India vs England: ಟಾರ್ಗೆಟ್ ಎಷ್ಟೇ ದೊಡ್ಡದಿದ್ದರು ನಾವು ಹೆದುರುವುದಿಲ್ಲ! 3ನೇ ಪಂದ್ಯಕ್ಕೂ ಮುನ್ನ ಸ್ಟೋಕ್ಸ್ ಈ ರೀತಿ ಹೇಳಿದ್ಯಾಕೆ?
India vs England: ನಿಜ ಹೇಳಬೇಕೆಂದರೆ, ನಾವು ಯಾವುದೇ ಬೃಹತ್ ಟಾರ್ಗೆಟ್ಗೂ ಹೆದರುವುದಿಲ್ಲ. ನಾವು ಯಾವಾಗಲೂ ಸಕಾರಾತ್ಮಕ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೇವೆ.
ಪುಣೆ: ಟೀಂ ಇಂಡಿಯಾದೆದುರು ಮೊದಲ ಏಕದಿನ ಪಂದ್ಯದ ಸೋಲಿನ ನಂತರ, ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಮತ್ತೆ ತಮ್ಮ ಗೆಲುವಿನ ಲಯಕ್ಕೆ ಮರಳಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ತಂಡದ ನಿರ್ಭಯತೆ ನೆರವಾಗಿದೆ ಎಂದು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಶುಕ್ರವಾರ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಟೋಕ್ಸ್ 52 ಎಸೆತಗಳಲ್ಲಿ ಇತಿಹಾಸದಲ್ಲೇ ಅತಿ ವೇಗದ 99 ರನ್ ಗಳಿಸಿ ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳ ಜಯವನ್ನು ತಂದಿತ್ತರು. ಭಾರತ ಇಂಗ್ಲೆಂಡ್‌ಗೆ 337 ರನ್‌ಗಳ ಗುರಿ ನೀಡಿತು. ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್‌ನೊಂದಿಗೆ ಎರಡನೇ ವಿಕೆಟ್‌ಗೆ 175 ರನ್‌ಗಳ ದೊಡ್ಡ ಪಾಲುದಾರಿಕೆ ಮಾಡಿದರು ಮತ್ತು ಟೀಮ್ ಇಂಡಿಯಾ ಬೌಲರ್‌ಗಳನ್ನು ತೀವ್ರವಾಗಿ ದಂಡಿಸಿದರು.
ನಾವು ಹೆದರುವುದಿಲ್ಲ ಎಂದ ಬೆನ್ ಸ್ಟೋಕ್ಸ್ ಪಂದ್ಯದ ನಂತರ ಮಾತಾನಾಡಿದ ಸ್ಟೋಕ್ಸ್, ಮೊದಲ ಪಂದ್ಯಕ್ಕೆ ಹೋಲಿಸಿದರೆ ಇದು ಉತ್ತಮ ವಿಕೆಟ್ ಆಗಿದೆ. ಕಳೆದ ಕೆಲವು ವರ್ಷಗಳಿಂದ ನಾವು ದೊಡ್ಡ ಸ್ಕೋರ್ ಗಳಿಸಿದ್ದೇವೆ ಮತ್ತು ದೊಡ್ಡ ಟಾರ್ಗೆಟನ್ನು ಸಹ ಬೆನ್ನಟ್ಟಿದ್ದೇವೆ. ನಿಜ ಹೇಳಬೇಕೆಂದರೆ, ನಾವು ಯಾವುದೇ ಬೃಹತ್ ಟಾರ್ಗೆಟ್ಗೂ ಹೆದರುವುದಿಲ್ಲ. ನಾವು ಯಾವಾಗಲೂ ಸಕಾರಾತ್ಮಕ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೇವೆ.
ಜೊತೆಗೆ ನಾವು ಯಾವಾಗಲೂ ತಂಡದ ಆಟಗಾರರನ್ನು ಪ್ರೋತ್ಸಾಹಿಸುತ್ತೇವೆ. ನಮ್ಮ ತಂಡದ ಒಂದು ಒಳ್ಳೆಯ ಬೆಳವೆಣಿಗೆ ಎಂದರೆ, ನಾವು ಎಂದಿಗೂ ನಾವು ನಮ್ಮ ಮನೋಭಾವದಿಂದ ವಿಮುಖರಾಗುವುದಿಲ್ಲ. ಮೊದಲ ಏಕದಿನ ಪಂದ್ಯದ ಸೋಲಿನ ನಂತರ ನಾವು ನಿರಾಶೆಗೊಂಡಿದ್ದೇವು. ಆದರೆ 2ನೇ ಪಂದ್ಯದಲ್ಲಿ ಭಾರತದ ದೊಡ್ಡ ಸ್ಕೋರ್ ನಂತರವೂ, ಇಂದು ನಾವು ಸುಲಭ ಗೆಲುವು ದಾಖಲಿಸಲು ಸಂತೋಷಪಡುತ್ತೇವೆ ಎಂದರು.
ಬೈರ್ಸ್ಟೋವ್ ಬಿರುಗಾಳಿ.. ಸ್ಟೋಕ್ಸ್ ಸುಂಟರಗಾಳಿ! 99 ರನ್ ಗಳಿಸಿದ ಸ್ಟೋಕ್ಸ್ ಅವರ ಇನ್ನಿಂಗ್ಸ್‌ನಲ್ಲಿ 10 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. 337ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ಗೆ, ಜೇಸನ್ ರಾಯ್ ಮತ್ತು ಜಾನಿ ಬೈರ್ಸ್ಟೋವ್ 110ರನ್ಗಳ ಜೊತೆಯಾಟದ ಕೊಡುಗೆ ನೀಡಿದ್ರು. ಜೇಸನ್ ರಾಯ್ 55ರನ್ ಗಳಿಸಿದ್ರೆ, ಬೈರ್ಸ್ಟೋವ್ 124ರನ್ ಗಳಿಸೋದ್ರೊಂದಿಗೆ ತಂಡದ ಗೆಲುವನ್ನ ಕನ್ಫರ್ಮ್ ಮಾಡಿದ್ರು. ಇನ್ನು ಬೆನ್ ಸ್ಟೋಕ್ಸ್ 99ರನ್ ಗಳಿಸಿ ಶತಕವನ್ನ ಮಿಸ್ ಮಾಡಿಕೊಂಡ್ರು. ಈ ಮೂಲಕ ಇಂಗ್ಲೆಂಡ್, 43.3ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
Published On - 4:36 pm, Sat, 27 March 21