ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ವಿದ್ಯಾರ್ಥಿಗೆ ಜೆಇಇ ಪರೀಕ್ಷೆಯಲ್ಲಿ 438 ನೇ ರ‍್ಯಾಂಕ್
ಪಶ್ಚಿಮ ಬಂಗಾಳದ ಮಿಡ್ನಾಪುರ್ ನಿವಾಸಿ ಸೆರೆಬ್ರಲ್ ಪಾಲ್ಸಿಯಿಂದ ಕುತ್ತಿಗೆಯ ಕೆಳಗೆ ಸ್ವಾಧೀನ ಕಳೆದುಕೊಂಡ ತುಹಿನ್ ದೇವ್ ಜೆಇಇ (ಮುಖ್ಯ ಪರೀಕ್ಷೆ)ಯಲ್ಲಿ 438ನೇ ರ‍್ಯಾಂಕ್ ಗಳಿಸಿದ್ದಾರೆ.
ಕೋಟಾ: ಬಾಯಿಯಲ್ಲಿ ಪೆನ್ನು ಇರಿಸಿ ಪರೀಕ್ಷೆ ಬರೆಯುತ್ತಾನೆ ಈ ವಿದ್ಯಾರ್ಥಿ. ಮೊಬೈಲ್ ಫೋನ್, ಕಂಪ್ಯೂಟರ್ ಎಲ್ಲವನ್ನೂ ನಿರ್ವಹಿಸುವುದು ಕೂಡಾ ಇದೇ ರೀತಿಯಲ್ಲಿ. ಸೆರೆಬ್ರಲ್ ಪಾಲ್ಸಿಯಿಂದ ಕುತ್ತಿಗೆಯ ಕೆಳಗೆ ಸ್ವಾಧೀನ ಕಳೆದುಕೊಂಡ ತುಹಿನ್ ಡೇ ಎಂಬ ಈ ವಿದ್ಯಾರ್ಥಿ ಜೆಇಇ(ಮುಖ್ಯ ಪರೀಕ್ಷೆ)ಯಲ್ಲಿ 438ನೇ ರ‍್ಯಾಂಕ್ ಪಡೆದು ಪಶ್ಚಿಮ ಬಂಗಾಳದ ಶಿಬ್ ಪುರ್ ಐಐಇಎಸ್ ಟಿ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಇಂಜಿನಿಯರಿಂಗ್ ಸೀಟು ಪಡೆದುಕೊಂಡಿದ್ದಾರೆ.
ಮೂಳೆಗಳನ್ನು ನೆಟ್ಟಗಾಗಿಸುವುದಕ್ಕಾಗಿ ಸುಮಾರು 20 ಸರ್ಜರಿಗೊಳಗಾಗಿರುವ ತುಹಿನ್ ಮಿಡ್ನಾಪುರ್ ನಿವಾಸಿ. ರಾಜಸ್ಥಾನದ ಕೋಟಾದಲ್ಲಿರುವ ಕೋಚಿಂಗ್ ಸಂಸ್ಥೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಈತ ಕಳೆದ ವರ್ಷ ಜೆಇಇ (ಅಡ್ವಾನ್ಡ್) ಪರೀಕ್ಷೆ ಪಾಸಾಗಿದ್ದರೂ ಪ್ಲಸ್ ಟುನಲ್ಲಿ ಇಂಜಿನಿಯರಿಂಗ್ ಕೋರ್ಸ್ ಗೆ ಅರ್ಹತೆ ಪಡೆಯಲಿರುವ ಅಂಕ ಗಳಿಸಲು ವಿಫಲರಾಗಿದ್ದರು.
ಈ ವಿದ್ಯಾರ್ಥಿಗೆ ಪ್ರವೇಶ ನೀಡಿದ್ದಕ್ಕಾಗಿ ನಮ್ಮ ಸಂಸ್ಥೆಯಲ್ಲಿರುವ ಎಲ್ಲರಿಗೂ ಖುಷಿ ಆಗಿತ್ತು. ಅವನಿಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದು, ನಮಗೆ ಒಳ್ಳೆಯ ವಿದ್ಯಾರ್ಥಿಯಾಗಲಿದ್ದಾನೆ. ಶೇ.90ರಷ್ಟು ಅಂಗವೈಕಲ್ಯವಿರುವ ವಿದ್ಯಾರ್ಥಿಯೊಬ್ಬರು ನಮ್ಮ ಸಂಸ್ಥೆಯಲ್ಲಿ ಕಲಿಯುುತ್ತಿರುವುದು ಇದೇ ಮೊದಲು ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಯನ್ಸ್ ಆ್ಯಂಡ್ ಟೆಕ್ನಾಲಜಿಯ (ಐಐಇಎಸ್ಟಿ ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತುಹಿನ್ ಅವರ ಕುಟುಂಬಕ್ಕೂ ವಸತಿ ಸೌಕರ್ಯ ಕಲ್ಪಿಸುವ ಬಗ್ಗೆ ಐಐಇಎಸ್ಟಿ ಯೋಚಿಸುತ್ತಿದೆ. ಹಲವಾರು ಪುಸ್ತಕಗಳನ್ನು ರಚಿಸಿದ ಲೇಖಕ, ಕಾಸ್ಮೊಲೊಜಿಸ್ಟ್, ಇಂಗ್ಲಿಷ್ ಸೈದ್ದಾಂತಿಕ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರೇ ನನಗೆ ಸ್ಫೂರ್ತಿ. ಇಂಜಿನಿಯರಿಂಗ್ ನಲ್ಲಿ ಭೌತಶಾಸ್ತ್ರದ ಬಗ್ಗೆ ಕಲಿಯುವುದು ಕಡಿಮೆ ಇದ್ದರೂ ನನ್ನ ಕನಸು ಸಾಕಾರಗೊಳಿಸಲು ಇದನ್ನು ಆಯ್ಕೆ ಮಾಡಿಕೊಂಡೆ ಅಂತಾರೆ ತುಹಿನ್.
JEE ಮುಖ್ಯ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ