ಸಹಜ ಸ್ಥಿತಿಗೆ ಮರಳುತ್ತಿರುವ ಜಮ್ಮು ಮತ್ತು ಕಾಶ್ಮೀರ, ಶ್ರೀನಗರದ ಶಾಲೆಗಳಲ್ಲಿ ಮಕ್ಕಳ ಕಲರವ
ವರದಿಗಾರ ಕೆಲ ಮಕ್ಕಳೊಂದಿಗೆ ಮಾತಾಡಿದ್ದು ಎಲ್ಲರೂ ಶಾಲೆ ಪುನರಾರಂಭಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶೆಲ್ಲಿಂಗ್ ಮತ್ತು ಫೈರಿಂಗ್ ನಡೆಯುತ್ತಿದ್ದಾಗ ಭಯವಾಗುತಿತ್ತು, ಈಗ ಯಾವ ಭಯವೂ ಇಲ್ಲ, ತಂದೆ ತಾಯಿಗಳಿಗೆ ಕೊಂಚ ಆತಂಕವಿದೆ., ಆದರೆ, ಸೇನೆ ಮತ್ತು ಸರ್ಕಾರದ ಮೇಲೆ ಭರವಸೆ ಇರೋದ್ರಿಂದ ನಿರುಮ್ಮಳವಾಗಿದ್ದಾರೆ ಎಂದು ಶಾಲೆಗಳಿಗೆ ಬಂದಿರುವ ಮಕ್ಕಳು ಹೇಳುತ್ತವೆ.
ಶ್ರೀನಗರ, ಮೇ 13: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟ ನಂತರ ಜಮ್ಮು ಮತ್ತು ಕಾಶ್ಮೀರ (Jammu and Kashmir) ಸಹಜ ಸ್ಥಿತಿಗೆ ಮರಳುತ್ತಿದೆ. ನಮ್ಮ ದೆಹಲಿ ವರದಿಗಾರ ಶ್ರೀನಗರ ತೆರಳಿ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನು ವಿವರಿಸಿದ್ದಾರೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಯುದ್ಧ ಶುರುವಾದಾಗಿನಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಪುನಃ ಓಪನ್ ಆಗಿವೆ ಮತ್ತು ಮಕ್ಕಳು ಹಾಗೂ ಅವರ ಪೋಷಕರು ಯಾವುದೇ ಭಯ ಮತ್ತು ಆತಂಕವಿಲ್ಲದೆ ನಗುನಗುತ್ತಾ ಶಾಲೆಗಳಿಗೆ ಬರುತ್ತಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ಸಲ್ಮಾನ್ ಖಾನ್ ಮೌನ; ಕದನ ವಿರಾಮಕ್ಕೆ ಖುಷಿ: ಜಾಡಿಸಿದ ನೆಟ್ಟಿಗರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ

ವಿಶ್ವಾಸ್ ಕುಮಾರ್ ರಮೇಶ್ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ

ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
