JEE Main Result 2021: ಜೆಇಇ ಮೇನ್ 2021 ಪರೀಕ್ಷೆ ಪಲಿತಾಂಶ ಪ್ರಕಟಿಸಿದ ಎನ್ಟಿಎ; ರಿಸಲ್ಟ್ ನೋಡಿ – jeemain.nta.nic.in
ಜಿಇಇ (ಮೇನ್) ಮೇ 2021 ಪರೀಕ್ಷೆ ನಡೆಸಿದ ನಂತರ ಎನ್ಟಿಎ ಅಭ್ಯರ್ಥಿಗಳ ಅಖಿಲ ಭಾರತ ರ್ಯಾಂಕ್ಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಿದೆ. ಎನ್ಟಿಎ ಅಂಕಗಳ (ಸ್ಕೋರ್) ವಿವರವನ್ನು ಅಭ್ಯರ್ಥಿಗಳಿಗೆ ಕಳಿಸುವುದಿಲ್ಲ, ಆದ್ದರಿಂದ ಅಭ್ಯರ್ಥಿಗಳೇ ಜಿಇಇ (ಮೇನ್) ವೆಬ್ಸೈಟ್ಗಳಿಂದ ಸ್ಕೋರ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಸದ್ಯಕ್ಕೆ ಮರು-ಮೌಲ್ಯಮಾಪನ ಇಲ್ಲವೇ ಮರು-ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರವನ್ನು ಎನ್ಟಿಎ ಇಟ್ಟಕೊಳ್ಳುವದಿಲ್ಲ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (The National Testing Agency) ಜಂಟಿ ಪ್ರವೇಶ ಪರೀಕ್ಷೆಯ (JEE) ಮೇನ್ 2021 ಫಲಿತಾಂಶಗಳನ್ನು ಪ್ರಕಟಿಸಿದೆ. ಸದರಿ ಪರೀಕ್ಷೆಗಳನ್ನು ಫೆಬ್ರುವರಿ 23-26ವರೆಗೆ ನಡೆಸಲಾಗಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು jeemain.nta.nic.in ವೆಬ್ಸೈಟಿನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.
ಜೆಇಇ ಮೇನ್ ಫೆಬ್ರುವರಿ 2021 ಪರೀಕ್ಷೆ ಫಲಿತಾಂಶಗಳು: ಲಿಂಕ್ ಇಲ್ಲಿದೆ jeemain.nta.nic.in
ಮಾರ್ಚ್ 1ರಂದು ಎನ್ಟಿಎ ಫೆಬ್ರುವರಿ 2021 ರಲ್ಲಿ ನಡೆದ ಜೆಇಇ ಮೇನ್ ಪರೀಕ್ಷೆಯ ತಾತ್ಕಾಲಿಕ ಉತ್ತರಗಳ ಕೀಯನ್ನು (answer key) ಬಿಡುಗಡೆ ಮಾಡಿ, ಅಭ್ಯರ್ಥಿಗಳಿಗೆ ಸಂದೇಹ, ಆಕ್ಷೇಪಣೆಗಳಿದ್ದರೆ ನಿವಾರಿಸಿಕೊಳ್ಳುವ ಅವಕಾಶ ನೀಡಿತ್ತು.
ಅಭ್ಯರ್ಥಿಗಳು ಎತ್ತಿದ ಆಕ್ಷೇಪಣೆಗಳನ್ನು ಅಯಾ ಭಾಷೆಯ ಪರಿಣಿತರರು ಪರಶೀಲಿಸಿದರು. ಅಗತ್ಯವಿದ್ದಡೆ ತಿದ್ದುಪಡಿಗಳನ್ನು ಮಾಡಿ ಉತ್ತರಗಳ ಕೀಯನ್ನು ಸಿದ್ಧಪಡಿಸಲಾಗಿತ್ತು.
ಹಾಗೆ ಸಿದ್ಧಪಡಿಸಿದ ಅಂತಿಮ ಉತ್ತರಗಳ ಕೀ ಆಧಾರದ ಮೇಲೆ ಜೆಇಇ ಮೇನ್ ಫೆಬ್ರುವರಿ 2021 ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಉತ್ತರ ಕೀಗಳ ಬಗ್ಗೆ ಈಗ ಯಾವುದೇ ದೂರನ್ನು ಎನ್ಟಿಎ ಸ್ವೀಕರಿಸುವುದಿಲ್ಲ.
ಜಿಇಇ (ಮೇನ್) ಮೇ 2021 ಪರೀಕ್ಷೆ ನಡೆಸಿದ ನಂತರ ಎನ್ಟಿಎ ಅಭ್ಯರ್ಥಿಗಳ ಅಖಿಲ ಭಾರತ ರ್ಯಾಂಕ್ಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಿದೆ. ಎನ್ಟಿಎ ಅಂಕಗಳ (ಸ್ಕೋರ್) ವಿವರವನ್ನು ಅಭ್ಯರ್ಥಿಗಳಿಗೆ ಕಳಿಸುವುದಿಲ್ಲ, ಆದ್ದರಿಂದ ಅಭ್ಯರ್ಥಿಗಳೇ ಜಿಇಇ (ಮೇನ್) ವೆಬ್ಸೈಟ್ಗಳಿಂದ ಸ್ಕೋರ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಸದ್ಯಕ್ಕೆ ಮರು-ಮೌಲ್ಯಮಾಪನ ಇಲ್ಲವೇ ಮರು-ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರವನ್ನು ಎನ್ಟಿಎ ಇಟ್ಟಕೊಳ್ಳುವದಿಲ್ಲ.
ಜೆಇಇ ಅಡ್ವಾನ್ಸ್ಡ್ 2021 ಜುಲೈ 3ರಂದು ನಡೆಯಲಿದೆ.
ಇದನ್ನೂ ಓದಿ: JEE Main Result 2021: ಇಂದು ಬಿಡುಗಡೆ ಆಗದ ಫೆಬ್ರವರಿ ಪರೀಕ್ಷೆಯ ಫಲಿತಾಂಶ
Published On - 10:40 pm, Mon, 8 March 21