Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಡಿ ಲೇಡಿ ಡಿಕೆಶಿ ಹೆಸರು ಹೇಳಿರೋದು ತಪ್ಪಲ್ಲ; ಅವರ ಸಹಾಯ ಕೇಳಿದ್ದು ತಪ್ಪಿಲ್ಲ, ಅವರು ಮಾಡಿದ್ರೂ ತಪ್ಪಲ್ಲ’

ಸಿಡಿ ಲೇಡಿ ಡಿ.ಕೆ.ಶಿವಕುಮಾರ್‌ ಹೆಸರು ಹೇಳಿರುವುದು ತಪ್ಪಲ್ಲ ಎಂದು ಟಿವಿ9ಗೆ ಸಂತ್ರಸ್ತೆ ಪರ ವಕೀಲ ಜಗದೀಶ್ ಹೇಳಿದ್ದಾರೆ. ಆಡಿಯೋದಲ್ಲಿ ಯುವತಿ ಡಿಕೆಶಿ​​​ ಹೆಸರು ಪ್ರಸ್ತಾಪಿಸಿದ ವಿಚಾರವಾಗಿ ಜಗದೀಶ್​ ಪ್ರತಿಕ್ರಿಯಿಸಿದ್ದಾರೆ.

‘ಸಿಡಿ ಲೇಡಿ ಡಿಕೆಶಿ ಹೆಸರು ಹೇಳಿರೋದು ತಪ್ಪಲ್ಲ; ಅವರ ಸಹಾಯ ಕೇಳಿದ್ದು ತಪ್ಪಿಲ್ಲ, ಅವರು ಮಾಡಿದ್ರೂ ತಪ್ಪಲ್ಲ’
‘ಸಿಡಿ ಲೇಡಿ ಡಿಕೆಶಿ ಹೆಸರು ಹೇಳಿರೋದು ತಪ್ಪಲ್ಲ; ಅವರ ಸಹಾಯ ಕೇಳಿದ್ದು ತಪ್ಪಿಲ್ಲ, ಅವರು ಮಾಡಿದ್ರೂ ತಪ್ಪಲ್ಲ’
Follow us
KUSHAL V
|

Updated on:Mar 26, 2021 | 10:56 PM

ಬೆಂಗಳೂರು: ಸಿಡಿ ಲೇಡಿ ಡಿ.ಕೆ.ಶಿವಕುಮಾರ್‌ ಹೆಸರು ಹೇಳಿರುವುದು ತಪ್ಪಲ್ಲ ಎಂದು ಟಿವಿ9ಗೆ ಸಂತ್ರಸ್ತೆ ಪರ ವಕೀಲ ಜಗದೀಶ್ ಹೇಳಿದ್ದಾರೆ. ಆಡಿಯೋದಲ್ಲಿ ಯುವತಿ ಡಿಕೆಶಿ​​​ ಹೆಸರು ಪ್ರಸ್ತಾಪಿಸಿದ ವಿಚಾರವಾಗಿ ಜಗದೀಶ್​ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ, ಬೊಮ್ಮಾಯಿ ಹೆಸರು ಹೇಳಿದ್ರೆ ತಪ್ಪಿಲ್ಲ. ಯುವತಿಗೆ ವಿಪಕ್ಷದ ನಾಯಕರು ಸಹಾಯ ಮಾಡಬೇಕು. ಸಹಾಯ ಕೇಳಿದ್ದು ತಪ್ಪಿಲ್ಲ, ಅವರು ಮಾಡಿದ್ರೂ ತಪ್ಪಲ್ಲ ಎಂದು ಜಗದೀಶ್​ ಹೇಳಿದರು.

ಬೆಂಗಳೂರಲ್ಲಿ ಸಂತ್ರಸ್ತೆಗೆ ಭದ್ರತೆ ಕೊಡೋದಾಗಿ ಆಯುಕ್ತರು ಹೇಳಿದ್ದಾರೆ. ಕಲಬುರಗಿಯಲ್ಲಿರುವ ಆಕೆಗೆ ಪೋಷಕರಿಗೂ ಸಹ ಭದ್ರತೆ ಬೇಕು. ಸೋಮವಾರ ಡಿಜಿ&ಐಜಿಪಿ ಅವರನ್ನು ಭೇಟಿ ಮಾಡಿ ಯುವತಿ ಪೋಷಕರಿಗೆ ರಕ್ಷಣೆ ಕೊಡಿ ಅಂತಾ ಕೇಳ್ತೇವೆ. ಭದ್ರತೆ ನೀಡಿದ ಬಳಿಯ ಯುವತಿ ಹಾಜರಾಗಿ ಹೇಳಿಕೆ ನೀಡುತ್ತಾರೆ ಎಂದು ಜಗದೀಶ್​ ಹೇಳಿದರು.

LAWYER JAGADISH 3

ಜಗದೀಶ್

‘ಮನೆಯವರು ಕೇಳಿದಾಗ ನಾನಲ್ಲ ಅಂತಲೇ ಹೇಳೋದು’ ಮನೆಯವರು ಕೇಳಿದಾಗ ನಾನಲ್ಲ ಅಂತಲೇ ಹೇಳೋದು. ಮನೆಯವರಿಗೆ ಸಂತ್ರಸ್ತೆ ನಾನಲ್ಲವೆಂದು ಹೇಳಿರಬಹುದು ಎಂದು ಜಗದೀಶ್ ಹೇಳಿದ್ದಾರೆ. ಯುವತಿಗೆ ತಲುಪಿಸಲು ಇವತ್ತು ನೋಟಿಸ್ ಕೊಟ್ಟಿದ್ದಾರೆ. ಘಟನೆ ನಡೆದ ಜಾಗದ ಮಹಜರು ಮಾಡಬೇಕಾಗುತ್ತೆ. ಸ್ಥಳ ಮಹಜರು ಮಾಡಿ ಸಾಕ್ಷಿಗಳನ್ನ ಕಲೆ ಹಾಕಬೇಕಾಗುತ್ತೆ. ಆಕೆಯ ವೈದ್ಯಕೀಯ ಪರೀಕ್ಷೆ ಕೂಡ ಮಾಡಬೇಕಾಗುತ್ತೆ. ನ್ಯಾಯಾಲಯಕ್ಕೆ ಬಂದು ಯುವತಿ ಹೇಳಿಕೆ ನೀಡಬೇಕು ಎಂದು ಹೇಳಿದರು.

‘ಇದುವರೆಗೂ ಯುವತಿ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ’ ಇದುವರೆಗೂ ಯುವತಿ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಇವತ್ತು ಬೆಳಗ್ಗೆ ನನಗೆ ದೂರಿನ ಪ್ರತಿಯನ್ನು ತಲುಪಿಸಿದ್ರು. ನನ್ನ ಕಚೇರಿಗೆ ಬಂದು ದೂರಿನ‌ ಪ್ರತಿಯನ್ನು ತಲುಪಿಸಿದ್ರು. ದೂರಿನ ಪ್ರತಿ ಯಾರು ನೀಡಿದರೆಂದು ಬಹಿರಂಗಪಡಿಸಲ್ಲ ಎಂದು ಟಿವಿ9ಗೆ ರಮೇಶ್‌ ಸಿಡಿ ಲೇಡಿ ಪರ ವಕೀಲ ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿಗೆ ನೋಟಿಸ್ ನೀಡುವ ಬಗ್ಗೆ ಪೊಲೀಸರು ನಿರ್ಧರಿಸ್ತಾರೆ -ಬಸವರಾಜ್ ಬೊಮ್ಮಾಯಿ

Published On - 10:50 pm, Fri, 26 March 21

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ