ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಚಿಕಿತ್ಸೆ ಪುನಾರಂಭ.. ತಪ್ಪಿತು ಕ್ಯಾನ್ಸರ್ ರೋಗಿಗಳ ಪರದಾಟ
2017 ಫೆಬ್ರವರಿ ತಿಂಗಳಲ್ಲಿ ಮತ್ತೊಮ್ಮೆ ಮುಂಬಯಿಯ ಎಇಆರ್ಬಿ ತಂಡ ವಿಮ್ಸ್ನ ಈ ವಿಭಾಗಕ್ಕೆ ಭೇಟಿ ನೀಡಿತ್ತು. ಸೂಚಿಸಿದ ಯಾವುದೇ ಕೊರತೆಗಳನ್ನು ಸರಿಪಡಿಸದೇ ಇರುವುದರಿಂದ ರೇಡಿಯೋ ಥೆರಪಿ ವಿಭಾಗವನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿತ್ತು. ಇದರಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದಂತಾಗಿತ್ತು.
ಬಳ್ಳಾರಿ: ವಿಮ್ಸ್ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರದ ಜಿಲ್ಲೆಯ ಕ್ಯಾನ್ಸರ್ ರೋಗಿಗಳ ಪಾಲಿಗೆ ಸಂಜೀವಿನಿ. ಈ ಆಸ್ಪತ್ರೆಯಲ್ಲಿದ್ದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆ ಉಪಕರಣಗಳು ಬಡ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಬೇಕಿತ್ತು. ಆದರೆ ಉಪಕರಣಗಳು ಕೆಟ್ಟು ಹೋಗಿ ಚಿಕಿತ್ಸೆ ಇಲ್ಲದೇ ರೋಗಿಗಳು ಪರದಾಡುತ್ತಿದ್ದರು. ಆದರೆ ಈಗ ಮೂರು ವರ್ಷಗಳ ಬಳಿಕ ಮತ್ತೆ ಕೆಟ್ಟು ಹೋಗಿದ್ದ ಉಪಕರಣಗಳು ದುರಸ್ತಿಯಾಗಿದ್ದು, ಮತ್ತೆ ರೇಡಿಯೋ ಥೆರಪಿ ಚಿಕಿತ್ಸೆ ಆರಂಭವಾಗಿದೆ.
ಒಂದಲ್ಲ ಒಂದು ಅವ್ಯವಸ್ಥೆಗಳ ಮೂಲಕ ಸುದ್ದಿಯಾಗುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಈಗ ಕೋಟ್ಯಾಂತರ ರೂ. ವೆಚ್ಚದ ಉಪಕರಣಗಳನ್ನು ಖರೀದಿಸಿದ ಕ್ಯಾನ್ಸರ್ ಘಟಕದ ಉಪಕರಣಗಳು ಕೆಟ್ಟು ಹೋಗಿದ್ದವು. ಇದರಿಂದಾಗಿ 2016ರಲ್ಲಿ ಮುಂಬಯಿಯ ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ (ಎಇಆರ್ಬಿ) ತಂಡ ವಿಮ್ಸ್ನ ರೇಡಿಯೋ ಥೆರಪಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಉಪಕರಣಗಳು, ಸಿಬ್ಬಂದಿ ನಿಯೋಜನೆ, ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 16 ಕೊರತೆಗಳನ್ನು ಗುರುತಿಸಿ ಸರಿಪಡಿಸುವಂತೆ ಸೂಚಿಸಿತ್ತು. ಆದರೆ ವಿಮ್ಸ್ ಆಡಳಿತ ಇದನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ.
2017 ಫೆಬ್ರವರಿ ತಿಂಗಳಲ್ಲಿ ಮತ್ತೊಮ್ಮೆ ಮುಂಬಯಿಯ ಎಇಆರ್ಬಿ ತಂಡ ವಿಮ್ಸ್ನ ಈ ವಿಭಾಗಕ್ಕೆ ಭೇಟಿ ನೀಡಿತ್ತು. ಸೂಚಿಸಿದ ಯಾವುದೇ ಕೊರತೆಗಳನ್ನು ಸರಿಪಡಿಸದೇ ಇರುವುದರಿಂದ ರೇಡಿಯೋ ಥೆರಪಿ ವಿಭಾಗವನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿತ್ತು. ಇದರಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದಂತಾಗಿತ್ತು. ಬೆಂಗಳೂರು, ಹುಬ್ಬಳ್ಳಿಗೆ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಟಿವಿ9 ನಲ್ಲೂ ವಿಸ್ತೃತವಾದ ವರದಿ ಕೂಡ ಪ್ರಸಾರ ಮಾಡಲಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ವಿಮ್ಸ್ ಆಡಳಿತ ಮಂಡಳಿ ಈಗ ಕೆಟ್ಟು ನಿಂತಿರುವ ಥೆರಪಿ ಉಪಕರಣಗಳ ದುರಸ್ತಿ ಮಾಡಲಾಗಿದೆ. ಹೀಗಾಗಿ ಮೂರು ವರ್ಷಗಳ ಬಳಿಕ ಮತ್ತೆ ಕ್ಯಾನ್ಸರ್ ರೋಗಿಗಳಿಗೆ ರೇಡಿಯೋ ಥೆರಪಿ ಚಿಕತ್ಸೆ ಆರಂಭವಾಗಿದೆ.
ಮೂರು ವರ್ಷಗಳ ಬಳಿಕ ವಿಮ್ಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಮತ್ತೆ ಚಿಕಿತ್ಸೆ ಆರಂಭವಾಗಿರುವುದು ರೋಗಿಗಳಿಗೆ ತುಂಬಾ ಅನುಕೂಲವಾಗಿದೆ. ಬೆಂಗಳೂರು, ಹುಬ್ಬಳ್ಳಿಗೆ ಚಿಕಿತ್ಸೆಗೆ ಅಲೆದಾಡಬೇಕಾಗಿದ್ದ ರೋಗಿಗಳಿಗೆ ಈಗ ವಿಮ್ಸ್ ಆಸ್ಪತ್ರೆಯಲ್ಲಿಯೇ ಮತ್ತೆ ಚಿಕಿತ್ಸೆ ಆರಂಭವಾಗಿರುವುದು ತುಂಬಾ ಅನುಕೂಲವಾಗಿದ್ದು, ಚಿಕಿತ್ಸೆಗಾಗಿ ಬೇರೆ ಕಡೆ ಅಲೆದಾಡುವಂತ ಪರಿಸ್ಥಿತಿ ತಪ್ಪಿದಂತಾಗಿದೆ.
ಇದನ್ನೂ ಓದಿ
ಬೇರೆ ಬೇರೆ ನಗರಕ್ಕೆ ವಿಮಾನ ಓಡಿಸಲು ಮನವಿ ಮಾಡುತ್ತಿರುವ ಬೀದರ್ ಜನತೆ
ಸರಣಿ ಧಾರಾವಾಹಿ ರೂಪದಲ್ಲಿ ಬಿಡುಗಡೆ ಆಗುತ್ತಿರುವ ಆಡಿಯೋ- ವಿಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ: ಬಸವರಾಜ ಬೊಮ್ಮಾಯಿ