AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾದ್ರಿ ಗುಂಪು ಹತ್ಯೆ ಪ್ರಕರಣ; 5 ವರ್ಷಗಳ ನಂತರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್-ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸನೇನಾ?

ಗ್ರೇಟರ್​​ ನೋಯ್ಡಾದ ದಾದ್ರಿಯಲ್ಲಿ 2015ರ ಸೆಪ್ಟೆಂಬರ್​ 28ರಂದು ಮೊಹಮ್ಮದ್ ಅಕ್ಲಾಖ್ (52) ಎಂಬುವರ ಹತ್ಯೆ ನಡೆದಿತ್ತು. ಅಕ್ಲಾಖ್ ಹಾಗೂ ಅವರ ಮಕ್ಕಳು ಮನೆಯಲ್ಲಿ ಗೋ ಹತ್ಯೆ ಮಾಡಿ, ಮಾಂಸ ಶೇಖರಣೆ ಮಾಡುತ್ತಾರೆ ಎಂದು ರೊಚ್ಚಿಗೆದ್ದ ಗುಂಪು ಹಲ್ಲೆ ನಡೆಸಿತ್ತು.

ದಾದ್ರಿ ಗುಂಪು ಹತ್ಯೆ ಪ್ರಕರಣ; 5 ವರ್ಷಗಳ ನಂತರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್-ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸನೇನಾ?
ಮೃತ ಅಕ್ಲಾಖ್​ ಮತ್ತು ಅವರ ಕುಟುಂಬದವರು
Lakshmi Hegde
|

Updated on: Mar 27, 2021 | 2:55 PM

Share

ಐದು ವರ್ಷಗಳ ಹಿಂದೆ ಮೊಹಮ್ಮದ್ ಅಕ್ಲಾಖ್​ ಎಂಬುವರನ್ನು ಗುಂಪು ಹತ್ಯೆ ಮಾಡಿದ ಪ್ರಕರಣದ ವಿಚಾರಣೆಯನ್ನು ಗ್ರೇಟರ್​ ನೋಯ್ಡಾದ ಫಾಸ್ಟ್​ಟ್ರ್ಯಾಕ್ ಕೋರ್ಟ್​ ಕೈಗೆತ್ತಿಕೊಂಡಿದೆ. 2015ರ ಸೆಪ್ಟೆಂಬರ್​​​ 28ರಂದು ನಡೆದಿದ್ದ ಕೊಲೆಯ ವಿಚಾರಣೆ ಬರೋಬ್ಬರಿ 5ವರ್ಷಗಳ ನಂತರ ಅಂದರೆ 2021ರ ಮಾರ್ಚ್​ 25ರಿಂದ ಪ್ರಾರಂಭವಾಗಿದೆ. ಬಹುಶಃ ಈ ಘಟನೆಯನ್ನು ಬಹುತೇಕರು ಮರೆತಿರಬಹುದು. ನ್ಯಾಯ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದ ಕುಟುಂಬದವರೂ ನಿರಾಸೆಯಿಂದ ಮೌನವಾಗಿದ್ದರೇನೋ? ಇದೀಗ ಫಾಸ್ಟ್​ಟ್ರ್ಯಾಕ್​ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದೆ.

ಏನಾಗಿತ್ತು 2015ರಲ್ಲಿ? ಗ್ರೇಟರ್​​ ನೋಯ್ಡಾದ ದಾದ್ರಿಯಲ್ಲಿ 2015ರ ಸೆಪ್ಟೆಂಬರ್​ 28ರಂದು ಮೊಹಮ್ಮದ್ ಅಕ್ಲಾಖ್ (52) ಎಂಬುವರ ಹತ್ಯೆ ನಡೆದಿತ್ತು. ಅಕ್ಲಾಖ್ ಹಾಗೂ ಅವರ ಮಕ್ಕಳು ಮನೆಯಲ್ಲಿ ಗೋ ಹತ್ಯೆ ಮಾಡಿ, ಮಾಂಸ ಶೇಖರಣೆ ಮಾಡುತ್ತಾರೆ. ಗೋಮಾಂಸ ಸೇವನೆ ಮಾಡುತ್ತಾರೆ ಎಂದು ಆರೋಪಿಸಿ, ರೊಚ್ಚಿಗೆದ್ದು ಅಕ್ಲಾಖ್ ಮನೆಯೊಳಗೆ ಗುಂಪೊಂದು ನುಗ್ಗಿತ್ತು. ಅಕ್ಲಾಖ್​ ಹಾಗೂ ಅವರ ಕಿರಿಯ ಪುತ್ರ ದನೀಶ್​ಗೆ ಹಿಗ್ಗಾಮುಗ್ಗಾ ಥಳಿಸಿತ್ತು. ತತ್ಪರಿಣಾಮ ಅಕ್ಲಾಖ್​ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹಾಕಿದ್ದ ಚಾರ್ಜ್​ ಶೀಟ್ ಅನ್ವಯ ಸ್ಥಳೀಯ ಬಿಜೆಪಿ ಮುಖಂಡ ಸಂಜ್​ ರಾಣಾ ಪುತ್ರ ವಿಶಾಲ್ ರಾಣಾ ಪ್ರಮುಖ ಆರೋಪಿಯಾಗಿದ್ದಾರೆ.

ಇಷ್ಟೆಲ್ಲ ಆದರೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಕಾಲವೇ ಕೂಡಿ ಬಂದಿರಲಿಲ್ಲ. ಇನ್ನೇನು ಅರ್ಜಿ ವಿಚಾರಣೆ ಶುರು ಮಾಡಬೇಕು ಎನ್ನುವಷ್ಟರಲ್ಲಿ ಒಂದಿಬ್ಬರು ನ್ಯಾಯಾಧೀಶರೆಲ್ಲ ಟ್ರಾನ್ಸ್​ಫರ್ ಆಗಿದ್ದರು ಎಂದು ಅಕ್ಲಾಖ್​ ಕುಟುಂಬದ ಪರ ವಕೀಲ ಯೂಸುಫ್​ ಸೈಫಿ ತಿಳಿಸಿದ್ದಾರೆ. ಸದ್ಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಏಪ್ರಿಲ್​ 12ಕ್ಕೆ ನಿಗದಿಪಡಿಸಿದೆ. ಈ ಘಟನೆಯಲ್ಲಿ ಅಕ್ಲಾಖ್​ ಮಗಳು ಸಾಹಿಸ್ತಾ, ಪತ್ನಿ ಇಕ್ರಾಮಾನ್​, ಮಗ ದನೀಶ್​ ಮತ್ತು ತಾಯಿ ಅಸ್ಗರಿ ಪ್ರತ್ಯಕ್ಷದರ್ಶಿಗಳು ಎಂದು ಹೇಳಿದ್ದಾರೆ. ಇನ್ನು ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದ ಮಾಂಸವನ್ನು ಪರಿಶೀಲನೆಗೆ ಕಳಿಸಲಾಗಿತ್ತು. ಅದು ಹಸುಗಳದ್ದೇ ಆಗಿತ್ತೋ ಅಥವಾ ಕುರಿಯದ್ದೋ ಎಂಬುದರ ಬಗ್ಗೆ ಸ್ಪಷ್ಟ ವರದಿಯೇ ಇಲ್ಲ ಎಂದೂ ಹೇಳಿದ್ದಾರೆ.

JEE Main 2021: ಜೆಇಇ ಮೇನ್ಸ್​ನಲ್ಲಿ 300ಕ್ಕೆ 300 ಅಂಕ ಪಡೆದ ಮೊದಲ ವಿದ್ಯಾರ್ಥಿನಿ ದೆಹಲಿಯ ಕಾವ್ಯಾ ಚೋಪ್ರಾ

12 ದೇವಾಲಯಗಳಲ್ಲಿ ಗಂಡಸರಿಗೆ ಪ್ರವೇಶ ಇಲ್ಲ, ಅಂತಹ ಮಂದಿರಗಳು ಯಾವುವು?

ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್​ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು..

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ