ಅಜಯ್ ದೇವಗನ್ ಕುಡಿಯೋ ವಿಸ್ಕಿ ಬೆಲೆ ಎಷ್ಟು? ಆ ದುಡ್ಡಲ್ಲಿ ಒಂದು ಬೈಕ್ ಖರೀದಿಸಬಹುದು
Ajay Devgn: ಅಜಯ್ ದೇವಗನ್ ಬಾಲಿವುಡ್ನ ಸ್ಟಾರ್ ನಟ. ಅನಿಸಿದ್ದನ್ನು ಮಾತನಾಡುವ ಅಜಯ್ ದೇವಗನ್ ಸಂದರ್ಶನಗಳಲ್ಲಿ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ಇತ್ತೀಚೆಗೆ ಅಜಯ್ ದೇವಗನ್ ತಮ್ಮ ಮದ್ಯದ ಚಟದ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಅಜಯ್ ದೇವಗನ್ ಕುಡಿಯುವ ಮದ್ಯದ ಬೆಲೆಗೆ ಒಂದು ಬೈಕ್ ಖರೀದಿ ಮಾಡಬಹುದು.

ನಟ ಅಜಯ್ ದೇವಗನ್ (Ajay Devgn) ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡವರು. ಅವರು ವಿಎಫ್ಎಕ್ಸ್ ಸ್ಟುಡಿಯೋ, ಸಿನಿಮಾ ಚೈನ್ಸ್ ಹೊಂದಿದ್ದಾರೆ. ಹಲವು ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರು ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ. ಅಜಯ್ ದೇವಗನ್ ಅವರು ಇತ್ತೀಚೆಗೆ ತಮ್ಮ ವಿಸ್ಕಿ ಕುಡಿಯೋ ಹವ್ಯಾಸದ ಬಗ್ಗೆ ಮಾತನಾಡಿದ್ದಾರೆ. ಅವರು ಗ್ಲೆಂಜೋರ್ನೀಸ್ ಕಂಪನಿಯ 1,200 ಲಿಮಿಟೆಡ್ ಎಡಿಷನ್ ವಿಸ್ಕಿ ಖರೀದಿ ಮಾಡಿದ್ದಾರೆ. ಇದರ ಬೆಲೆ ಕೇಳಿದರೆ ಅನೇಕರಿಗೆ ಅಚ್ಚರಿ ಆಗೋದು ಗ್ಯಾರಂಟಿ.
ಅಜಯ್ ದೇವಗನ್ ಅವರಿಗೆ ಮದ್ಯದ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ತುಂಬಾನೇ ಪ್ರೀತಿಯಿಂದ ವಿಸ್ಕಿ ಕುಡಿಯುತ್ತಾರೆ. 18ನೇ ವಯಸ್ಸಿನಿಂದ ಅವರು ಕುಡಿಯೋ ಹವ್ಯಾಸ ಬೆಳೆಸಿಕೊಂಡಿದ್ದಾರೆ. ‘ಕಾನೂನುಬದ್ಧವಾಗಿ ಕುಡಿಯಲು ಅರ್ಹತೆ ಪಡೆದಾಗಿನಿಂದ ನಾನು ಮದ್ಯಪಾನವನ್ನು ಆನಂದಿಸುತ್ತಿದ್ದೇನೆ. ನಾನು ದಿನಕ್ಕೆ ಎರಡು ಪೆಗ್ ಕುಡಿಯುತ್ತೇನೆ’ ಎಂದು ಅವರು ಹೇಳಿದ್ದಾರೆ. ಅವರು ಕುಡಿಯೋ ವಿಸ್ಕಿಯ ಒಂದು ಬಾಟಲಿಯ ಬೆಲೆ ಬರೋಬ್ಬರಿ 60 ಸಾವಿರ ರೂಪಾಯಿಗೂ ಅಧಿಕವಾಗಿದೆ. ಇದರಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಬೈಕ್ ಬರುತ್ತದೆ’ ಎಂದು ಅನೇಕರು ಹೇಳಿದ್ದಾರೆ.
ಅಜಯ್ ದೇವಗನ್ ಅವರು ಮೊದಲು ವೋಡ್ಕಾ ಕುಡಿಯುತ್ತಿದ್ದರು. ಆ ಬಳಿಕ ಸಿಂಗಲ್ ಮಾಲ್ಟ್ ವಿಸ್ಕಿ ಸೇವನೆ ಮಾಡಲು ಶುರು ಮಾಡಿದರು. ಒಮ್ಮೆ ಸ್ಕಾಟ್ಲೆಂಡ್ಗೆ ಹೋದಾಗ ಅವರು ಇದನ್ನು ಸೇವನೆ ಮಾಡಿದರು. ಅಲ್ಲಿಂದ ಅವರಿಗೆ ಇದರ ಮೇಲೆ ಆಸಕ್ತಿ ಬೆಳೆಯಿತು.
ಇದನ್ನೂ ಓದಿ: ರಚಿತಾ ರಾಮ್ ಸಿನಿಮಾ ಜರ್ನಿಗೆ 12 ವರ್ಷ; ಫ್ಯಾನ್ಸ್ ಸಂಭ್ರಮ
ಅಜಯ್ ದೇವಗನ್ ಅವರ ನಟನೆಯ ‘ರೇಡ್ 3’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರದ ಮೂಲಕ ಅಜಯ್ ದೇವಗನ್ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರದಲ್ಲಿ ಅಜಯ್ ಅವರು ಐಟಿ ಅಧಿಕಾರಿಯ ಪಾತ್ರ ಮಾಡಿದ್ದಾರೆ. ರಿತೇಷ್ ದೇಶ್ಮುಖ್ ಅವರು ಭ್ರಷ್ಟ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಅಜಯ್ ದೇವಗನ್ ಅವರು ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಅವರನ್ನು ಟ್ರೋಲ್ ಮಾಡಲಾಗಿತ್ತು. ಆದರೆ, ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿರಲೇ ಇಲ್ಲ. ಅಜಯ್ ದೇವಗನ್ ಮನೆಯ ಕಸದ ಬುಟ್ಟಿಯಲ್ಲಿ ವಿಮಲ್ ಸಿಕ್ಕಿತ್ತು ಎಂದು ಹೇಳಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 11 May 25



