AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo: ಬೋರಿಸ್ ಜಾನ್ಸನ್​ರ ಗಣರಾಜ್ಯೋತ್ಸವ ಭೇಟಿ ತಡೆಯುವಂತೆ ಇಂಗ್ಲೆಂಡ್ ಸಂಸದರಿಗೆ ಪತ್ರ ಬರೆಯಲಿವೆ ರೈತ ಒಕ್ಕೂಟಗಳು

ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಭೇಟಿ ನೀಡಲಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್​ರ ಭೇಟಿಯನ್ನು ತಡೆಯುವಂತೆ ಇಂಗ್ಲೆಂಡ್​ನ ಸಂಸದರಿಗೆ ಪತ್ರ ಬರೆಯುವುದಾಗಿ ಚಳವಳಿ ನಿರತ ರೈತ ನಾಯಕ ಕುಲ್ವಂತ್ ಸಿಂಗ್ ಹೇಳಿದ್ದಾರೆ.

Delhi Chalo: ಬೋರಿಸ್ ಜಾನ್ಸನ್​ರ ಗಣರಾಜ್ಯೋತ್ಸವ ಭೇಟಿ ತಡೆಯುವಂತೆ ಇಂಗ್ಲೆಂಡ್ ಸಂಸದರಿಗೆ ಪತ್ರ ಬರೆಯಲಿವೆ ರೈತ ಒಕ್ಕೂಟಗಳು
ಟಿಕ್ರಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಂಜಾಬ್ ರೈತರು
guruganesh bhat
| Updated By: ರಾಜೇಶ್ ದುಗ್ಗುಮನೆ|

Updated on: Dec 22, 2020 | 7:35 PM

Share

ದೆಹಲಿ: 2021 ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಭೇಟಿ ನೀಡಲಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್​ರ ಭೇಟಿಯನ್ನು ತಡೆಯುವಂತೆ ಇಂಗ್ಲೆಂಡ್​ನ ಸಂಸದರಿಗೆ ಪತ್ರ ಬರೆಯುವುದಾಗಿ ಚಳವಳಿ ನಿರತ ರೈತ ನಾಯಕ ಕುಲ್ವಂತ್ ಸಿಂಗ್ ಹೇಳಿದ್ದಾರೆ. ಕೇಂದ್ರದ ಜೊತೆಗಿನ ಇಂದಿನ ಭೇಟಿಯಲ್ಲಿ ಸರ್ಕಾರ ನೀಡುವ ಪ್ರಸ್ತಾಪದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವರ ಜೊತೆ ರೈತ ನಾಯಕರ ಸಭೆ ಜರುಗುತ್ತಿದ್ದು, ಈವರೆಗೂ ನಿರ್ಣಯ ಹೊರಬಿದ್ದಿಲ್ಲ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಚಳವಳಿ ನಿರತ ರೈತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಹರಿಯಾಣದ ಅಂಬಾಲಾದಿಂದ ಹೊರಟ ಅವರಿಗೆ ರೈತರ ವಿರೋಧ ಎದುರಾಗಿದೆ. ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರ ನೂತನ ಕೃಷಿ ಕಾಯ್ದೆಗಳ ಪರ ಒಲವು ವ್ಯಕ್ತಪಡಿಸಿತ್ತು. ಇತ್ತ ಕಿಸಾನ್ ಸಂಘರ್ಷ್​ ಸಮಿತಿಯ ಗೌತಮ್ ಬುಧ್ ನಗರದ ಪದಾಧಿಕಾರಿಗಳು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ನೂತನ ಕೃಷಿ ಕಾಯ್ದೆಗೆ ಬೆಂಬಲ ಸೂಚಿಸಿದ್ದಾರೆ.

ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅತಿಥಿ