Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಶ್​​ಕರಿಯಲ್ಲಿ ಥಾಲಿಯಂ ವಿಷ ಹಾಕಿ ಪತ್ನಿ, ಆಕೆಯ ಇಡೀ ಕುಟುಂಬಕ್ಕೆ ಉಣಿಸಿದ ಉದ್ಯಮಿ; ಅತ್ತೆ, ನಾದಿನಿ ಸಾವು..ಮಾವನಿಂದಲೇ ಹೊರಬಿತ್ತು ಸತ್ಯ

ಇನ್ನು ಈ ವಿಚಾರವನ್ನು ಪೊಲೀಸರಿಗೆ ಮೊದಲು ತಿಳಿಸಿದ್ದು ವರುಣ್ ಅರೋರಾ ಮಾವ ದೇವೇಂದ್ರ ಮೋಹನ್​ ಶರ್ಮಾ(62). ಹೋಮಿಯೋಪಥಿ ಔಷಧಿ ತಯಾರಕರಾಗಿರುವ ಇವರು, ಮಾರ್ಚ್​ 21ರಂದು ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಫಿಶ್​​ಕರಿಯಲ್ಲಿ ಥಾಲಿಯಂ ವಿಷ ಹಾಕಿ ಪತ್ನಿ, ಆಕೆಯ ಇಡೀ ಕುಟುಂಬಕ್ಕೆ ಉಣಿಸಿದ ಉದ್ಯಮಿ; ಅತ್ತೆ, ನಾದಿನಿ ಸಾವು..ಮಾವನಿಂದಲೇ ಹೊರಬಿತ್ತು ಸತ್ಯ
ಆರೋಪಿ ಅರೋರಾ
Follow us
Lakshmi Hegde
|

Updated on: Mar 25, 2021 | 6:12 PM

37 ವರ್ಷದ ದೆಹಲಿಯ ಉದ್ಯಮಿಯೊಬ್ಬ ಪತ್ನಿ ಹಾಗೂ ಆಕೆಯ ಕುಟುಂಬಕ್ಕೆ ಥಾಲಿಯಂ ವಿಷವುಣಿಸಿದ್ದಾನೆ. ಇದೊಂದು ಸ್ಲೋ ಪಾಯಿಸನ್​ ಆಗಿದ್ದು, ಹಿಂದೆ ಇರಾಕ್​ನ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್​ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೊಲ್ಲಲು ಇದನ್ನು ಬಳಸುತ್ತಿದ್ದರು. ಆರೋಪಿ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ನನಗೆ ಈ ಐಡಿಯಾ ಬರಲು ಸದ್ದಾಂ ಹುಸೇನ್​ ಅವರೇ ಕಾರಣ ಎಂದು ಆರೋಪಿ ಹೇಳಿಕೊಂಡಿದ್ದಾನೆ.

ಗ್ರೇಟರ್​ ಕೈಲಾಶ್​ ನಿವಾಸಿಯಾಗಿರುವ ವರುಣ್​ ಅರೋರಾ ಬಂಧಿತನಾಗಿದ್ದು, ಈತ ಫಿಶ್ ಕರಿಯಲ್ಲಿ ಥಾಲಿಯಂ ಹಾಕಿ ಪತ್ನಿ, ಆಕೆಯ ತಾಯಿ.. ನಾದಿನಿಗೆ ಕೊಟ್ಟಿದ್ದ. ಇವರಲ್ಲಿ ಫೆಬ್ರವರಿಯಲ್ಲಿ ಆತನ ಅತ್ತೆ ಮೃತಪಟ್ಟಿದ್ದಾರೆ. ನಾದಿನಿಯೂ ಸಾವನ್ನಪ್ಪದ್ದಾರೆ. ಇನ್ನು ಪತ್ನಿ ಕಳೆದ ತಿಂಗಳಿಂದಲೂ ಕೋಮಾದಲ್ಲೇ ಇದ್ದಾರೆ ಎನ್ನಲಾಗಿದೆ.

ಇನ್ನು ಈ ವಿಚಾರವನ್ನು ಪೊಲೀಸರಿಗೆ ಮೊದಲು ತಿಳಿಸಿದ್ದು ವರುಣ್ ಅರೋರಾ ಮಾವ ದೇವೇಂದ್ರ ಮೋಹನ್​ ಶರ್ಮಾ(62). ಹೋಮಿಯೋಪಥಿ ಔಷಧಿ ತಯಾರಕರಾಗಿರುವ ಇವರು, ಮಾರ್ಚ್​ 21ರಂದು ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಪತ್ನಿ ಅನಿತಾ ಶರ್ಮಾ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವಳನ್ನು ನನ್ನ ಅಳಿಯ ಅರೋರಾ ಕೊಂದಿದ್ದಾಗಿ ನನಗೆ ಅನುಮಾನವಿದೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ನನ್ನ ಪತ್ನಿಗೆ ಅನಾರೋಗ್ಯವಾದಾಗ ಥಾಲಿಯಂ ಸೇವನೆ ಮಾಡಿದವರಲ್ಲಿ ಕಂಡು ಬರುವ ಲಕ್ಷಣವೇ ಕಾಣಿಸಿಕೊಂಡಿತ್ತು ಎಂದೂ ಹೇಳಿದ್ದರು.

ಅದಾದ ಬಳಿಕ ಪೊಲೀಸರು ವರುಣ್​ನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಕೂಡ ತಾನು ಜನವರಿಯಲ್ಲಿ ಫಿಶ್​ ಕರಿಗೆ ಥಾಲಿಯಂ ಸೇರಿಸಿ ಪತ್ನಿ ದಿವ್ಯಾ, ನಾದಿನಿ ಪ್ರಿಯಾಂಕಾ, ಅತ್ತೆ ಅನಿತಾರಿಗೆ ತಿನ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಇವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ವಿಷ ಹಾಕಿದೆ ಎಂದಿರುವ ಆತ, 6 ವರ್ಷಗಳ ಹಿಂದೆ ನನ್ನ ತಂದೆ ಮೃತಪಟ್ಟಿದ್ದರು. ಅದಾದ ಕೆಲವೇ ದಿನಗಳಲ್ಲಿ ನನ್ನ ಪತ್ನಿ ಗರ್ಭಿಣಿಯಾದಳು. ನಾನು ನನ್ನ ತಂದೆಯೇ ಮತ್ತೆ ಹುಟ್ಟಿಬರುತ್ತಾರೆ ಎಂದು ತುಂಬ ಖುಷಿಪಟ್ಟಿದ್ದೆ. ಆದರೆ, ಆಕೆಯ ಗರ್ಭಧಾರಣೆಯಲ್ಲಿ ಸಮಸ್ಯೆ ಇದ್ದುದರಿಂದ ಗರ್ಭಪಾತ ಮಾಡಿಸುವಂತೆ ವೈದ್ಯರು ಸೂಚಿಸಿದರು. ನನಗೆ ಅದು ಇಷ್ಟ ಇರಲಿಲ್ಲ. ಆದರೆ ಪತ್ನಿ ಹಾಗೂ ಆಕೆಯ ಕುಟುಂಬದವರು ಸೇರಿ ಅಬಾರ್ಶನ್​ ನಿರ್ಧಾರ ಮಾಡಿ, ಭ್ರೂಣವನ್ನು ತೆಗೆಸಿದರು. ಅದಾದ ಬಳಿಕ ಐವಿಎಫ್​ ಮೂಲಕ ಇಬ್ಬರು ಮಕ್ಕಳು ಹುಟ್ಟಿದರು. ಇದನ್ನೇ ಇಟ್ಟುಕೊಂಡು ಪತ್ನಿಯ ಕುಟುಂಬದವರು ನನ್ನನ್ನು ಸದಾ ನಿಂದಿಸುತ್ತಿದ್ದರು. ಹಾಗಾಗಿ ಸೇಡು ತೀರಿಸಿಕೊಳ್ಳಲು ಫಿಶ್​ಕರಿಯಲ್ಲಿ ವಿಷ ಹಾಕಿಕೊಟ್ಟೆ ಎಂದು ಅರೋರಾ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಪೊಲೀಸರು ಅರೋರಾ ಮನೆಯನ್ನೂ ಕೂಡ ಶೋಧಿಸಿದ್ದಾರೆ. ಲ್ಯಾಪ್​ಟಾಪ್​ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಅರೋರಾ, ಥಾಲಿಯಂ ಕುರಿತು ಮಾಹಿತಿಯನ್ನು ಸರ್ಚ್​ ಮಾಡಿದ್ದು ಬೆಳಕಿಗೆ ಬಂದಿದೆ. ಸದ್ದಾಂ ಹುಸೇನ್​ ಅವರು ಥಾಲಿಯಂ ಬಳಸಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹೇಗೆ ಕೊಲ್ಲುತ್ತಿದ್ದರು ಎಂಬ ಬಗ್ಗೆ ವಿವರವನ್ನೂ ಆತ ನೋಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಥಾಲಿಯಂ ನ್ನು ಆತ ಆನ್​ಲೈನ್​ ಮೂಲಕ ತರಿಸಿದ್ದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ:Corona Cases and Lockdown News Live: ಕೊರೊನಾ ಸೋಂಕಿನ ಕುರಿತು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆಯಾ?

ಸುದ್ದಿಗೋಷ್ಠಿ ವೇಳೆ ಕಾಲು ಎತ್ತಪ್ಪ ಎಂದ ಸಿದ್ದರಾಮಯ್ಯ, ಇದಕ್ಕೂ ನಗ್ತೀರಲ್ಲಪ್ಪ ಎಂದು ಹಾಸ್ಯದ ಲೇಪನ!