AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್​ಲಾಲ್ ತಂತ್ರದಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಅಜಯ್ ದೇವಗನ್

Drishyam 3: ‘ದೃಶ್ಯಂ’ ಸಿನಿಮಾ ಭಾರತದ ಟಾಪ್ ಕ್ರೈಂ ಥ್ರಿಲ್ಲರ್ ಸಿನಿಮಾ. ಈ ಸಿನಿಮಾ ಸರಣಿಗೆ ಅದರದ್ದೇ ಆದ ಅಭಿಮಾನಿ ವರ್ಗವೇ ಇದೆ. ‘ದೃಶ್ಯಂ’ ಸಿನಿಮಾ ಏಳು ಭಾಷೆಗೆ ರೀಮೇಕ್ ಆಗಿತ್ತು. ‘ದೃಶ್ಯಂ 2’ ಹಿಂದಿಗೆ ಮಾತ್ರವೇ ರೀಮೇಕ್ ಆಗಿತ್ತು. ಆದರೆ ಈಗ ‘ದೃಶ್ಯಂ 3’ ಬರಲಿದ್ದು, ಮೋಹನ್​ಲಾಲ್ ತೆಗೆದುಕೊಂಡಿರುವ ನಿರ್ಣಯ ‘ದೃಶ್ಯಂ’ ಹಿಂದಿ ರೀಮೇಕ್​ನಲ್ಲಿ ನಟಿಸುತ್ತಾ ಬಂದಿರುವ ಅಜಯ್ ದೇವಗನ್​ಗೆ ಸಮಸ್ಯೆ ನೀಡುತ್ತಿದೆ.

ಮೋಹನ್​ಲಾಲ್ ತಂತ್ರದಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಅಜಯ್ ದೇವಗನ್
Ajay Drishyam
Follow us
ಮಂಜುನಾಥ ಸಿ.
|

Updated on:Apr 20, 2025 | 7:44 PM

‘ದೃಶ್ಯಂ’ ಸಿನಿಮಾ ಭಾರತದ ನಂಬರ್ 1 ಕ್ರೈಂ ಥ್ರಿಲ್ಲರ್ ಸಿನಿಮಾ. ಮಲಯಾಳಂನ (Malayalam) ಈ ಸಿನಿಮಾ ಸುಮಾರು ಏಳು ಭಾಷೆಗಳಿಗೆ ರೀಮೇಕ್ ಆಗಿದೆ. ರೀಮೇಕ್ ಆದ ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿದೆ. ಹಿಂದಿಯಲ್ಲಿ ಈ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸಿದ್ದು ಅಲ್ಲಿಯೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಆದರೆ ಮಲಯಾಳಂನ ‘ದೃಶ್ಯಂ 2’ ಸಿನಿಮಾ ರೀಮೇಕ್ ಆಗಿದ್ದು ಹಿಂದಿಗೆ ಮಾತ್ರ, ಹಿಂದಿಯಲ್ಲಿ ಆ ಸಿನಿಮಾ ಸೂಪರ್ ಹಿಟ್ ಆಯ್ತು. ಆದರೆ ಈಗ ‘ದೃಶ್ಯಂ 3’ ಸಿನಿಮಾ ಅಜಯ್ ದೇವಗನ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

‘ದೃಶ್ಯಂ’ ಸಿನಿಮಾ ಸರಣಿಯನ್ನು ಜೀತು ಜೋಸೆಫ್ ನಿರ್ದೇಶನ ಮಾಡುತ್ತಾ ಬರುತ್ತಿದ್ದಾರೆ. ಮೊದಲ ಹಾಗೂ ಎರಡನೇ ಸಿನಿಮಾವನ್ನು ಅವರೇ ನಿರ್ದೇಶಿಸಿದ್ದು ಮೋಹನ್​ಲಾಲ್ ನಾಯಕನಾಗಿ ನಟಿಸುವ ಜೊತೆಗೆ ಅವರ ಆಪ್ತ ಪೆರಂಬವೂರು ಇಂದ ಬಂಡವಾಳ ಹಾಕಿಸಿದ್ದರು. ಎರಡೂ ಸಿನಿಮಾಗಳು ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಇದೇ ಕಾರಣಕ್ಕೆ ಅಜಯ್ ದೇವಗನ್ ಅವರು ‘ದೃಶ್ಯಂ’ ಸಿನಿಮಾಗಳನ್ನು ಅದೇ ಹೆಸರಿನಲ್ಲಿ ಹಿಂದಿಗೆ ರೀಮೇಕ್ ಮಾಡಿ, ಮೂಲ ಸಿನಿಮಾಕ್ಕಿಂತಲೂ ಹೆಚ್ಚು ಹಣ ಗಳಿಸುತ್ತಿದ್ದರು.

ಆದರೆ ಈಗ ಮೋಹನ್​ಲಾಲ್ ‘ದೃಶ್ಯಂ 3’ ಸಿನಿಮಾ ಬಗ್ಗೆ ದಿಟ್ಟ ನಿರ್ಧಾರ ಮಾಡಿದ್ದಾರೆ. ‘ದೃಶ್ಯಂ 3’ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾಡಲು ಮುಂದಾಗಿದ್ದಾರೆ. ಇದು ಅಜಯ್ ದೇವಗನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ಮೋಹನ್​ಲಾಲ್​ರ ‘ದೃಶ್ಯಂ 3’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಬಿಡುಗಡೆ ಆದರೆ ಹಿಂದಿ ಪ್ರದೇಶದ ಜನರು ಮೋಹನ್​ಲಾಲ್​ರ ಮೂಲ ಸಿನಿಮಾವನ್ನು ಹಿಂದಿಯಲ್ಲಿ ನೋಡಬಹುದಾಗಿದೆ. ಆಗ ಅಜಯ್ ದೇವಗನ್ ಹಿಂದಿಯಲ್ಲಿ ರೀಮೇಕ್ ಮಾಡಿದರೆ ಅವರ ಸಿನಿಮಾಕ್ಕೆ ಪ್ರೇಕ್ಷಕರ ಕೊರತೆ ಎದುರಾಗಬಹುದು.

ಇದನ್ನೂ ಓದಿ:‘ಎಂಪುರಾನ್’ ಗೆಲ್ಲುತ್ತಿದ್ದಂತೆ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ ಮೋಹನ್​ಲಾಲ್

‘ದೃಶ್ಯಂ 3’ ಸಿನಿಮಾ ಅನ್ನು ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಸಿನಿಮಾದ ಮೂಲ ನಿರ್ದೇಶಕರಾದ ಜೀತು ಜೋಸೆಫ್ ಅವರೇ ‘ದೃಶ್ಯಂ 3’ ಎರಡೂ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ. ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಇದೇ ವರ್ಷ ಆರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Sun, 20 April 25