ಡಿಕೆಶಿಗೆ ನೋಟಿಸ್ ನೀಡುವ ಬಗ್ಗೆ ಪೊಲೀಸರು ನಿರ್ಧರಿಸ್ತಾರೆ -ಬಸವರಾಜ್ ಬೊಮ್ಮಾಯಿ

ಡಿಕೆಶಿಗೆ ನೋಟಿಸ್ ನೀಡುವ ಬಗ್ಗೆ ಪೊಲೀಸರು ನಿರ್ಧರಿಸ್ತಾರೆ. ಪ್ರಕರಣದಲ್ಲಿ ಆಗ್ತಿರುವ ತಿರುವುಗಳಿಂದ ಎಸ್​ಐಟಿ ತನಿಖೆ ವಿಚಲಿತಗೊಳ್ಳುವುದಿಲ್ಲ ಅಂತಾ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಡಿಕೆಶಿಗೆ ನೋಟಿಸ್ ನೀಡುವ ಬಗ್ಗೆ ಪೊಲೀಸರು ನಿರ್ಧರಿಸ್ತಾರೆ -ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ
Follow us
KUSHAL V
|

Updated on:Mar 26, 2021 | 9:40 PM

ಬೆಂಗಳೂರು: ಸಿಡಿಯಲ್ಲಿದ್ದ ಲೇಡಿ ಮಾತಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಲೇಡಿ ಮಾತಾಡಿದ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಎಸ್‌ಐಟಿ ಕಾನೂನು ರೀತಿ ತನಿಖೆ ನಡೆಸಲಿದೆ. ನಾನು ಯಾರ ಮೇಲೂ ಒತ್ತಡ ಹಾಕಲ್ಲ. ಯುವತಿಗೆ ಭದ್ರತೆ ನೀಡಲು ಸಿದ್ಧ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು. ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಈ ಮಧ್ಯೆ, ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ನೀಡಿ ಎಸ್ಐಟಿ ವಿಚಾರಣೆಗೆ ಒಳಪಡಿಸುತ್ತಾ ಎಂಬ ಪ್ರಶ್ನೆಗೆ ಗೃಹ ಸಚಿವ ಬೊಮ್ಮಯಿ ಪ್ರತಿಕ್ರಿಯಿಸಿದ್ದಾರೆ. ಅದು ಪೊಲೀಸರು ಮಾಡುವ ಕೆಲಸ. ವಿಚಾರಣೆ ಮಾಡೋದು ಬಿಡೋದು ಎಸ್​ಐಟಿ ಅವರಿಗೆ ಬಿಟ್ಟಿದ್ದು. ಡಿಕೆಶಿಗೆ ನೋಟಿಸ್ ನೀಡುವ ಬಗ್ಗೆ ಪೊಲೀಸರು ನಿರ್ಧರಿಸ್ತಾರೆ. ಪ್ರಕರಣದಲ್ಲಿ ಆಗ್ತಿರುವ ತಿರುವುಗಳಿಂದ ಎಸ್​ಐಟಿ ತನಿಖೆ ವಿಚಲಿತಗೊಳ್ಳುವುದಿಲ್ಲ ಅಂತಾ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

‘ಧ್ವನಿ ಹೊಂದಾಣಿಕೆ ಆದರೆ ಪ್ರಕರಣ ಇತ್ಯರ್ಥ ಆದಂತೆ’ ಇತ್ತ, ಧ್ವನಿ ಹೊಂದಾಣಿಕೆ ಆದರೆ ಪ್ರಕರಣ ಇತ್ಯರ್ಥ ಆದಂತೆ. ಯುವತಿ ಕರೆತಂದು ಧ್ವನಿ ಟೆಸ್ಟ್​ ಮಾಡಿಸಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವರ ಭೇಟಿ ಬಳಿಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಆಡಿಯೋ ರಿಲೀಸ್​ ಆಗಿದೆ ಎಂದು ಫೋನ್​ ಬಂದಿದೆ. ನಾನು ಆಡಿಯೋವನ್ನು ಕೇಳಿಲ್ಲ, ಕೇಳುತ್ತೇನೆ. ಎಸ್​​ಐಟಿ ತನಿಖೆ ಮಾಡುತ್ತಿದೆ, ತನಿಖೆಯಲ್ಲಿ ಗೊತ್ತಾಗುತ್ತದೆ. ಆ ಮಹಾನಾಯಕ ಯಾರು ಎಂದು ರಮೇಶ್​ ಹೇಳಬೇಕು. ಇಲ್ಲದಿದ್ದರೆ ಆ ವಿಡಿಯೋದಲ್ಲಿರುವ ಯುವತಿ ಹೇಳಬೇಕು. ಯುವತಿ ಕರೆತಂದು ತನಿಖೆ ಮಾಡಿದರೆ ಗೊತ್ತಾಗುತ್ತದೆ. ನಾನು ಗೃಹ ಸಚಿವರ ಜೊತೆಗೆ ಇದರ ಬಗ್ಗೆ ಮಾತನಾಡಿಲ್ಲ. ಬೆಳಗಾವಿ ಚುನಾವಣೆ ವಿಚಾರವಾಗಿ ಭೇಟಿ ಮಾಡಿದ್ದೇನೆ. ಸದ್ಯಕ್ಕೆ ರಮೇಶ್ ಜಾಮೀನು ತೆಗೆದುಕೊಳ್ಳಲ್ಲ ಅಂದಿದ್ದಾರೆ. ವಕೀಲರ ಜೊತೆ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸುತ್ತೇವೆ ಎಂದು ಗೃಹ ಸಚಿವರ ಭೇಟಿ ಬಳಿಕ ಶಾಸಕ ಬಾಲಚಂದ್ರ ಹೇಳಿದರು.

ಇದನ್ನೂ ಓದಿ: CD ಪ್ರಕರಣದಲ್ಲಿ ಡಿಕೆಶಿ ಹೆಸರು ಹೊರಬರುತ್ತೆ ಎಂದು ಮೊದಲೇ ಮಾಹಿತಿ ಪಡೆದುಕೊಂಡಿದ್ರಾ ಸಿದ್ದರಾಮಯ್ಯ?

Published On - 9:27 pm, Fri, 26 March 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು