AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ನಾನು ಕ್ಯಾಪ್ಟನ್​ ಆದ್ರೆ ನಿಂಗ್​ ಐತೆ ಹಬ್ಬ; ಶಮಂತ್​ಗೆ ಎಚ್ಚರಿಕೆ ನೀಡಿದ ಲ್ಯಾಗ್​ ಮಂಜು

ಈ ವಾರವೂ ಬ್ರೋ ಗೌಡ ಕ್ಯಾಪ್ಟನ್​ ಆಗಿ ಮುಂದುವರಿದಿದ್ದಾರೆ. ಆದರೆ, ಅವರು ಯಾರ ಕೆಲಸವನ್ನೂ ಬದಲಾವಣೆ ಮಾಡುತ್ತಿಲ್ಲ ಎನ್ನುವ ಆರೋಪ ಇದೆ.

BBK8: ನಾನು ಕ್ಯಾಪ್ಟನ್​ ಆದ್ರೆ ನಿಂಗ್​ ಐತೆ ಹಬ್ಬ; ಶಮಂತ್​ಗೆ ಎಚ್ಚರಿಕೆ ನೀಡಿದ ಲ್ಯಾಗ್​ ಮಂಜು
ಬ್ರೋ ಗೌಡ-ಮಂಜು
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Mar 09, 2021 | 8:29 AM

Share

ಕನ್ನಡ ಬಿಗ್​ ಬಾಸ್ ​ಆರಂಭವಾಗಿ 8 ದಿನ ಕಳೆದಿದೆ. ನಿತ್ಯ ಹೊಸ ಹೊಸ ಡ್ರಾಮಾಗಳಿಗೆ ಬಿಗ್ ಬಾಸ್​ ಸಾಕ್ಷಿಯಾಗುತ್ತಿದೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಅಲಿಯಾಸ್​​ ಬ್ರೋ ಗೌಡ ನಾಯಕತ್ವದ​ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಈಗ ಕೊಟ್ಟಿರುವ ಕೆಲಸದಲ್ಲಿ ರೊಟೇಶನ್​ ಮಾಡುತ್ತಿಲ್ಲ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಚಾರದಲ್ಲಿ ಬ್ರೋ ಗೌಡಗೆ ಲ್ಯಾಗ್​ ಮಂಜು ಎಚ್ಚರಿಕೆ ನೀಡಿದ್ದಾರೆ.

ದಿವ್ಯಾ ಜತೆ ಲ್ಯಾಗ್​ ಮಂಜು ಸಲಿಗೆ ಹೊಂದಿದ್ದಾರೆ. ಇದೇ ವಿಚಾರಕ್ಕೆ ಬ್ರೋ ಗೌಡ ಮಂಜು ಅವರಿಗೆ ಹೆಚ್ಚು ಕೆಲಸ ನೀಡಿದ್ದರಂತೆ. ಇದನ್ನು ಮಂಜು ಅವರು ಸುದೀಪ್​ ಜತೆ ಹಂಚಿಕೊಂಡಿದ್ದರು. ಈ ವಾರವೂ ಬ್ರೋ ಗೌಡ ಕ್ಯಾಪ್ಟನ್​ ಆಗಿ ಮುಂದುವರಿದಿದ್ದಾರೆ. ಆದರೆ, ಅವರು ಮನೆ ಸದಸ್ಯರಿಗೆ ನೀಡಿರುವ ಕೆಲಸವನ್ನೂ ಬದಲಾವಣೆ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಇದಕ್ಕೆ, ಮನೆ ಮಂದಿ ಸಿಟ್ಟಾಗಿದ್ದಾರೆ.

8ನೇ ದಿನ ಮನೆಯಲ್ಲಿ ಬ್ರೋ ಗೌಡ ಹಾಗೂ ಮಂಜು ಮಾತನಾಡುತ್ತಿದ್ದರು. ಈ ವೇಳೆ ಶಿಫ್ಟ್​ ರೊಟೇಶನ್​ ಮಾಡುವ ವಿಚಾರ ಚರ್ಚೆಗೆ ಬಂದಿದೆ. ಆಗ ಮಂಜು, ನಾನು ಕ್ಯಾಪ್ಟನ್​ ಆದ್ರೆ ನಿಂಗ್​ ಐತೆ ಹಬ್ಬ ಎಂದಿದ್ದಾರೆ. ಈ ವಿಚಾರವನ್ನು ಬ್ರೋ ಗೌಡ ಲೈಟ್​ ಆಗಿ ತೆಗೆದುಕೊಂಡು ನಕ್ಕಿದ್ದಾರೆ. ಆದರೆ, ಬಿಗ್​ ಬಾಸ್​ ಕ್ಯಾಮೆರಾ ಬಳಿ ತೆರಳಿದ ಬ್ರೋ ಗೌಡ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ನಾನು ಕ್ಯಾಪ್ಟನ್​ ಆಗಿ ನನ್ನ ಕೈಲಾದಷ್ಟು ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ. ಉಳಿದುವರು ಕ್ಯಾಪ್ಟನ್​ ಆಗಿ ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ನಾನು ನೋಡೋಕೆ ಕಾತುರನ್ನಾಗಿದ್ದೇನೆ ಎಂದು ಬ್ರೋ ಗೌಡ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!

Published On - 10:11 pm, Mon, 8 March 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ