ಇಂಗ್ಲೆಂಡ್ನಲ್ಲಿ ಹೊಸ ಪ್ರಭೇದದ ಅಟ್ಟಹಾಸ: ರಾಜ್ಯಕ್ಕೆ ಹೆಚ್ಚಾಯ್ತು ಆತಂಕ, KIABಯಲ್ಲಿ 800ಕ್ಕೂ ಹೆಚ್ಚು ಜನರ ಆಗಮನ
ಇಂಗ್ಲೆಂಡ್ನಲ್ಲಿ ಕೊರೊನಾದ ಹೊಸ ಪ್ರಭೇದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಂಡನ್ನಿಂದ ಬಂದವರ ಮೇಲೆ ಸರ್ಕಾರ ಹೆಚ್ಚಿನ ಗಮನ ವಹಿಸುತ್ತಿದೆ. ದುಬೈ, ಸ್ಯಾನ್ ಫ್ರಾನ್ಸಿಸ್ಕೊ ಸೇರಿ ವಿವಿಧೆಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 800ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ವಿದೇಶಗಳಿಂದ ಬಂದವರಿಗೆ ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಬೆಂಗಳೂರು: ಕ್ರೂರಿ ಕೊರೊನಾದ ರೂಪಾಂತರಗೊಂಡ ವೈರಸ್ ಇಡೀ ವಿಶ್ವವನ್ನು ಮತ್ತೊಮ್ಮೆ ಆತಂಕಕ್ಕೆ ತಳ್ಳಿದೆ. ಇಂಗ್ಲೆಂಡ್ನಲ್ಲಿ ಶುರುವಾದ ಮ್ಯೂಟೇಶನ್ ವೈರಸ್ನಿಂದ ಫುಲ್ ಟೆನ್ಶನ್ ಶುರುವಾಗಿದೆ.
ಸೆಪ್ಟೆಂಬರ್ನಿಂದಲೇ ಯುಕೆಯಲ್ಲಿ ಮ್ಯೂಟೇಶನ್ ವೈರಸ್ ಪತ್ತೆಯಾಗಿತ್ತು ಎಂದು ವಿಜ್ಞಾನಿಗಳು, ಸಂಶೋಧಕರು, ತಜ್ಞರು ಮಾಹಿತಿ ನೀಡಿದ್ದಾರೆ. ಅದರಲ್ಲೂ ಇಂಗ್ಲೆಂಡ್ನ ದಕ್ಷಿಣ ಪ್ರಾಂತ್ಯದಲ್ಲೇ ಇದರ ಆರ್ಭಟ ಹೆಚ್ಚು. ಜನಜಂಗುಳಿ ಹೆಚ್ಚು ಸೇರುವ ಪ್ರದೇಶದಲ್ಲೇ ತುಂಬಾ ಬೇಗವಾಗಿ ಈ ವೈರಸ್ ಸ್ಪ್ರೆಡ್ ಆಗ್ತಿದೆ. 50 ರಿಂದ 70 % ಫಾಸ್ಟ್ ಆಗಿ ಅಟ್ಯಾಕ್ ಮಾಡ್ತಿದೆ.
ಮ್ಯೂಟೇಶನ್ ವೈರಸ್ ಮಕ್ಕಳು ಹಾಗೂ ವಯಸ್ಕರು ಇಬ್ಬರ ಮೇಲೂ ದಾಳಿ ನಡೆಸುತ್ತಿದೆ. ದೇಹದೊಳಗೆ ಹೊಕ್ಕಿ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಿ ಬಿಡುತ್ತಿದೆ. ಇನ್ನು ಇಮ್ಯೂನಿಟಿ ಪವರ್ ಇಲ್ಲದಿದ್ದವರಿಗೆ ಇದು ಮತ್ತಷ್ಟು ಡೇಂಜರಸ್ ಆಗಲಿದೆ. ವ್ಯಾಕ್ಸಿನ್ ಕೂಡ ಮ್ಯೂಟೇಶನ್ ಆಗಿರೋ ವೈರಸ್ ಮೇಲೆ ಪರಿಣಾಮಕಾರಿಯಾಗೋದು ಡೌಟ್ ಅಂತಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದೇಶಗಳಿಂದ ರಾಜ್ಯಕ್ಕೆ ಆಗಮಿಸಿದ ನೂರಾರು ಪ್ರಯಾಣಿಕರು ದುಬೈ, ಸ್ಯಾನ್ ಫ್ರಾನ್ಸಿಸ್ಕೊ ಸೇರಿ ವಿವಿಧೆಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 800ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ವಿದೇಶಗಳಿಂದ ಬಂದವರಿಗೆ ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಕ್ರೀನಿಂಗ್ ನಂತರ ಪಾಸಿಟಿವ್ ಬಂದ್ರೆ ಐಸೋಲೇಷನ್. ನೆಗಟಿವ್ ಬಂದ್ರೆ ಹೋಂ ಕ್ವಾರಂಟೈನ್ ಮಾಡಲಾಗುತ್ತೆ. ಪ್ರಯಾಣಿಕರ ಸಂಪೂರ್ಣ ವಿಳಾಸ ಪಡೆದುಕೊಂಡು ರಿಪೋರ್ಟ್ ಬಂದ ನಂತರ ಅವರಿಗೆ ಅದನ್ನು ಕಳಿಸಲಾಗುತ್ತೆ.
ಮಂಡ್ಯ to ಲಂಡನ್ ಇಂಗ್ಲೆಂಡ್ನಲ್ಲಿ ಕೊರೊನಾದ ಹೊಸ ಪ್ರಭೇದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಂಡನ್ನಿಂದ ಬಂದವರ ಮೇಲೆ ಸರ್ಕಾರ ಹೆಚ್ಚಿನ ಗಮನ ವಹಿಸುತ್ತಿದೆ. ಇನ್ನು ಮಂಡ್ಯದ ನಾಲ್ವರು ಲಂಡನ್ನಿಂದ ರಾಜ್ಯಕ್ಕೆ ವಾಪಾಸ್ ಆಗಿದ್ದಾರೆ. ವಾಪಾಸ್ ಆದವರು ಪಾಂಡವಪುರದ ಇಬ್ಬರು, ಮಳವಳ್ಳಿಯ ಇಬ್ಬರು ಎಂದು ತಿಳಿದು ಬಂದಿದೆ. ಪಾಂಡವಪುರದವರನ್ನು ಮೈಸೂರಿನಲ್ಲಿ ಹೊಂ ಕ್ವಾರಂಟೈನ್ ಮಾಡಲಾಗಿದೆ. ಮಳವಳ್ಳಿಯ ಇಬ್ಬರು ಇನ್ನೂ ಬೆಂಗಳೂರಿನಲ್ಲೇ ಇದ್ದು ಅವರು ಬಂದ ಕೂಡಲೇ ಕ್ವಾರಂಟೈನ್ ಮಾಡಲಾಗುವುದು.
ಲಂಡನ್ನಿಂದ ತುಮಕೂರಿಗೆ ಬಂದ ಐವರು ಡಿಸೆಂಬರ್ 21 ರಂದು ತುಮಕೂರು ಜಿಲ್ಲೆಗೆ ಇಂಗ್ಲೆಂಡ್ ನಿಂದ ಒಟ್ಟು ಐವರು ಆಗಮಿಸಿದ್ದಾರೆ. ಇದರಲ್ಲಿ ನಾಲ್ವರು ಒಂದೇ ಕುಟುಂಬದವರು. ಇಬ್ಬರು ಮಕ್ಕಳು, ಗಂಡ ಹೆಂಡತಿ. ತುಮಕೂರು ನಗರದವರು.ಮತ್ತೋರ್ವ ತಿಪಟೂರು ನಗರದವ. ಎಲ್ಲರೂನ್ನ ಹೋಂ ಕ್ವಾರೈಂಟಿನ್ ಮಾಡಲಾಗಿದೆ. ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು, ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ.
ಕಲಬುರಗಿ ಬಂದ್ರು 7 ಮಂದಿ ಇಂಗ್ಲೆಂಡ್ನಿಂದ ಕಲಬುರಗಿ ಜಿಲ್ಲೆಗೆ ಒಟ್ಟು ಏಳು ಜನ ಬಂದಿದ್ದಾರೆ. ಇವರೆಲ್ಲ ಮೊದಲು ಬೆಂಗಳೂರಿಗೆ ಬಂದು ಬಳಿಕ ಕಲಬುರಗಿ ತೆರಳಿದ್ದಾರೆ. ಡಿಸೆಂಬರ್ 6ರಂದು ಓರ್ವ, ಡಿಸೆಂಬರ್ 10ರಂದು ಮೂರು ಜನ, ಡಿಸೆಂಬರ್ 17ರಂದು ಇಬ್ಬರು, ಡಿಸೆಂಬರ್ 18 ಕ್ಕೆ ಓರ್ವರು ಬಂದಿದ್ದಾರೆ. ಕಲಬುರಗಿಯಲ್ಲಿ ಸದ್ಯ 5 ಇದ್ದಾರೆ. ಎಲ್ಲಾ ಏಳು ಜನರು ಬರುವಾಗ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಾರೆ. ಎಲ್ಲರ ವರದಿ ನೆಗಟಿವ್ ಬಂದಿದೆ. ಸದ್ಯ ಈಗ ಎಲ್ಲರನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಇದೀಗ ಮತ್ತೆ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಇಂಗ್ಲೆಂಡ್ನಿಂದ ಬೆಣ್ಣೆ ನಗರಿ ದಾವಣಗೆರೆಗೆ ಬಂದ 7 ಮಂದಿ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ನಗರದಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ. ಇಂಗ್ಲೆಂಡ್ನಿಂದ ದಾವಣಗೆರೆಗೆ ಒಟ್ಟು 7 ಮಂದಿ ಬಂದಿದ್ದಾರೆ. ಡಿಸೆಂಬರ್ 10 ಎರ್ ಇಂಡಿಯಾ ಮೂಲಕ ಇಬ್ಬರ ಬಂದಿದ್ದು ಅವರು ಬೆಂಗಳೂರಿಗೆ ಬಂದು ನಂತರ ದಾವಣಗೆರೆಗೆ ಆಗಮಿಸಿದ್ದಾರೆ. ಡಿಸೆಂಬರ್ 17ಕ್ಕೆ ಒಬ್ಬರು ಹಾಗೂ 18ಕ್ಕೆ ನಾಲ್ವರ ಬಂದಿದ್ದಾರೆ. 7 ಜನರಲ್ಲಿ ನಾಲ್ವರ ವರದಿ ಫಲಿತಾಂಶಕ್ಕಾಗಿ ಜಿಲ್ಲಾಡಳಿತ ಕಾಯುತ್ತಿದೆ. ಇನ್ನಿಬ್ಬರ ಮಾದರಿ ಇಂದು ಸಂಗ್ರಹಿಸಲಾಗುತ್ತೆ.
ಧಾರವಾಡಕ್ಕೆ 5 ಜನರ ಆಗಮನ ಡಿಸೆಂಬರ್ 1 ರಿಂದ ಇಲ್ಲಿಯವರೆಗೂ ಧಾರವಾಡಕ್ಕೆ 5 ಜನರು ಬಂದಿದ್ದಾರೆ. ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಅದರಲ್ಲಿ ಮೂವರಿಗೆ ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವರದಿಗಾಗಿ ಕಾಯಲಾಗುತ್ತಿದೆ.