ಸೇನಾ ಆಸ್ಪತ್ರೆಯಿಂದ ಏಮ್ಸ್​​ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೋವಿಂದ್; ಬಾಂಗ್ಲಾದೇಶದಿಂದ ಕರೆ ಮಾಡಿದ ಪ್ರಧಾನಿ ಮೋದಿ​

ಸೇನಾ ಆಸ್ಪತ್ರೆಯಿಂದ ಏಮ್ಸ್​​ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೋವಿಂದ್; ಬಾಂಗ್ಲಾದೇಶದಿಂದ ಕರೆ ಮಾಡಿದ ಪ್ರಧಾನಿ ಮೋದಿ​
ರಾಮನಾಥ ಕೋವಿಂದ್​

ಎರಡುದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದಲೇ ರಾಮನಾಥ ಕೋವಿಂದ್ ಪುತ್ರನಿಗೆ ಕರೆ ಮಾಡಿ ಮಾತನಾಡಿದ್ದಾರೆ.

Lakshmi Hegde

|

Mar 27, 2021 | 3:21 PM

ನವದೆಹಲಿ: ಎದೆನೋವಿನಿಂದ ಆರ್ಮಿ ರಿಸರ್ಚ್​ ಆ್ಯಂಡ್​ ರೆಫರೆಲ್​ ಆಸ್ಪತ್ರೆಗೆ ದಾಖಲಾಗಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನು ಈಗ ದೆಹಲಿಯ ಏಮ್ಸ್​ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಸೈನ್ಸ್ )ಆಸ್ಪತ್ರೆಗೆ ದಾಖಲಾಗಿದೆ. ರಾಮನಾಥ ಕೋವಿಂದ ಅವರಿಗೆ ನಿನ್ನೆ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆರ್ಮಿ ಆಸ್ಪತ್ರೆಗೆ ಸೇರಿಸಿ, ಅಬ್ಸರ್ವೇಶನ್​ನಲ್ಲಿ ಇಡಲಾಗಿತ್ತು.

ರಾಷ್ಟ್ರಪತಿ ಆರೋಗ್ಯದ ಬಗ್ಗೆ ಸೇನಾ ಆಸ್ಪತ್ರೆ ಇಂದು ಮಾಹಿತಿ ನೀಡಿದ್ದು, ಆರೋಗ್ಯ ಸ್ಥಿರವಾಗಿದೆ. ಆದರೆ ಇನ್ನೂ ಕೆಲವು ತಪಾಸಣೆಗಳನ್ನು ಮಾಡಬೇಕಾಗಿರುವುದರಿಂದ ಏಮ್ಸ್​ಗೆ ಕಳಿಸಲಾಗಿದೆ ಎಂದು ತಿಳಿಸಿದೆ. ಇನ್ನು ರಾಮನಾಥ ಕೋವಿಂದ್​ ಅವರಿಗೆ ಎಲ್ಲ ರೀತಿಯ ವೈದ್ಯಕೀಯ ತಪಾಸಣೆಗಳನ್ನೂ ಮಾಡಲಾಗುತ್ತಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ, ಹಾರೈಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಟ್ವೀಟ್ ಮಾಡಿದೆ.

ಎರಡುದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದಲೇ, ರಾಮನಾಥ ಕೋವಿಂದ್​ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಅವರ ಪುತ್ರನೊಂದಿಗೆ ಮಾತನಾಡಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಇದನ್ನೂ ಓದಿ: World Theatre Day : ದಾರಿ ಬಿಡಿ! ‘ರಂಗರಥ’ ನಿಮ್ಮ ಮಕ್ಕಳಿಗಾಗಿ ಮನೆಗೇ ಬರಲಿದೆ…

ದಾದ್ರಿ ಗುಂಪು ಹತ್ಯೆ ಪ್ರಕರಣ; 5 ವರ್ಷಗಳ ನಂತರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್-ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸನೇನಾ?

Follow us on

Related Stories

Most Read Stories

Click on your DTH Provider to Add TV9 Kannada