Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತರಾಗಿ 10ವರ್ಷಗಳೇ ಕಳೆದಿದ್ದರೂ ತಮಿಳುನಾಡಿನ ಕೆಲವು ರಾಜಕೀಯ ಪಕ್ಷಗಳ ಚುನಾವಣಾ ಐಕಾನ್​ ಆಗಿದ್ದಾರೆ ಎಲ್​ಟಿಟಿಇ ಸಂಸ್ಥಾಪಕ ಪ್ರಭಾಕರನ್​

ಶ್ರೀಲಂಕಾದ ಉತ್ತರ ಭಾಗದಲ್ಲಿ ತಮಿಳಿಗರಿಗಾಗಿಯೇ ಪ್ರತ್ಯೇಕ ರಾಷ್ಟ್ರ ಸ್ಥಾಪನೆಯಾಗಬೇಕು ಎಂಬ ಹೋರಾಟ ಕೈಗೆತ್ತಿಕೊಂಡಿದ್ದ ವೇಲುಪಿಳ್ಳೈ ಪ್ರಭಾಕರನ್​, 1970ರಲ್ಲಿ ಲಿಬರೇಷನ್ ಟೈಗರ್ಸ್​ ಆಫ್​ ತಮಿಳ್​ಈಳಂ (ಎಲ್​ಟಿಟಿಇ) ಸಂಘಟನೆಯನ್ನು ಹುಟ್ಟುಹಾಕಿದ್ದರು. 2009ರಲ್ಲಿ ಶ್ರೀಲಂಕಾ ಸೈನ್ಯ ಇವರನ್ನು ಹತ್ಯೆಗೈದಿದೆ.

ಮೃತರಾಗಿ 10ವರ್ಷಗಳೇ ಕಳೆದಿದ್ದರೂ ತಮಿಳುನಾಡಿನ ಕೆಲವು ರಾಜಕೀಯ ಪಕ್ಷಗಳ ಚುನಾವಣಾ ಐಕಾನ್​ ಆಗಿದ್ದಾರೆ ಎಲ್​ಟಿಟಿಇ ಸಂಸ್ಥಾಪಕ ಪ್ರಭಾಕರನ್​
ಎಲ್​​ಟಿಟಿಇ ಸಂಸ್ಥಾಪಕ ಪ್ರಭಾಕರನ್​ ಫೋಟೋ ಇರುವ ಶರ್ಟ್ ಹಾಕಿ ಮತ ಪ್ರಚಾರ
Follow us
Lakshmi Hegde
|

Updated on: Mar 27, 2021 | 4:20 PM

ಚೆನ್ನೈ: ಹತ್ಯೆಗೀಡಾಗಿ ದಶಕವೇ ಕಳೆದರೂ ಎಲ್​ಟಿಟಿಇ (ಲಿಬರೇಷನ್ ಟೈಗರ್ಸ್​ ಆಫ್​ ತಮಿಳ್​ಈಳಂ) ಸಂಸ್ಥಾಪಕ ವೇಲುಪಿಳ್ಳೈ ಪ್ರಭಾಕರನ್​ ತಮಿಳುನಾಡಿನಲ್ಲಿ ಅನೇಕರ ಪಾಲಿಗೆ ಜೀವಂತವಾಗಿಯೇ ಇದ್ದಾರೆ. ತಮಿಳುನಾಡಿನ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲಿ ಅಲ್ಲಿನ ಹಲವು ರಾಜಕೀಯ ಪಕ್ಷಗಳು, ಯುವಕರ ಮತ ಸೆಳೆಯಲು, ಅವರಲ್ಲಿ ಚುನಾವಣೆ ಬಗ್ಗೆ ಉತ್ಸಾಹ ತುಂಬಲು ಪ್ರಭಾಕರನ್​ ಫೋಟೋಗಳನ್ನು, ಕಟೌಟ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವೈಕೋ ಅವರ ಎಂಡಿಎಂಕೆ, ಥೋಲ್ ತಿರುಮಾವಾಲವನ್ ಪಕ್ಷವಾದ ವಿಸಿಕೆ, ಸೀಮನ್​ರ ಎನ್​ಟಿಕೆ, ರಾಮದಾಸ್​ರ ಪಿಎಂಕೆ ಮತ್ತು ಟಿ.ವೇಲಮುರುಗನ್​​ ಅವರ ಟಿವಿಕೆ ಪಕ್ಷಗಳ ಮತ ಪ್ರಚಾರದ ವೇಳೆ ಎಲ್​ಟಿಟಿಇ ಸಂಸ್ಥಾಪಕ ಪ್ರಭಾಕರನ್​ ಕೌಟೌಟ್​ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮದ್ರಾಸ್ ಯೂನಿರ್ವಸಿಟಿಯ ಪೊಲಿಟಿಕಲ್​ ಸೈನ್ಸ್​ ವಿಭಾಗದ ರಾಮು ಮಣಿವಣ್ಣನ್​, ತಮಿಳಿಗರ ಹಂಬಲಗಳಿಗೆ ಪ್ರತಿನಿಧಿಯಂತಿದ್ದವರು ಪ್ರಭಾಕರನ್​. ಇಲ್ಲಿನ ರಾಜಕೀಯದಲ್ಲಿ ಅವರು ಇಂದಿಗೂ ಪ್ರಸ್ತುತ. ಹಾಗೇ ಅದೆಷ್ಟೋ ಯುವಕರ ಬಹುದೊಡ್ಡ ಆಕರ್ಷಣೆ. ಹಾಗಾಗಿ ಕೆಲವು ರಾಜಕೀಯ ಪಕ್ಷಗಳು ಪ್ರಭಾಕರನ್​ ಪೋಸ್ಟರ್​ಗಳನ್ನು ಬಳಸುವ ಮೂಲಕ, ಒಗ್ಗಟ್ಟು ಪ್ರದರ್ಶಿಸುತ್ತಿವೆ ಎಂದು ಹೇಳಿದ್ದಾರೆ.

ಎನ್​ಟಿಕೆ ಪ್ರಧಾನ ಕಚೇರಿ ಕಾರ್ಯದರ್ಶಿ ಕೆ.ಸೆಂಥಿಲ್ ಕುಮಾರ್​ ಮಾತನಾಡಿ, ನಮ್ಮ ಪಕ್ಷದ ನೆಲೆ ಪ್ರಭಾಕರನ್​ ಸುತ್ತ ಸುತ್ತುತ್ತದೆ. ನಮ್ಮ ಪಕ್ಷದತ್ತ ಇಂದಿಗೂ ಅದೆಷ್ಟೋ ಯುವಕರು ಆಕರ್ಷಿತರಾಗಲು ಪ್ರಭಾಕರನ್ ಕಾರಣ. ಅವರೇ ನಮ್ಮ ನಾಯಕ. ಅವರ ಬಗ್ಗೆ ನಮಗಿರುವ ಪ್ರೀತಿ, ಗೌರವವನ್ನು ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ತೋರಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ವೈಕೋ ಅವರ ಆಪ್ತರಾದ ಪಿ.ಅರುಣಗಿರಿ ಮಾತನಾಡಿ, 1983ರಿಂದಲೂ ನಮ್ಮ ನಾಯಕರಾದ ವೈಕೋ ಅವರು ಲಂಕಾದ ತಮಿಳರ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಸಮಸ್ಯೆಗಳನ್ನು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಅಲ್ಲದೆ, ಪ್ರಭಾಕರನ್​ ಬಗ್ಗೆ ಪುಸ್ತಕವನ್ನೂ ಬರೆದಿದ್ದು, ಇದಕ್ಕಾಗಿ ಅವರೊಟ್ಟಿಗೆ 23 ದಿನಗಳ ಕಾಲ ವಾಸವಾಗಿದ್ದರು. ಪ್ರಭಾಕರನ್​ ಅವರೊಟ್ಟಿಗಿನ ಎಂಡಿಎಂಕೆ ಸಂಬಂಧ ಚುನಾವಣೆಗೆ ಮಾತ್ರ ಸೀಮಿತವಲ್ಲ ಎಂದು ತಿಳಿಸಿದ್ದಾರೆ.

2009ರಲ್ಲಿ ಪ್ರಭಾಕರನ್​ ಹತ್ಯೆ ಶ್ರೀಲಂಕಾದ ಉತ್ತರ ಭಾಗದಲ್ಲಿ ತಮಿಳಿಗರಿಗಾಗಿಯೇ ಪ್ರತ್ಯೇಕ ರಾಷ್ಟ್ರ ಸ್ಥಾಪನೆಯಾಗಬೇಕು ಎಂಬ ಹೋರಾಟ ಕೈಗೆತ್ತಿಕೊಂಡಿದ್ದ ವೇಲುಪಿಳ್ಳೈ ಪ್ರಭಾಕರನ್​, 1970ರಲ್ಲಿ ಲಿಬರೇಷನ್ ಟೈಗರ್ಸ್​ ಆಫ್​ ತಮಿಳ್​ಈಳಂ (ಎಲ್​ಟಿಟಿಇ) ಸಂಘಟನೆಯನ್ನು ಹುಟ್ಟುಹಾಕಿದ್ದರು. 2009ರಲ್ಲಿ ಶ್ರೀಲಂಕಾ ಸೈನ್ಯ ಇವರನ್ನು ಹತ್ಯೆಗೈದಿದೆ. 1991ರಲ್ಲಿ ರಾಜೀವ್​ ಗಾಂಧಿ ಹತ್ಯೆಯಲ್ಲಿ ಎಲ್​ಟಿಟಿಇ ಪ್ರಮುಖ ಪಾತ್ರ ವಹಿಸಿತ್ತು. ಅದಾದ ಬಳಿಕ ಸಂಘಟನೆಯನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

ಸಿಡಿ ಗ್ಯಾಂಗ್, ಡಿಕೆ ಶಿವಕುಮಾರ್ ಅವರಿಂದ ನಮ್ಮ ಮಗಳ ರಕ್ಷಿಸಿ; ಮಗಳ ಪ್ರಾಣಕ್ಕೇ ಅಪಾಯವಿದೆ: ಎಸ್​ಐಟಿ ಎದುರು ಕಣ್ಣೀರಾದ ಯುವತಿಯ ತಂದೆ-ತಾಯಿ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ