Belgavi Lok Sabha By-Election: ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬರೋದು ಬೇಡ ಎನ್ನುತ್ತಿರುವ ಸತೀಶ್ ಜಾರಕಿಹೊಳಿ ಬೆಂಬಲಿಗರು; ಸೆಕ್ಸ್ ಸಿಡಿ ಹುಟ್ಟಿಸಿದ ಆತಂಕ !
ಸಿದ್ದರಾಮಯ್ಯನವರು ಸೋಮವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿರಲಿದ್ದಾರೆ. ಹಾಗೇ, ಡಿ.ಕೆ.ಶಿವಕುಮಾರ್ ತಾವೂ ಬರುವುದಾಗಿ ಹೇಳಿದ್ದು, ನಾಳೆ (ಭಾನುವಾರ)ಸಂಜೆ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ಬೆಳಗಾವಿಗೆ ಹೋಗುವುದಾಗಿ ಹೇಳಿಕೊಂಡಿದ್ದಾರೆ.
ಬೆಳಗಾವಿ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ವಿಧಾನ ಸಭಾ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿಯಿಂದ ಮಾಜಿ ಸಚಿವ ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರಿಗೆ ಟಿಕೆಟ್ ಪಕ್ಕಾ ಆಗಿದೆ. ಹಾಗೇ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ ಈ ಉಪಚುನಾವಣೆಯ ಮೇಲೆ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದ ಕರಿನೆರಳು ಬಿದ್ದಿದೆ. ಸಿಡಿಗೆ ಸಂಬಂಧಪಟ್ಟಂತೆ ನಿನ್ನೆಯವರೆಗೂ ರಮೇಶ್ ಜಾರಕಿಹೊಳಿಯವರ ಹೆಸರಷ್ಟೇ ಪ್ರಮುಖವಾಗಿ ಕೇಳುತ್ತಿತ್ತು. ಆದರೆ ನಿನ್ನೆಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರೂ ಬಲವಾಗಿ ಕೇಳಿಬರುತ್ತಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗುತ್ತಿದೆ.
ಸತೀಶ್ ಜಾರಕಿಹೊಳಿಯವರು ಸೋಮವಾರ (ಮಾರ್ಚ್ 29) ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಡಿ.ಕೆ.ಶಿವಕುಮಾರ್ ತಾವೂ ಹಾಜರು ಇರುವುದಾಗಿ ಹೇಳಿದ್ದಾರೆ. ಆದರೆ ಸಿಡಿ ಪ್ರಕರಣ ಸಿಕ್ಕಾಪಟೆ ಚರ್ಚೆಯಾಗುತ್ತಿರುವ ಹೊತ್ತಲ್ಲಿ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬರುವುದು ಬೇಡ ಎಂದು ಸತೀಶ್ ಜಾರಕಿಹೊಳಿ ಬೆಂಬಲಿಗರು ಹೇಳುತ್ತಿದ್ದಾರೆ. ಅಷ್ಟಕ್ಕೂ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬರುವುದು ಬೇಡ ಎಂದು ಕಾಂಗ್ರೆಸ್ನ ಕೆಲವು ಶಾಸಕರು, ಕಾರ್ಯಕರ್ತರು ಹೇಳುತ್ತಿರುವುದಕ್ಕೆ ಒಂದು ಬಲವಾದ ಕಾರಣವೂ ಇದೆ.
ಸಿದ್ದರಾಮಯ್ಯನವರು ಸೋಮವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿರಲಿದ್ದಾರೆ. ಹಾಗೇ, ಡಿ.ಕೆ.ಶಿವಕುಮಾರ್ ತಾವೂ ಬರುವುದಾಗಿ ಹೇಳಿದ್ದು, ನಾಳೆ (ಭಾನುವಾರ)ಸಂಜೆ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ಬೆಳಗಾವಿಗೆ ಹೋಗುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಸಿಡಿ ವಿಚಾರದಲ್ಲಿ ಡಿಕೆಶಿ ಹೆಸರು ಕೇಳಿಬಂದಿರುವುದರಿಂದ ರಮೇಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗರ ಮಧ್ಯೆ ಗಲಾಟೆ ನಡೆಯಬಹುದು ಎಂಬುದು ಕೈನ ಹಲವು ಶಾಸಕರು, ಮುಖಂಡರು, ಸತೀಶ್ ಜಾರಕಿಹೊಳಿ ಬೆಂಬಲಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸಿಡಿ ಯುವತಿಯ ಆಡಿಯೋವೊಂದು ನಿನ್ನೆ ಬಿಡುಗಡೆಯಾಗಿದ್ದು, ಅದರಲ್ಲಿ ಆಕೆ ಡಿ.ಕೆ.ಶಿವಕುಮಾರ್ ಹೆಸರನ್ನು ಹೇಳಿದ್ದಾಳೆ. ಇದರಿಂದ ಸಹಜವಾಗಿಯೇ ರಮೇಶ್ ಜಾರಕಿಹೊಳಿ ಬೆಂಬಲಿಗರು ಕೆರಳಿರುತ್ತಾರೆ. ಈ ಹೊತ್ತಲ್ಲಿ ಡಿಕೆಶಿ ಇಲ್ಲಿಗೆ ಬಂದರೆ, ರಮೇಶ್ ಬೆಂಬಲಿಗರು ಬೇಕೆಂದೇ ಗಲಾಟೆ ಸೃಷ್ಟಿಸಬಹುದು ಎಂಬ ಬಗ್ಗೆ ಕೈ ಪಾಳಯದಲ್ಲಿ ಚರ್ಚೆಯಾಗುತ್ತಿರುವ ವಿಷಯ ಎನ್ನಲಾಗಿದೆ.
ಇದನ್ನೂ ಓದಿ: ‘ಸಿಡಿ ಲೇಡಿ ಡಿಕೆಶಿ ಹೆಸರು ಹೇಳಿರೋದು ತಪ್ಪಲ್ಲ; ಅವರ ಸಹಾಯ ಕೇಳಿದ್ದು ತಪ್ಪಿಲ್ಲ, ಅವರು ಮಾಡಿದ್ರೂ ತಪ್ಪಲ್ಲ’
ಡಿಕೆಶಿಗೆ ನೋಟಿಸ್ ನೀಡುವ ಬಗ್ಗೆ ಪೊಲೀಸರು ನಿರ್ಧರಿಸ್ತಾರೆ -ಬಸವರಾಜ್ ಬೊಮ್ಮಾಯಿ