ಉರಿ ಸೆಕ್ಟರ್ನಲ್ಲಿರುವ ಗ್ರಾಮಗಳಲ್ಲಿ ಈಗಲೂ ಜೀವಂತ ಮಿಸೈಲ್ಗಳು, ಜನ ಊರೊಳಗೆ ಬರದಂತೆ ತಡೆ
ಹಿಂದೆ, ಪಾಕಿಸ್ತಾನ ಉರಿ ಸೆಕ್ಟರ್ ನಲ್ಲಿ ಫೈರ್ ಮಾಡಿದ ಕ್ಷಿಪಣಿಯೊಂದು 5 ವರ್ಷಗಳ ಬಳಿಕ ಸ್ಫೋಟಗೊಂಡು ಐದಾರು ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂದು ನಮ್ಮ ವರದಿಗಾರ ಹೇಳುತ್ತಾರೆ. ಹಾಗಾಗಿ ಪೊಲೀಸರು ಯಾವುದೇ ಚಾನ್ಸ್ ತೆಗೆದುಕೊಳ್ಳಲು ತಯಾರಿಲ್ಲ. ಗ್ರಾಮಸ್ಥರಿಗೆ ತಮ್ಮ ಮನೆ ಮಠಗಳನ್ನು ಬಿಟ್ಟು ಬೇರೆಲ್ಲೋ ವಾಸ ಮಾಡೋದು ಇಷ್ಟವಿಲ್ಲವಾದರೂ ಪರಿಸ್ಥಿತಿಯ ಕರೆ ಹಾಗಿದೆ.
ಉರಿ ಸೆಕ್ಟರ್ (ಜಮ್ಮು ಮತ್ತು ಕಾಶ್ಮೀರ), ಮೇ 14: ಈ ಸ್ಥಳದ ಸೌಂದರ್ಯ, ನಿಶ್ಶಬ್ದತೆ ಮತ್ತು ರಮಣೀಯತೆ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವು ಉರಿ ಸೆಕ್ಟರ್ನ ಚುಂಡಾ ಮತ್ತು ತಿಲ್ವಾಡಿ ಗ್ರಾಮಗಳು ಅದರೆ ಸದ್ಯಕ್ಕೆ ಎರಡೂ ನಿರ್ಜನ ಪ್ರದೇಶಗಳು. ಮೇ 9 ಮತ್ತು 10 ರಂದು ಪಾಕಿಸ್ತಾನ ಒಂದೇ ಸಮನೆ ಶೆಲ್ಲಿಂಗ್, ಗುಂಡಿನ ದಾಳಿ ಮತ್ತು ಮಿಸೈಲ್ಗಳನ್ನು ಹಾರಿಬಿಟ್ಟಿದ್ದರಿಂದ ಜನ ಹೆದರಿ ಬೇರೆ ಊರುಗಳಿಗೆ ಹೋಗಿದ್ದಾರೆ. ಕದನ ವಿರಾಮ ಘೋಷಣೆಯದ ನಂತರವೂ ಜನ ಊರುಗಳಿಗೆ ವಾಪಸ್ಸು ಬಂದಿಲ್ಲ. ಅಸಲಿಗೆ, ಪಾಕಿಸ್ತಾನ ದಾಳಿ ಮಾಡಿದ ಕೆಲ ಕ್ಷಿಪಣಿಗಳು ಈಗಲೂ ಜೀವಂತವಾಗಿರುವುದರಿಂದ ಅವರು ಊರಿಗೆ ಹಿಂತಿರುಗದಂತೆ ತಡೆಯಲಾಗುತ್ತಿದೆ. ಎಲ್ಲವನ್ನೂ ಕ್ಲೀಯರ್ ಮಾಡಿದ ಬಳಿಕ ಜನರ ಪ್ರವೇಶಕ್ಕೆ ಪೊಲೀಸರು ಅನುಮತಿ ನೀಡುತ್ತಾರಂತೆ.
ಇದನ್ನೂ ಓದಿ: ಸಹಜ ಸ್ಥಿತಿಗೆ ಮರಳುತ್ತಿರುವ ಜಮ್ಮು ಮತ್ತು ಕಾಶ್ಮೀರ, ಶ್ರೀನಗರದ ಶಾಲೆಗಳಲ್ಲಿ ಮಕ್ಕಳ ಕಲರವ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

