AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂದೂರ್ ಬಗ್ಗೆ ಸಲ್ಮಾನ್ ಖಾನ್ ಮೌನ; ಕದನ ವಿರಾಮಕ್ಕೆ ಖುಷಿ: ಜಾಡಿಸಿದ ನೆಟ್ಟಿಗರು

ಪಾಕ್ ಉಗ್ರರ ವಿರುದ್ಧ ಭಾರತದ ಸೇನೆ ‘ಆಪರೇಷನ್ ಸಿಂದೂರ್’ ನಡೆಸಿದಾಗ ಸಲ್ಮಾನ್ ಖಾನ್ ಮೌನವಾಗಿದ್ದರು. ಆದರೆ ಈಗ ಕದನ ವಿರಾಮ ಘೋಷಣೆ ಆಗುತ್ತಿದ್ದಂತೆಯೇ ಅವರು ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ಅವರ ಈ ನಡೆಯನ್ನು ಜನರು ಖಂಡಿಸುತ್ತಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಆಪರೇಷನ್ ಸಿಂದೂರ್ ಬಗ್ಗೆ ಸಲ್ಮಾನ್ ಖಾನ್ ಮೌನ; ಕದನ ವಿರಾಮಕ್ಕೆ ಖುಷಿ: ಜಾಡಿಸಿದ ನೆಟ್ಟಿಗರು
Salman Khan
ಮದನ್​ ಕುಮಾರ್​
|

Updated on: May 11, 2025 | 12:18 PM

Share

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ (India Pak War) ನಡೆಯುತ್ತಿದೆ. ಇದೆಲ್ಲ ಆರಂಭ ಆಗಿದ್ದು ಪಾಕ್ ಉಗ್ರರು ಪಹಲ್ಗಾಮ್​​ನಲ್ಲಿ ದಾಳಿ ಮಾಡಿದ ನಂತರ. ಸದ್ಯಕ್ಕೆ ಕದನ ವಿರಾಮ ಘೋಷಿಸಲಾಗಿದೆ. ಆದರೂ ಪಾಕಿಸ್ತಾನ ಕಾಲು ಕೆರೆದುಕೊಂಡು ಬರುತ್ತಿದೆ. ಈ ಎಲ್ಲ ಘಟನೆಗಳ ಬಗ್ಗೆ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಕಮೆಂಟ್ ಮಾಡುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ (Salman Khan) ಅವರು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕದನ ವಿರಾಮಕ್ಕೆ ಖುಷಿಪಟ್ಟು, ಆಪರೇಷನ್ ಸಿಂದೂರ್ (Operation Sindoor) ಬಗ್ಗೆ ಮೌನ ತಾಳಿದ್ದ ಸಲ್ಮಾನ್ ಖಾನ್ ಅವರ ನಡೆಯನ್ನು ಜನರು ಖಂಡಿಸಿದ್ದಾರೆ.

ಪಾಕಿಸ್ತಾನದ ಉಗ್ರರು ಪಹಲ್ಗಾಮ್​ನಲ್ಲಿ ನಡೆಸಿದ ಹೀನ ಕೃತ್ಯಕ್ಕೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ ಮೂಲಕ ಉಗ್ರರನ್ನು ಸೆದೆ ಬಡಿಯಿತು. ಭಾರತದ ಸೈನಿಕರ ಶೌರ್ಯವನ್ನು ಹಾಗೂ ಭಾರತ ಸರ್ಕಾರದ ದಿಟ್ಟತನವನ್ನು ಅನೇಕರು ಕೊಂಡಾಡಿದರು. ಆದರೆ ಕೆಲವರು ಮೌನವಾಗಿದ್ದರು. ಅಂಥವರಲ್ಲಿ ಸಲ್ಮಾನ್ ಖಾನ್ ಕೂಡ ಪ್ರಮುಖರು. ಆಪರೇಷನ್ ಸಿಂದೂರ್ ಬಗ್ಗೆ ಅವರು ಯಾವುದೇ ಪೋಸ್ಟ್ ಮಾಡಿರಲಿಲ್ಲ.

ಇತ್ತೀಚೆಗೆ ಕದನ ವಿರಾಮ ಘೋಷಣೆ ಆಯಿತು. ಕೂಡಲೇ ಸಲ್ಮಾನ್ ಖಾನ್ ಅವರು ‘ಕದನ ವಿರಾಮಕ್ಕೆ ಧನ್ಯವಾದಗಳು ದೇವರೇ’ ಎಂದು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದರು. ಅದನ್ನು ಕಂಡ ಕೂಡಲೇ ನೆಟ್ಟಿಗರಿಗೆ ಕೋಪ ಬಂತು. ‘ಹಾಗಾದರೆ ನೀವು ಆಪರೇಷನ್ ಸಿಂದೂರ್ ಬಗ್ಗೆ ಯಾಕೆ ಏನೂ ಮಾತನಾಡಿಲ್ಲ’ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರ ಪ್ರಶ್ನೆಗಳಿಗೆ ಉತ್ತರಿಸಲು ಸಲ್ಮಾನ್ ಖಾನ್​ಗೆ ಸಾಧ್ಯವಾಗಿಲ್ಲ. ಕೆಲವೇ ನಿಮಿಷಗಳ ಬಳಿಕ ಅವರು ‘ಕದನ ವಿರಾಮಕ್ಕೆ ಧನ್ಯವಾದಗಳು ದೇವರೇ’ ಎಂಬ ಪೋಸ್ಟ್​ ಅನ್ನು ಡಿಲೀಟ್ ಮಾಡಿದರು. ಸಲ್ಮಾನ್ ಖಾನ್ ಅವರು ಡಿಲೀಟ್ ಮಾಡಿದ್ದನ್ನು ಅಪ್ಪಟ ಅಭಿಮಾನಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಆ ಕಾರಣಕ್ಕಾಗಿ ಸಲ್ಮಾನ್ ಖಾನ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದರಲ್ಲಿ ಅವರ ತಪ್ಪು ಏನಿಲ್ಲ’ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಹೆಸರಿನಲ್ಲಿ ಸಿನಿಮಾ ಘೋಷಣೆ; ನಿರ್ಮಾಪಕರಿಗೆ ಛೀಮಾರಿ

ಕದನ ವಿರಾಮ ಘೋಷಣೆ ಆಗಿರುವುದು ಹಲವು ಸೆಲೆಬ್ರಿಟಿಗಳಿಗೆ ಸಮಾಧಾನ ತಂದಿದೆ. ಕರೀನಾ ಕಪೂರ್, ಕರಣ್ ಜೋಹರ್, ರಮ್ಯಾ ದಿವ್ಯ ಸ್ಪಂದನಾ ಮುಂತಾದ ಸೆಲೆಬ್ರಿಟಿಗಳು ಸರ್ಕಾರಗಳ ನಡೆಯನ್ನು ಪ್ರಶಂಸಿಸಿದ್ದಾರೆ. ಆದರೆ ಆಪರೇಷನ್​ ಸಿಂದೂರ್ ಬಗ್ಗೆ ಮೌನವಾಗಿದ್ದು, ಕದನ ವಿರಾಮದ ಬಗ್ಗೆ ಮಾತ್ರ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ನಡೆಗೆ ಜನರು ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ