AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ತಿದ್ದುಪಡಿ ಕಾಯ್ದೆ ರದ್ದು ಆಗ್ರಹಿಸಿ 2 ಕೋಟಿ ಸಹಿ ಸಂಗ್ರಹ: ಶೀಘ್ರವೇ ರಾಷ್ಟ್ರಪತಿಗೆ ಸಲ್ಲಿಕೆ

ಕೃಷಿ ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್​ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಅಲ್ಲದೆ, ರೈತರ ಪ್ರತಿಭಟನೆಯನ್ನೂ ಕೂಡ ಬೆಂಬಲಿಸುವುದಾಗಿ ಹೇಳಿದೆ. ಹೀಗಿರುವಾಗಲೇ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕೆಂದು ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್​ ಸಹಿ ಸಂಗ್ರಹ ಮಾಡಿದೆ.

ಕೃಷಿ ತಿದ್ದುಪಡಿ ಕಾಯ್ದೆ ರದ್ದು ಆಗ್ರಹಿಸಿ 2 ಕೋಟಿ ಸಹಿ ಸಂಗ್ರಹ: ಶೀಘ್ರವೇ ರಾಷ್ಟ್ರಪತಿಗೆ ಸಲ್ಲಿಕೆ
ಪ್ರತಿಭಟನೆಯಲ್ಲಿ ತೊಡಗಿರುವ ರೈತರು
ರಾಜೇಶ್ ದುಗ್ಗುಮನೆ
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 22, 2020 | 8:32 PM

Share

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಇಡೀ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಅದರಲ್ಲೂ ದೆಹಲಿಯಲ್ಲಿ ಕಳೆದು ಮೂರು ವಾರಗಳಿಂದ ನಿರಂತರವಾಗಿ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ಮಧ್ಯೆ, ಕೃಷಿ ಕಾಯ್ದೆ ರದ್ದು ಮಾಡಬೇಕೆಂದು ಕೋರಿ ದೇಶಾದ್ಯಂತ 2 ಕೋಟಿ ಸಹಿ ಸಂಗ್ರಹ ಮಾಡಲಾಗಿದೆ.

ಕೃಷಿ ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್​ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಅಲ್ಲದೆ, ರೈತರ ಪ್ರತಿಭಟನೆಯನ್ನೂ ಕೂಡ ಬೆಂಬಲಿಸುತ್ತಿರುವುದಾಗಿ ಹೇಳಿದೆ. ಹೀಗಿರುವಾಗಲೇ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕೆಂದು ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್​ ಸಹಿ ಸಂಗ್ರಹ ಮಾಡಿದೆ.

ಕೃಷಿ ತಿದ್ದುಪಡಿ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಸಂಗ್ರಹಿಸಿ ಸಹಿಯನ್ನು ಡಿಸೆಂಬರ್ 24ರವೆರೆಗೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವು ರಾಷ್ಟ್ರಪತಿ ರಾಮನಾಥ ಕೋವಿಂದ್​ಗೆ ಸಲ್ಲಿಕೆ ಮಾಡಲಿದೆ. ಈ ಮೂಲಕ ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಯ ಅಗತ್ಯವಿದೆ ಎಂಬುದನ್ನು ರಾಷ್ಟ್ರಪತಿಗೆ ನಿಯೋಗದ ಸದಸ್ಯರು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಕೆಸಿ ವೇಣುಗೋಪಾಲ್​ ಹೇಳಿದ್ದಾರೆ.

ಬೋರಿಸ್​ಗೆ ಪತ್ರ ಬರೆಯಲಿದ್ದಾರೆ ರೈತರು 2021 ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಭೇಟಿ ನೀಡಲಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್​ರ ಭೇಟಿಯನ್ನು ತಡೆಯುವಂತೆ ಇಂಗ್ಲೆಂಡ್​ನ ಸಂಸದರಿಗೆ ಪತ್ರ ಬರೆಯುವುದಾಗಿ ಚಳವಳಿ ನಿರತ ರೈತ ನಾಯಕ ಕುಲ್ವಂತ್ ಸಿಂಗ್ ಹೇಳಿದ್ದಾರೆ. ಕೇಂದ್ರದ ಜೊತೆಗಿನ ಇಂದಿನ ಭೇಟಿಯಲ್ಲಿ ಸರ್ಕಾರ ನೀಡುವ ಪ್ರಸ್ತಾಪದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವರ ಜೊತೆ ರೈತ ನಾಯಕರ ಸಭೆ ಜರುಗುತ್ತಿದ್ದು, ಈವರೆಗೂ ನಿರ್ಣಯ ಹೊರಬಿದ್ದಿಲ್ಲ.

ರೈತರ ದಿಲ್ಲಿ ಚಲೋ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ!

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ