ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಿದ್ದ ನಟ, ರಾಜಕಾರಣಿ ಪರೇಶ್ ರಾವಲ್ಗೆ ಕೊರೊನಾ ಸೋಂಕು..
ಲಸಿಕೆಯನ್ನು ಎರಡು ಹಂತದಲ್ಲಿ ಪಡೆಯಬೇಕು. ಅಂದರೆ ಮೊದಲ ಡೋಸ್ ಪಡೆದ 28 ದಿನಕ್ಕೆ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕು. ಪರೇಶ್ ರಾವಲ್ ಸದ್ಯ ಮೊದಲ ಡೋಸ್ ತೆಗೆದುಕೊಂಡಿದ್ದರು.
ನವದೆಹಲಿ: ನಟ, ರಾಜಕಾರಣಿ ಪರೇಶ್ ರಾವಲ್ ಅವರು ಕೊರೊನಾ ಸೋಂಕಿತರಾಗಿದ್ದಾರೆ. ದುರ್ದೈವವೆಂದರೆ ಇತ್ತೀಚೆಗಷ್ಟೇ ಕೊರೊನಾ ಲಸಿಕೆ ಮೊದಲ ಡೋಸ್ ತೆಗೆದುಕೊಂಡಿದ್ದರು. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಪರೇಶ್, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ತಪಾಸಣೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.
ಪರೇಶ್ ರಾವಲ್ ಮಾರ್ಚ್ 9ರಂದು ಕೊರೊನಾ ವ್ಯಾಕ್ಸಿನ್ನ ಮೊದಲ ಡೋಸ್ ಪಡೆದಿದ್ದರು. ಅಂದು ಲಸಿಕೆ ಪಡೆದಿದ್ದ ರಾವಲ್ ಟ್ವೀಟ್ ಮಾಡಿ, ನಾನಿವತ್ತು ಕೊವಿಡ್ ಲಸಿಕೆ ತೆಗೆದುಕೊಂಡಿದ್ದೇನೆ. ಕೊರೊನಾ ವಿರುದ್ಧ ಮುಂಚೂಣಿಯಲ್ಲಿದ್ದುಕೊಂಡು ಹೋರಾಟ ನಡೆಸಿದ ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ, ವಿಜ್ಞಾನಿಗಳಿಗೆ ಕೃತಜ್ಞತೆಗಳು. ಹಾಗೇ, ಪ್ರಧಾನಿ ನರೇಂದ್ರ ಮೋದಿಯವರಿಗೂ ಧನ್ಯವಾದ ತಿಳಿಸಿದ್ದರು. ಹಾಗೇ, ವ್ಯಾಕ್ಸಿನ್ ಪಡೆದ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು. ಹಾಗೇ, ಪರೇಶ್ ರಾವಲ್ ಪತ್ನಿ ಸ್ವರೂಪ್ ರಾವಲ್ ಕೂಡ ಲಸಿಕೆ ಪಡೆದು, ಫೋಟೋ ಶೇರ್ ಮಾಡಿಕೊಂಡಿದ್ದರು.
ಲಸಿಕೆಯನ್ನು ಎರಡು ಹಂತದಲ್ಲಿ ಪಡೆಯಬೇಕು. ಅಂದರೆ ಮೊದಲ ಡೋಸ್ ಪಡೆದ 28 ದಿನಕ್ಕೆ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕು. ಪರೇಶ್ ರಾವಲ್ ಸದ್ಯ ಮೊದಲ ಡೋಸ್ ತೆಗೆದುಕೊಂಡಿದ್ದರು. ಎರಡನೇ ಡೋಸ್ ಪಡೆಯುವುದಕ್ಕೂ ಮೊದಲೇ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.
Unfortunately, I have tested positive for COVID-19. All those that have come in contact with me in the last 10 days are requested to please get themselves tested.
— Paresh Rawal (@SirPareshRawal) March 26, 2021
V for vaccines. ! Thanks to All the Doctors and Nurses and the front line Health care workers and The Scientists. ?Thanks @narendramodi pic.twitter.com/UC9BSWz0XF
— Paresh Rawal (@SirPareshRawal) March 9, 2021
Follow the leader… I got my #COVID19Vaccine did you? pic.twitter.com/fzOruzzh4R
— Swaroop Rawal (@YoSwaroop) March 6, 2021
ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 62,258 ಮಂದಿಗೆ ಕೊರೊನಾ; 5 ತಿಂಗಳುಗಳಲ್ಲಿ ವರದಿ ಆಗಿರುವ ಅತಿಹೆಚ್ಚು ಪ್ರಕರಣ