮತ್ತು ಇಶಾನ್ ಕಿಷನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 16, 2021 | 5:12 PM

ರಿಷಭ್ ಪಂತ್ ಮತ್ತು ಇಶಾನ್ ಕಿಷನ್ ಯಾರು ಹಿತವರು ನಿಮಗೆ ಈ ಇಬ್ಬರೊಳಗೆ? ಇಂಥದೊಂದು ಚರ್ಚೆ ಶುರುವಾಗಿರೋದು ನಿಮ್ಮ ಗಮನಕ್ಕೂ ಬಂದಿರಬಹುದು. ಕ್ರಿಕೆಟ್ ಆಟವೇ ಹಾಗೆ. ಹೋಲಿಕೆಗಳು ಈ ಆಟದ ಅವಿಭಾಜ್ಯ ಅಂಗ. ಅಂದಕಾಲತ್ತಿಲ್ ನಡೆದುಕೊಂಡು ಬಂದಿರುವ ಪ್ರಕ್ರಿಯೆ ಇದು. ಪಂತ್ ಮತ್ತು ಕಿಷನ್ ಒಂದೇ ಕೆಟೆಗರಿಗೆ ಸೇರಿದ ಆಟಗಾರರು, ಅಂದರೆ ವಿಕೆಟ್​ಕೀಪರ್/ಬ್ಯಾಟ್ಸ್​ಮನ್​ಗಳು. ಬ್ಯಾಟಿಂಗ್ ವಿಷಯಕ್ಕೆ ಬಂದರೆ ಇಬ್ಬರೂ ಚೆಂಡಿರೋದೆ ಚಚ್ಚಲು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವವರು. ವಿಕೆಟ್​ ಹಿಂದೆ ಸಹ ಅವರಲ್ಲಿ ಉಲ್ಲೇಖಿಸಬಹುದಾದ ನ್ಯೂನತೆಗಳಿಲ್ಲ. ಭಾರತದ ಮಾಜಿ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಮತ್ತು ಅಯ್ಕೆ ಸಮಿತಿಯ ಮಾಜಿ ಸದಸ್ಯ ಸಬಾ ಕರೀಮ್ ಅವರ ಪ್ರಕಾರ ಪಂತ್ ಮತ್ತು ಕಿಷನ್ ಇಬ್ಬರೂ ಕ್ರಿಕೆಟ್​ನ ಮೂರು ಆವೃತ್ತಿಗಳಿಗೆ ಸೂಟ್​ ಆಗುವ ಆಟಗಾರರು. ಟೆಸ್ಟ್​ ಕ್ರಿಕೆಟ್​ನಲ್ಲಿ ಪಂತ್ ತೋರಿದ ಪರಾಕ್ರಮಶಾಲಿ ಬ್ಯಾಟಿಂಗ್ ಪ್ರದರ್ಶನ ಮತ್ತು ತಾನಾಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಅರ್ಧ ಶತಕ ಬಾರಿಸಿದ ಕಿಷನ್ ಅವರ ಬ್ಯಾಟಿಂಗ್ ನೋಡಿದ ನಂತರವೇ ಕರೀಮ್ ಈ ಅಭಿಪ್ರಾಯ ತಳೆದಿದ್ದಾರೆ.

ಸುದ್ದಿಸಂಸ್ಥೆಯೊಂದು ನಡೆಸಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಕರೀಮ್; ಪಂತ್ ಮತ್ತು ಕಿಷನ್ ಇಬ್ಬರೂ ಮ್ಯಾಚ್​ವಿನ್ನರ್​ಗಳು ಮತ್ತು ಇಂಥ ಪ್ರಚಂಡ ಯುವ ಪ್ರತಿಭೆಗಳನ್ನು ಪಡೆದಿರುವ ಭಾರತ ಧನ್ಯ ಎಂದು ಹೇಳಿದರು. ‘ತಾವು ಮ್ಯಾಚ್​ವಿನ್ನರ್​ಗಳೆಂದು ಸಾಬೀತು ಮಾಡಲು ಇಬ್ಬರೂ ಪ್ರಯತ್ನಿಸಿದ್ದಾರೆ. ಹಿಂದೆ, ಪಂತ್ ಈ ಅಂಶವನ್ನು ಟೆಸ್ಟ್​ಗಳಲ್ಲಿ ಪ್ರೂವ್ ಮಾಡಿ ಸೀಮಿತ ಓವರ್​ಗಳ ಕ್ರಿಕೆಟ್​ಗೆ ವಾಪಸ್ಸಾದರು. ಈಗ ಕಿಷನ್ ತನಗೆ ದೊರೆತ ಮೊದಲ ಅವಕಾಶದಲ್ಲೇ ಪ್ರತಿಭೆಯನ್ನು ಮೆರೆದಿದ್ದಾರೆ, ಇಬ್ಬರ ಮೈಂಡ್​ಸೆಟ್​ ಒಂದೇ ರೀತಿಯಾಗಿದೆ’ ಎಂದು ಕರೀಮ್ ಹೇಳಿದರು.

‘ಕಿರು ಆವೃತ್ತಿಯ ಕ್ರಿಕೆಟ್​ನಲ್ಲಿ ಇಶಾನ್ ಕಿಷನ್ ಮತ್ತು ರಿಷಭ್ ಪಂತ್​ರಂಥ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯದ ಆಟಗಾರರು ಭಾರತಕ್ಕೆ ಲಭ್ಯರಿರುವುದು ಅದೃಷ್ಟವೆಂದೇ ಹೇಳಬೇಕು. ಮುಂಬರುವ ದಿನಗಳಲ್ಲಿ ಇವರಿಬ್ಬರು, ಎಲ್ಲ ಮೂರು ಫಾರ್ಮಾಟ್​ಗಳಲ್ಲೂ ಭಾರತವನ್ನು ಪ್ರತಿನಿಧಿಸಲಿದ್ದಾರೆನ್ನುವ ಭರವಸೆ ನನಗಿದೆ,’ ಎಂದು ಕರೀಮ್ ಹೇಳಿದರು.

Saba Karim

ಸಬಾ ಕರೀಮ್

‘2016ರಲ್ಲಿ ಅಂಡರ್-19 ವಿಶ್ವಕಪ್​ನಲ್ಲಿ ಭಾಗವಹಿಸಿದ ಭಾರತದ ಎಳೆಯರ ತಂಡದ ಭಾಗವಾಗಿದ್ದ ಪಂತ್ ಮತ್ತು ಕಿಷನ್ ಆ ಟೂರ್ನಿಯಲ್ಲಿ ತೋರಿದ ಅಪ್ರತಿಮ ಪ್ರದರ್ಶನಗಳಿಂದ ಸೀನಿಯರ್​ ಟೀಮಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿದ್ದಾರೆ. ಸದರಿ ಟೂರ್ನಿಯಲ್ಲಿ ಕಿಷನ್ ತಂಡವನ್ನು ಮುನ್ನಡೆಸಿದ್ದರೆ, ಪಂತ್ ಬ್ಯಾಟ್​ನಿಂದ ಉತ್ತಮ ಪ್ರದರ್ಶನಗಳನ್ನು ನೀಡಿದ್ದರು. ಕಿರಿ ವಯಸ್ಸಿನಲ್ಲಿ ಪಡೆದುಕೊಂಡ ಅನುಭವವೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ ಎಂದು ಕರೀಮ್ ಹೇಳಿದರು.

‘ಇಶಾನ್ ಕಿಷನ್ ಮತ್ತು ರಿಷಬ್ ಪಂತ್ ಇಬ್ಬರೂ 2016ರ ಅಂಡರ್-19 ವಿಶ್ವಕಪ್​ನಲ್ಲಿ ಆಡಿದ್ದಾರೆ. ಹಾಗಾಗಿ ಅವರಿಗೆ ಭದ್ರವಾದ ಅಡಿಪಾಯ ಸಿಕ್ಕಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನ ಹೊಣೆಗಾರಿಕೆಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಮತ್ತು ತಮ್ಮ ಸಾಮರ್ಥ್ಯವನ್ನು ಹೇಗೆ ಸಾಬೀತು ಮಾಡಬೇಕೆನ್ನುವ ಅಂಶವನ್ನೂ ತಿಳಿದುಕೊಂಡಿದ್ದಾರೆ’ ಎಂದು ಕರೀಮ್ ಹೇಳಿದರು. ಯುವ ಆಟಗಾರನ್ನು ಹಿಂದಿನ ಗ್ರೇಟ್​ ಆಟಗಾರರಿಗೆ ಹೋಲಿಸುವುದು ಭಾರತದಲ್ಲಿ ಅನಿವಾರ್ಯ, ಪಂತ್ ಹಾಗೂ ಕಿಷನ್​ಗೆ ಅದರ ಬಗ್ಗೆ ಅರಿವಿದೆ ಎಂದು ಕರೀಮ್ ಹೇಳುತ್ತಾರೆ.

‘ನಿರ್ಭೀತಿಯ ಮನೋಭಾವ, ಬಿಗ್​ ಹಿಟ್ಟಿಂಗ್ ಮತ್ತು ವಿಕೆಟ್​ಗಳ ಹಿಂದೆ ತೋರುವ ಪ್ರದರ್ಶನಗಳಿಂದ ಅವರನ್ನು ಎಂ.ಎಸ್. ಧೋನಿಯೊಂದಿಗೆ ಹೋಲಿಸಲಾಗುತ್ತಿದೆ. ಇದಕ್ಕಿಂತ ದೊಡ್ಡ ಸಾಧನೆ ಅವರಿಗೆ ಮತ್ತೊಂದಿಲ್ಲ. ಮೈದಾನದಲ್ಲಿ ಕೆಚ್ಚೆದೆಯಿಂದ ಆಡಿ ಡೆವಿಲ್-ಮೇ-ಕೇರ್ ಧೋರಣೆ ಪ್ರದರ್ಶಿಸುವ ಪಂತ್ ಮತ್ತು ಕಿಷನ್ ಟೀಮಿಗೆ ತಾವು ಯಾವ ರೀತಿಯ ಸೇವೆ ಒದಗಿಸಬೇಕು ಅನ್ನುವುದನ್ನು ಗ್ರಹಿಸಿಕೊಂಡು ಲೆಕ್ಕಾಚಾರದ ರಿಸ್ಕ್​ಗಳೊಂದಿಗೆ ಬೆರಗು ಹುಟ್ಟಿಸುವ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿರುವುದು ಮನಸ್ಸಿಗೆ ಮುದ ನೀಡುತ್ತದೆ’ ಎಂದು ಕರೀಮ್ ಹೇಳಿದ್ದಾರೆ.

ಇದನ್ನೂ ಓದಿ: India vs England: ರೋಹಿತ್ ಆಡದಿರುವುದು ಬ್ರೇಕಿಂಗ್ ನ್ಯೂಸ್ ಎಂದ ಪಾರ್ಥೀವ್ ಪಟೇಲ್

Published On - 5:11 pm, Tue, 16 March 21

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ