ಕೋಟ್ಯಾಂತರ ರೂ. ಅವ್ಯವಹಾರ ಆರೋಪ: ಅಗ್ರಿ ಗೋಲ್ಡ್ ನಿರ್ದೇಶಕನ ಬಂಧನ
ಅಗ್ರಿ ಗೋಲ್ಡ್ನಲ್ಲಿ ಒಟ್ಟು 6,400 ಕೋಟಿ ಅವ್ಯವಹಾರ ಆರೋಪ ಮಾಡಲಾಗಿದೆ. ನಿರ್ದೇಶಕ ಅವ್ವ ವೆಂಕಟರಾವ್ ಬಂಧನಕ್ಕೊಳಗಾಗಿದ್ದಾರೆ.
ಹೈದರಾಬಾದ್: ಅಗ್ರಿ ಗೋಲ್ಡ್ ನಿರ್ದೇಶಕ ಅವ್ವ ವೆಂಕಟರಾವ್ ಸೇರಿದಂತೆ ಮೂವರನ್ನು ಕೋಟ್ಯಾಂತರ ರೂಪಾಯಿ ಹಣಕಾಸು ಅವ್ಯವಹಾರ ಮಾಡಿರುವ ಆರೋಪದ ಮೇರೆಗೆ ಬಂಧಿಸಲಾಗಿದೆ.
ಅಗ್ರಿ ಗೋಲ್ಡ್ ನಿರ್ದೇಶಕ ಅವ್ವ ವೆಂಕಟರಾವ್ ಕರ್ನಾಟಕ, ಆಂಧ್ರ, ತೆಲಂಗಾಣದ ಜನರಿಂದ ಡಿಪಾಜಿಟ್ ಸಂಗ್ರಹಿಸಿ ಮನಿ ಲಾಂಡರಿಂಗ್ ಅವ್ಯವಹಾರ ಮಾಡಿದ್ದರು ಎಂದು ಆರೋಪಿಸಲಾಗಿದೆ. ಒಟ್ಟು 6,400 ಕೋಟಿ ಅವ್ಯವಹಾರ ಮಾಡಿರುವ ಆರೋಪ ಇವರುಗಳ ಮೇಲಿದೆ.