India vs England: ಸ್ಟೋಕ್ಸ್ ಔಟಿದ್ದರೂ, ನಾಟ್‌ಔಟ್! ಆನ್-ಫೀಲ್ಡ್ ಅಂಪೈರ್ ಮುಂದೆ ಕೊಹ್ಲಿಯ ಮೂಕ ರೋಧನೆ ವ್ಯರ್ಥ.. ವಿಡಿಯೋ ನೋಡಿ
India vs England: ಟೀಮ್ ಇಂಡಿಯಾ ಆಟಗಾರರ ಮನವಿ ಮೇರೆಗೆ ರನ್‌ಔಟ್ ಪರಿಶೀಲಿಸಲು ಆನ್‌ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ನೆರವು ತೆಗೆದುಕೊಂಡರು. ಟಲಿವಿಷನ್ ರೀ-ಪ್ಲೇಗಳಲ್ಲಿ ಸ್ಟೋಕ್ಸ್ ಗೆರೆ ದಾಟದೇ ಇರುವುದು ಸ್ಪಷ್ಟವಾಗಿತ್ತು.
ಪುಣೆ: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆರು ವಿಕೆಟ್ ಸೋಲು ಅನುಭವಿಸಿತು. ಜಾನಿ ಬೈರ್‌ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ಅವರ ಅಬ್ಬರದ ಆಟದಿಂದಾಗಿ ಇಂಗ್ಲೆಂಡ್ ತಂಡ 337 ರನ್ಗಳ ಗುರಿಯನ್ನು ತುಂಬಾ ಸುಲಭವಾಗಿ ತಲುಪಿತು. ಬೈರ್‌ಸ್ಟೋವ್ ಶತಕ ಮತ್ತು ಸ್ಟೋಕ್ಸ್ 99 ರನ್ ಗಳಿಸಿದರು. ಇಂಗ್ಲೆಂಡ್ ಆಲ್‌ರೌಂಡರ್ ಕೇವಲ 52 ಎಸೆತಗಳಲ್ಲಿ ಈ ಇನ್ನಿಂಗ್ಸ್ ಆಡಿದ್ದಾರೆ. ಪಂದ್ಯದ ಸಮಯದಲ್ಲಿ ಬೆನ್ ಸ್ಟೋಕ್ಸ್ ಬಹುತೇಕ ರನ್ ಔಟ್ ಆಗಿದ್ದರು. ಆದರೆ ಮೂರನೇ ಅಂಪೈರ್ ಇಂಗ್ಲಿಷ್ ಆಟಗಾರನ ಪರವಾಗಿ ನಿರ್ಧಾರವನ್ನು ನೀಡಿದರು.
ಇದರ ಲಾಭವನ್ನು ಪಡೆದುಕೊಂಡ ಅವರು ಭಾರತದಿಂದ ಪಂದ್ಯವನ್ನು ಕಸಿದುಕೊಂಡರು. ಅಂಪೈರ್ ನಿರ್ಧಾರದಿಂದ ಟೀಂ ಇಂಡಿಯಾ ಅಸಮಾಧಾನಗೊಂಡಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಮೈದಾನದ ಅಂಪೈರ್ ಜೊತೆ ಸಂಭಾಷಣೆಯಲ್ಲಿ ತೊಡಗಿದ್ದು ಕಂಡುಬಂತು. ಆದರೆ, ಆನ್-ಫೀಲ್ಡ್ ಅಂಪೈರ್ ನಿತಿನ್ ಶರ್ಮಾ ಕೊಹ್ಲಿ ಮಾತಿಗೆ ಕ್ಯಾರೆ ಎನ್ನಲಿಲ್ಲ.
ಚೆಂಡನ್ನು ನೇರವಾಗಿ ವಿಕೆಟ್‌ಗೆ ಹೊಡೆದರು ಇನಿಂಗ್ಸ್‌ನ 26ನೇ ಓವರ್‌ನಲ್ಲಿ ಈ ಸಂಪೂರ್ಣ ಘಟನೆ ಸಂಭವಿಸಿತು. ಶಾರ್ದೂಲ್ ಎಸೆತವನ್ನು ಸ್ಟೋಕ್ಸ್ ಬಲವಾಗಿ ಬಾರಿಸಿದರು. ಆದರೆ ಡೀಪ್ ಮಿಡ್‌ವಿಕೆಟ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಕುಲ್ದೀಪ್ ಯಾದವ್ ಚೆಂಡನ್ನು ನೇರವಾಗಿ ವಿಕೆಟ್‌ಗೆ ಹೊಡೆದರು. ಟೀಮ್ ಇಂಡಿಯಾ ಆಟಗಾರರ ಮನವಿ ಮೇರೆಗೆ ರನ್‌ಔಟ್ ಪರಿಶೀಲಿಸಲು ಆನ್‌ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ನೆರವು ತೆಗೆದುಕೊಂಡರು. ಟಲಿವಿಷನ್ ರೀ-ಪ್ಲೇಗಳಲ್ಲಿ ಸ್ಟೋಕ್ಸ್ ಗೆರೆ ದಾಟದೇ ಇರುವುದು ಸ್ಪಷ್ಟವಾಗಿತ್ತು. ಆದರೆ ಮೂರನೇ ಅಂಪೈರ್ ನಾಟ್‌ಔಟ್ ಎಂದೇ ಸೂಚಿಸಿದರು.
ನಾಟ್‌ಔಟ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಕ್ರಿಕೆಟ್ ಪ್ರಿಯರು ಹಾಗೂ ಕ್ರಿಕೆಟ್ ಪಂಡಿತರು ಅಂಪೈರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಚ್ ಔಟ್ ವಿಚಾರದಲ್ಲೂ ಮೂರನೇ ಅಂಪೈರ್ ಇಂಥದ್ದೇ ಎಡವಟ್ಟು ಮಾಡಿದ್ದರು. ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈಗ ಏಕದಿನ ಸರಣಿಯಲ್ಲೂ ಮೂರನೇ ಅಂಪೈರ್‌ಗಳ ಪ್ರಮಾದ ಮುಂದುವರಿದಿದೆ.
ಅಂಪೈರ್, ಕೊಹ್ಲಿಗೆ ಬೆಲೆ ನೀಡಲಿಲ್ಲ ಬೆನ್ ಸ್ಟೋಕ್ಸ್ ಔಟ್ ಆಗದಿದ್ದನ್ನು ಭಾರತೀಯ ಆಟಗಾರರು ಒಪ್ಪಲಿಲ್ಲ. ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರತ್ತ ಸಾಗಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರೀಸ್ ಬಳಿ ಕುಳಿತು ಬ್ಯಾಟ್ ಎಲ್ಲಿದೆ ಎಂದು ಹೇಳಲು ಪ್ರಾರಂಭಿಸಿದರು. ಆದರೆ ನಿತಿನ್ ಮೆನನ್, ಕೊಹ್ಲಿ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಇದನ್ನು ನೋಡಿ ಕೊಹ್ಲಿಗೆ ಆಶ್ಚರ್ಯವಾದರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಈ ಘಟನೆಯನ್ನು ನೋಡಿ ಕಾಮೆಂಟೆಟರ್ ಕೂಡ ನಕ್ಕರು.
lol Menon has no fvcks to give pic.twitter.com/NIEsbIfklD
— jd (@j_dhillon7) March 26, 2021