ಸಿಂದಗಿ ಡಿಪೋದಲ್ಲಿ ಡೀಸೆಲ್ ಸಮಸ್ಯೆ, ನಿಂತಲ್ಲೇ ನಿಂತ ಬಸ್ಗಳು..ಪ್ರಯಾಣಿಕರು ಪರದಾಟ
ವಿಜಯಪುರ ಜಿಲ್ಲೆ ಸಿಂದಗಿ ಬಸ್ ಡಿಪೋದಲ್ಲಿ ಡೀಸೆಲ್ ಸಮಸ್ಯೆ ತಲೆದೂರಿದೆ. ಡಿಪೋದಿಂದ ಹೊರಡುವ ಬಸ್ ಗಳಿಗೆ ಡೀಸೆಲ್ ಇಲ್ಲದ ಕಾರಣ ಬಸ್ ಸಂಚಾರದಲ್ಲಿ ವಿಳಂಭವಾಗಿದೆ. ಇಂದು (ಮೇ 14) ಬೆಳಿಗ್ಗೆ 10 ಗಂಟೆವರೆಗೂ ಡೀಸೆಲ್ ಇಲ್ಲದ ಕಾರಣ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹೊರಡದೇ ಡಿಪೋದಲ್ಲಿದ್ದ ನಿಲ್ಲುವಂತಾಗಿತ್ತು. ಬೆಳಗಾವಿಯ ಹಿಂದೂಸ್ತಾನ್ ಪೆಟ್ರೋಲಿಯಂನಿಂದ ಸಿಂದಗಿ ಬಸ್ ಡಿಪೋಗೆ ಡೀಸೆಲ್ ಪೂರೈಕೆಯಾಗುತ್ತದೆ. ಇತ್ತೀಚೆಗೆ ಡೀಸಲ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸಿಂದಗಿ ಡಿಪೋ ಮೂಲಗಳಿಂದ ತಿಳಿದುಬಂದಿದೆ.
ವಿಜಯಪುರ, (ಮೇ 14): ವಿಜಯಪುರ ಜಿಲ್ಲೆ ಸಿಂದಗಿ ಬಸ್ ಡಿಪೋದಲ್ಲಿ ಡೀಸೆಲ್ ಸಮಸ್ಯೆ ತಲೆದೂರಿದೆ. ಡಿಪೋದಿಂದ ಹೊರಡುವ ಬಸ್ ಗಳಿಗೆ ಡೀಸೆಲ್ ಇಲ್ಲದ ಕಾರಣ ಬಸ್ ಸಂಚಾರದಲ್ಲಿ ವಿಳಂಭವಾಗಿದೆ. ಇಂದು (ಮೇ 14) ಬೆಳಿಗ್ಗೆ 10 ಗಂಟೆವರೆಗೂ ಡೀಸೆಲ್ ಇಲ್ಲದ ಕಾರಣ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹೊರಡದೇ ಡಿಪೋದಲ್ಲಿದ್ದ ನಿಲ್ಲುವಂತಾಗಿತ್ತು. ಸಿಂದಗಿ ಬಸ್ ಡಿಪೋದಿಂದ ವಿವಿಧ ಜಿಲ್ಲೆ ತಾಲೂಕು ಹಾಗೂ ಗ್ರಾಮಗಳಿಗೆ 100 ಕ್ಕೂ ಆಧಿಕ ಬಸ್ ಗಳು ತೆರಳುತ್ತವೆ. ಡೀಸೆಲ್ ಇಲ್ಲದ ಕಾರಣ ಬೆಳಿಗ್ಗೆ ಬಸ್ ಗಳ ಸಂಚಾರದಲ್ಲಿ ವಿಳಂಭವಾಗಿದೆ. ಇದರಿಂದ ಸಿಂದಗಿಯಿಂದ ಇತರೆ ಭಾಗಗಳಿಗೆ ತೆರಳೋ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ.
ಬೆಳಿಗ್ಗೆ 10 ಗಂಟೆ ಬಳಿಕ ಡಿಸೇಲ್ ಪೂರೈಕೆಯಾದ ನಂತರ ಬಸ್ಗಳು ತುಂಬಿಸಿಕಂಡು ಸಂಚಾರಕ್ಕೆ ಅಣಿಯಾದವು. ಬೆಳಗಾವಿಯ ಹಿಂದೂಸ್ತಾನ್ ಪೆಟ್ರೋಲಿಯಂನಿಂದ ಸಿಂದಗಿ ಬಸ್ ಡಿಪೋಗೆ ಡೀಸೆಲ್ ಪೂರೈಕೆಯಾಗುತ್ತದೆ. ಇತ್ತೀಚೆಗೆ ಡೀಸಲ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸಿಂದಗಿ ಡಿಪೋ ಮೂಲಗಳಿಂದ ತಿಳಿದುಬಂದಿದೆ. ಈ ಸಮಸ್ಯೆ ಹಲವಾರು ತಿಂಗಳುಗಳಿಂದ ನಡೆದಿದೆ. ಸಿಂದಗಿ ಡಿಪೋಕ್ಕೆ ಸರಬರಾಜಾಗುತ್ತಿರುವ ಡಿಸೈಲ್ ಪೂರೈಕೆ ವಿಳಂಭವಾಗುತ್ತಿದೆ.