ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು
Rajesh Duggumane

| Edited By: Ayesha Banu

Dec 23, 2020 | 6:32 AM


ಚೆನ್ನೈ: ನಾವು ನಿಜವಾಗಲೂ ಏನನ್ನಾದರೂ ಬಯಸಿದರೆ ಜಗತ್ತೇ ಅದಕ್ಕೆ ಸಂಚು ರೂಪಿಸುತ್ತೆದೆಯಂತೆ. ಹೀಗೊಂದು ಮಾತು ಚಾಲ್ತಿಯಲ್ಲಿದೆ. ಚೆನ್ನೈ ವಿದ್ಯಾರ್ಥಿನಿಯೊಬ್ಬಳ ಬಾಳಿನಲ್ಲಿ ಇದು ಅಕ್ಷರಶಃ ನಿಜವಾಗಿದೆ. ಆಕೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ವಿಶೇಷ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು. ಕೌನ್ಸೆಲಿಂಗ್ ಇರುವುದು ಚನ್ನೈನಲ್ಲಿ ಅಲ್ಲ- ಕೊಯಮತ್ತೂರಿನಲ್ಲಿ ಎನ್ನುವ ವಿಚಾರ ಅಲ್ಲಿಗೆ ಬಂದ ಮೇಲೆ ತಿಳಿದಿತ್ತು. ಯಾರೋ ನೀಡಿದ ತಪ್ಪು ಮಾಹಿತಿಯಿಂದ ವಿದ್ಯಾರ್ಥಿನಿ ಸಂಕಷ್ಟಕ್ಕೆ ಈಡಾಗಿದ್ದರು.

ಅಲ್ಲಿಗೆ ಮುಂಜಾನೆ ವಾಕಿಂಗ್​ಗೆ ಬರುತ್ತಿದ್ದ ಕೆಲವರು ಆತಂಕದಲ್ಲಿರುವ ತಾಯಿ ಮಗಳನ್ನು ಗಮನಿಸಿದ್ದಾರೆ. ಸಮಸ್ಯೆ ಏನು ಎಂದು ಕೇಳಿದ್ದಾರೆ. ಆಗ ನಡೆದ ಘಟನೆ ಬಗ್ಗೆ ಅವರು ಅಲ್ಲಿಯವರಿಗೆ ವಿವರಿಸಿದ್ದಾರೆ. ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸಲು 9 ಗಂಟೆ ಬೇಕು. ಮುಂಜಾನೆ ಹೊರಟರೂ ಕೌನ್ಸಲಿಂಗ್​ ತಲುಪೋದು ಅಸಾಧ್ಯ. ತಾಯಿ-ಮಗಳ ಸ್ಥಿತಿ ನೋಡಿ ಅಲ್ಲಿಯವರು ಮರುಕ ವ್ಯಕ್ತಪಡಿಸಿದ್ದರು.

ಆಗ ನಡೆಯಿತು ಪವಾಡ

ನಿತ್ಯ ಆ ಭಾಗಕ್ಕೆ ವಾಕಿಂಗ್​ ಬರುವವರು ಒಂದು ತಂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನ ಅದೃಷ್ಟ ಎಂಬಂತೆ ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರ ಪರಿಚಯವಿದ್ದ ಒಬ್ಬರು ಆ ತಂಡದಲ್ಲಿದ್ದರು. ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರರಿಗೆ ಫೋನ್ ಮಾಡಿ ಹುಡುಗಿ ಬರುವುದು ತಡವಾಗುತ್ತದೆ ಎಂದು ತಿಳಿಸಲಾಗಿತ್ತು. ಅವರಿಗೆ ಪ್ರತ್ಯೇಕ ಸಮಯ ಕೊಡಿ ಎಂದು ಕೋರಲಾಗಿತ್ತು. ಕೌನ್ಸಿಲರ್ ಕೂಡ ಇದಕ್ಕೆ ಒಪ್ಪಿದ್ದರು.

ವಾಕಿಂಗ್​ ಬಂದವರಲ್ಲೇ ಒಬ್ಬರು ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್​ ಕಳುಹಿಸಿದ್ದರು. ಮತ್ತೊಬ್ಬರು ವಿಮಾನ ಟಿಕೆಟ್​ ಬುಕ್​ ಮಾಡಿಕೊಟ್ಟರು. ವಿಮಾನ ನಿಲ್ದಾಣದಿಂದ ಕ್ಯಾಂಪಸ್ಸಿಗೆ ಹೋಗಲು ಕಾರನ್ನು ಮತ್ತೊಬ್ಬರು ವ್ಯವಸ್ಥೆ ಮಾಡಿದ್ದರು. ಅಂತೂ ಆ ವಿದ್ಯಾರ್ಥಿನಿ ಕೌನ್ಸಿಲಿಂಗ್​ಗೆ ಹಾಜರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ ಆ ಹುಡುಗಿಗೆ BSC ಅಗ್ರಿಕಲ್ಚರ್​ ಸೀಟು ಸಿಕ್ಕಿದೆ.

 

https://tv9kannada.com/diljit-dosanjh-quietly-donates-1-crore-to-buy-warm-clothes-for-protesting-farmers-honours-their-efforts-in-person

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada