JEE Main 2021: ಜೆಇಇ ಮೇನ್ಸ್ನಲ್ಲಿ 300ಕ್ಕೆ 300 ಅಂಕ ಪಡೆದ ಮೊದಲ ವಿದ್ಯಾರ್ಥಿನಿ ದೆಹಲಿಯ ಕಾವ್ಯಾ ಚೋಪ್ರಾ
‘ಕಾವ್ಯಾ ಚೋಪ್ರಾಗೆ ಗಣಿತ ಎಂದರೆ ಇಷ್ಟ. ಆಕೆ ಕಂಪ್ಯೂಟರ್ಗಳನ್ನು ಪ್ರೀತಿಸುತ್ತಾಳೆ. ಜೆಇಇ ಅಡ್ವಾನ್ಸ್ನ ನಂತರ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಓದುವ ಇಚ್ಛೆಯನ್ನು ಕಾವ್ಯಾ ಚೋಪ್ರಾ ಹೊಂದಿದ್ದಾರೆ.

ದೆಹಲಿ: 2021ರ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 300ಕ್ಕೆ 300 ಅಂಕಗಳನ್ನು ಪಡೆಯುವ ಮೂಲಕ ದೆಹಲಿ ಮೂಲದ ಕಾವ್ಯ ಚೋಪ್ರಾ ಎಂಬ ವಿದ್ಯಾರ್ಥಿನಿ ಸಾಧನೆ ಮಾಡಿದ್ದಾರೆ. ಈ ಮೂಲಕ ಶೇ 100ರ ಸಾಧನೆ ಮಾಡಿದ ಮೊದಲ ಮಹಿಳಾ ವಿದ್ಯಾರ್ಥಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಶೇ 99.978ರಷ್ಟು ಅಂಕಗಳನ್ನು ಪಡೆದಿದ್ದರೂ ಕಾವ್ಯಾ ಚೋಪ್ರಾ ಇನ್ನೊಮ್ಮೆ ಪರೀಕ್ಷೆ ಬರೆಯುವ ನಿರ್ಧಾರ ಕೈಗೊಂಡಿದ್ದರು. ಅದೇ ಪ್ರಕಾರ ಮಾರ್ಚ್ನಲ್ಲಿ ಇನ್ನೊಮ್ಮೆ ಪರೀಕ್ಷೆ ಬರೆದಿದ್ದರು. 6.19 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದ ಜೆಇಇ ಮೇನ್ಸ್ನಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ 13 ವಿದ್ಯಾರ್ಥಿಗಳಲ್ಲಿ ಕಾವ್ಯಾ ಚೋಪ್ರಾ ಸಹ ಒಬ್ಬರು. (Kavya Chopra Delhi scored 300 out of 300 in JEE Mains 2021)
ದೆಹಲಿಯ ಡಿಪಿಎಸ್ ವಸಂತ್ ಕುಂಜ್ ಕಾಲೇಜಿನ ವಿದ್ಯಾರ್ಥಿನಿಯಾದ ಅವರು ಸಿಬಿಎಸ್ಸಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ 97.6ರಷ್ಟು ಅಂಕ ಪಡೆದಿದ್ದರು. ಚೋಪ್ರಾರ ಶೈಕ್ಷಣಿಕ ಜೀವನಕ್ಕೆ ಜೆಇಇ ಮೇನ್ಸ್ ಪರೀಕ್ಷೆಯ ಫಲಿತಾಂಶ ಇನ್ನೊಂದು ಗರಿಮೆ ಮೂಡಿಸಿದೆ. ಈವರೆಗೂ ಶೈಕ್ಷಣಿಕವಾಗಿ ಇಂತಹ ಹಲವು ಸಾಧನೆ ಮಾಡಿದ್ದಾರೆ ಕಾವ್ಯಾ ಚೋಪ್ರಾ.
ಕಾವ್ಯಾ ಚೋಪ್ರಾರ ತಾಯಿ ಶಿಖಾ ಚೋಪ್ರಾ ಹೇಳುವ ಪ್ರಕಾರ, ‘ಕಾವ್ಯಾ ಚೋಪ್ರಾಗೆ ಗಣಿತ ಎಂದರೆ ಇಷ್ಟ. ಆಕೆ ಕಂಪ್ಯೂಟರ್ಗಳನ್ನು ಪ್ರೀತಿಸುತ್ತಾಳೆ. ಜೆಇಇ ಅಡ್ವಾನ್ಸ್ನ ನಂತರ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಓದುವ ಇಚ್ಛೆಯನ್ನು ಕಾವ್ಯಾ ಚೋಪ್ರಾ ಹೊಂದಿದ್ದಾರೆ. ಕಾವ್ಯಾ ಚೋಪ್ರಾರ ತಂದೆ ಓರ್ವ ಕಂಪ್ಯೂಟರ್ ಎಂಜಿನಿಯರ್. ತಾಯಿ ಗಣಿತ ಶಿಕ್ಷಕಿ. ತಮ್ಮ ಈಗ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಬುದ್ಧಿಮತ್ತೆಗೆ ಸಂಬಂಧಿಸಿದ ಹಲವು ಒಲಂಪಿಯಾಡ್ಗಳಲ್ಲಿ ಸಹ ಕಾವ್ಯಾ ಚೋಪ್ರಾ ತೇರ್ಗಡೆ ಹೊಂದಿದ್ದಾರೆ. 9 ಮತ್ತು 11 ನೇ ತರಗತಿ ಓದುವಾಗಲೇ ಈ ಸಾಧನೆ ಮಾಡಿದ ಕೀರ್ತಿ ಅವರದು. ಫೆಬ್ರವರಿಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎರಡನ್ನೂ ಹೆಚ್ಚು ಓದಿದ್ದ ಅವರಿಗೆ, ಅಂದುಕೊಂಡ ಅಂಕಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ. ಆದರೆ ಮಾರ್ಚ್ನಲ್ಲಿ ರಸಾಯನಶಾಸ್ತ್ರವನ್ನೇ ಹೆಚ್ಚು ಪರಿಣಾಮಕಾರಿಯಾಗಿ ಅಧ್ಯಯನ ನಡೆಸಿದ ಕಾರಣ ನೂರಕ್ಕೆ ನೂರು ಅಂಕಗಳಿಸುವ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಕಾವ್ಯಾ ಚೋಪ್ರಾ.
ಇದನ್ನೂ ಓದಿ: GetCETgo: ಸಿಇಟಿ, ನೀಟ್ ಮತ್ತು ಜೆಇಇ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋಚಿಂಗ್- ʼಗೆಟ್-ಸೆಟ್ ಗೋʼ
ಇದನ್ನೂ ಓದಿ: ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ವಿದ್ಯಾರ್ಥಿಗೆ ಜೆಇಇ ಪರೀಕ್ಷೆಯಲ್ಲಿ 438 ನೇ ರ‍್ಯಾಂಕ್



