AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs SL: ಸೂಪರ್ 8 ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ ಎರಡಂಕಿ ಮೊತ್ತಕ್ಕೆ ಶ್ರೀಲಂಕಾ ಆಲೌಟ್

T20 World Cup Super 8: 2026ರ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 51 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. 147 ರನ್‌ಗಳ ಗುರಿ ಬೆನ್ನತ್ತಿದ ಲಂಕಾ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಸತತ 12ನೇ ಟಿ20 ಪಂದ್ಯವನ್ನು ಗೆದ್ದುಕೊಂಡಿತು. ಶ್ರೀಲಂಕಾದ ಬ್ಯಾಟಿಂಗ್ ಕುಸಿತವು ಪಂದ್ಯದ ಸೋಲಿಗೆ ಮುಖ್ಯ ಕಾರಣವಾಯಿತು, ಇದರಿಂದಾಗಿ ಅವರ ಮುಂದಿನ ಹಾದಿ ಕಷ್ಟಕರವಾಗಿದೆ.

ENG vs SL: ಸೂಪರ್ 8 ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ ಎರಡಂಕಿ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Eng Vs Sl
ಪೃಥ್ವಿಶಂಕರ
|

Updated on:Feb 22, 2026 | 7:29 PM

Share

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಸತತ ಮೂರು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದುಕೊಂಡಿದ್ದ ಟೂರ್ನಮೆಂಟ್‌ನ ಸಹ-ಆತಿಥೇಯ ಶ್ರೀಲಂಕಾ ಇದೀಗ ಸತತ ಎರಡನೇ ಸೋಲಿನ ಆಘಾತಕ್ಕೀಡಾಗಿದೆ. ತನ್ನ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾ, ಇದೀಗ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ (Sri Lanka vs England) ವಿರುದ್ಧ 51 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ. ಗೆಲುವಿಗೆ 147 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ, 100 ರನ್‌ ಗಳಿಸಲು ಸಾಧ್ಯವಾಗದೆ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್, ಶ್ರೀಲಂಕಾ ವಿರುದ್ಧ ಸತತ 12 ನೇ ಟಿ20ಪಂದ್ಯ ಗೆದ್ದು ಸೂಪರ್ 8 ರ ಗುಂಪು 2 ರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಇಂಗ್ಲೆಂಡ್​ಗೆ ಸಾಲ್ಟ್ ಆಸರೆ

ಪಲ್ಲೆಕೆಲೆಯಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇಂಗ್ಲೆಂಡ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆದಾಗ್ಯೂ, ಆರಂಭಿಕ ಆಟಗಾರ ಫಿಲ್ ಸಾಲ್ಟ್ ಏಕಾಂಗಿ ಹೋರಾಟ ನೀಡಿ 36 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದರ ಜೊತೆಗೆ 14 ಓವರ್‌ಗಳಲ್ಲಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು.

ಸಾಲ್ಟ್ ಜೊತೆಗೆ ವಿಲ್ ಜ್ಯಾಕ್ಸ್ ಕೂಡ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ 14 ಎಸೆತಗಳಲ್ಲಿ 21 ರನ್ ಗಳಿಸಿ ತಂಡವನ್ನು 146ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಶ್ರೀಲಂಕಾ ಪರ, ಯುವ ಸ್ಪಿನ್ನರ್ ಡುನಿತ್ ವೆಲ್ಲಾಲಗೆ ಮೂರು ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಮಹೇಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ ತಲಾ ಎರಡು ವಿಕೆಟ್ ಪಡೆದರು.

ಲಂಕಾ ಬ್ಯಾಟಿಂಗ್ ವೈಫಲ್ಯ

ಹಿಂದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾ ಈ ಪಂದ್ಯದಲ್ಲಿ ಪುಟಿದೇಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪವರ್‌ಪ್ಲೇನಲ್ಲಿ ಕೇವಲ 35 ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ತಂಡದ ಸೋಲು ಆರಂಭದಲ್ಲೇ ಖಚಿತವಾಯಿತು. ಫಾರ್ಮ್‌ನಲ್ಲಿರುವ ಪಾಥಮ್ ನಿಸ್ಸಂಕಾ ಸೇರಿದಂತೆ ಮೊದಲ ನಾಲ್ವರು ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಸ್ಕೋರ್‌ಗೆ ಔಟಾದರು.

IND vs SA T20 WC Live Score: ಆಫ್ರಿಕಾ 3ನೇ ವಿಕೆಟ್ ಪತನ

ಶ್ರೀಲಂಕಾವನ್ನು ಒತ್ತಡಕ್ಕೆ ತಳ್ಳುವಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ವಿಲ್ ಜ್ಯಾಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಪ್ರಮುಖ ಪಾತ್ರ ವಹಿಸಿದರು. ಪವರ್‌ಪ್ಲೇ ನಂತರವೂ ತಂಡದ ಸ್ಥಿತಿ ಕಳಪೆಯಾಗಿತ್ತು. ಇದರ ಲಾಭ ಪಡೆದ ಆದಿಲ್ ರಶೀದ್ ಮತ್ತು ಲಿಯಾಮ್ ಡಾಸನ್ ಒಟ್ಟಾಗಿ ಲಂಕಾ ತಂಡದ ಕೆಳ ಕ್ರಮಾಂಕವನ್ನು ಬೇಗನೇ ಪೆವಿಲಿಯನ್​ಗಟ್ಟಿದರು. ಅಂತಿಮವಾಗಿ, ಶ್ರೀಲಂಕಾ ಕೇವಲ 16.4 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ವಿರುದ್ಧ ಸತತ 12 ನೇ ಪಂದ್ಯವನ್ನು ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Sun, 22 February 26