ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್​ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು..

ಇದೇ ವೇಳೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಯುವತಿ ಪರ ವಕೀಲ ಕೆ.ಎನ್.ಜಗದೀಶ್, ನಾಳೆ ಅಥವಾ ನಾಡಿದ್ದು ಯುವತಿ ವಿಚಾರಣೆಗೆ ಬರಬಹುದು. ಇಂದು ವಿಚಾರಣೆಗೆ ಹಾಜರಾಗುವ ಕುರಿತು ಅನುಮಾನವಿದೆ ಎಂದು ತಿಳಿಸಿದ್ದಾರೆ.

ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್​ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು..
ರಮೇಶ್​ ಜಾರಕಿಹೊಳಿ
Follow us
guruganesh bhat
|

Updated on:Mar 27, 2021 | 3:33 PM

ಬೆಂಗಳೂರು: ‘ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ’ ಎಂದು ಎಸ್​ಐಟಿ ಎದುರು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ಪೋಷಕರು ಎಸ್​ಐಟಿ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಟಿವಿ9 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ಆಡುಗೋಡಿಯಲ್ಲಿರುವ ಎಸ್​ಐಟಿ ಟೆಕ್ನಿಕಲ್ ವಿಂಗ್​ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಯುವತಿಯ ಪೋಷಕರು ಕಣ್ಣಿರು ಸುರಿಸುತ್ತ ಈ ಹೇಳಿಕೆ ನೀಡಿದ್ದಾರೆ. ಆಡಿಯೋ ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಆಗಿದ್ದಾಳೆ ಎಂಬ ಯುವತಿಯ ಪೋಷಕರ ಹೇಳಿಕೆ ಪ್ರಕರಣಕ್ಕೆ ತಿರುವು ನೀಡುವ ಸಾಧ್ಯತೆ ಹೆಚ್ಚಾಗಿದೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಸಮ್ಮುಖದಲ್ಲಿ ಹಾಗೂ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಯುವತಿಯ ತಂದೆ- ತಾಯಿ ಮತ್ತು ಸಹೋದರರ ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರಿನ ಆಡುಗೋಡಿಯಲ್ಲಿ ಇರುವ ಎಸ್​ಐಟಿ ತಾಂತ್ರಿಕ ವಿಭಾಗದ ವಿಚಾರಣೆ ಮುಗಿದ ನಂತರ ಯುವತಿ ಪೋಷಕರು ಎಸ್​‌ಐಟಿಗೆ ಹೇಳಿಕೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಇನ್ನೊಂದು ದೂರು ನೀಡಲು ಕಮಿಷನರ್ ಕಚೇರಿಗೆ ಆಗಮಿಸಿದ್ದ ಯುವತಿ ಪರ ವಕೀಲ ಕೆ.ಎನ್.ಜಗದೀಶ್, ‘ಪೊಲೀಸ್ ಆಯುಕ್ತ ಕಮಲ್ ಪಂತ್‌ ಅವರು ಕಚೇರಿಯಲ್ಲಿ ಇಲ್ಲ.ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ಕೊಡಲು ಹೇಳಿದ್ದಾರೆ. ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಯುವತಿ ಇಂದು ವಿಚಾರಣೆಗೆ ಹಾಜರಾಗುವುದು ಅನುಮಾನ ಇದೇ ವೇಳೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಯುವತಿ ಪರ ವಕೀಲ ಕೆ.ಎನ್.ಜಗದೀಶ್, ನಾಳೆ ಅಥವಾ ನಾಡಿದ್ದು ಯುವತಿ ವಿಚಾರಣೆಗೆ ಬರಬಹುದು. ಇಂದು ವಿಚಾರಣೆಗೆ ಹಾಜರಾಗುವ ಕುರಿತು ಅನುಮಾನವಿದೆ ಎಂದು ತಿಳಿಸಿದ್ದಾರೆ.

ಯುವತಿಯ ಅಜ್ಜಿ ಮನೆಗೂ ತೆರಳಿದ ಪೊಲೀಸರು ಪೊಲೀಸರು ಯುವತಿಯ ಇಬ್ಬರು ಸಹೋದರಿಗೆ ಪೊಲೀಸ್ ನೊಟೀಸ್ ನೀಡಲು ಆಗಮಿಸಿದ್ದು, ಈ ಬಳಿಕ ಸಿಸಿಬಿ ತಂಡ ಯುವತಿ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಕಳೆದ ಮಾರ್ಚ್ 24 ರಂದು ಮಾಹಿತಿ ಕಲೆ ಹಾಕಿದ ಸಿಸಿಬಿ ತಂಡ ವಿಡಿಯೋದಲ್ಲಿರುವ ಯುವತಿ ಅಜ್ಜಿ ಮನೆಗೆ ಬಂದು ಹೋಗುತ್ತಿದ್ದಳಾ? ಯುವತಿ ಅಜ್ಜಿ ಮನೆಗೆ ಎಂದು ಬರುತ್ತಿದ್ದಳು? ಯುವತಿ ಇತ್ತ ಬಂದ ವೇಳೆ ಆಕೆಯನ್ನು ನೋಡಿದ್ದೀರಾ? ಎಂಬಿತ್ಯಾದಿ ಮಾಹಿತಿಯನ್ನು ನೆರೆಹೊರೆಯವರ ಬಳಿ ಕೇಳಿದೆ.

‘ಯುವತಿ ಬಗ್ಗೆ ಯಾವುದೇ ಮಾಹಿತಿ ನಮಗೆ ಗೊತ್ತಿಲ್ಲ’ ಎಂದು ಸ್ಥಳಿಯರು ಉತ್ತರಿಸಿದ್ದಾರೆ. ನಂತರ ಬೀಗ ಹಾಕಿದ ಸ್ಥಿತಿಯಲ್ಲಿದ್ದ ಅಜ್ಜಿಮನೆ‌ಯ ಕಾಂಪೌಂಡ್​ಗೆ ಯುವತಿ ಸಹೋದರರಿಬ್ಬರ ಹೆಸರಿಗೆ ಸಿಸಿಬಿ ಪೊಲೀಸರು ನೊಟೀಸ್ ಅಂಟಿಸಿದ್ದಾರೆ. ಮಾರ್ಚ್ 29 ರಂದು ಸಿಸಿಬಿ ಕಚೇರಿಯ ಮಡಿವಾಳ ವಿಚಾರಣಾ ಕೇಂದ್ರಕ್ಕೆ ಹಾಜರಾಗುವಂತೆ ಯುವತಿಯ ಸಹೋದರರಿಗೆ ನೊಟೀಸ್ ನೀಡಲಾಗಿದೆ. ಈ ಹಿಂದೆ ಕಳೆದ ಮಾರ್ಚ್ 14 ರಂದು ಸಹ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಇದೇ ಮನೆಗೆ ನೊಟೀಸ್ ಅಂಟಿಸಿದ್ದರು.

ಇದನ್ನೂ ಓದಿ: ದೂರಿನ ಬೆನ್ನಲ್ಲೇ ಅರೆಸ್ಟ್ ಆಗಿಬಿಡ್ತಾರಾ ರಮೇಶ್ ಜಾರಕಿಹೊಳಿ? ಎಸ್​ಐಟಿ ಮುಂದಿನ ನಡೆ ಏನು?

‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’; ಬೆಳ್ಳಂಬೆಳಗ್ಗೆ ಬಿಡುಗಡೆಯಾದ ಸಿಡಿ ಲೇಡಿಯ ಇನ್ನೊಂದು ವಿಡಿಯೋದಲ್ಲಿ ಹೇಳಿಕೆ!

Published On - 2:00 pm, Sat, 27 March 21