MIT ಕ್ಯಾಂಪಸ್​ನಲ್ಲಿ ಕೊರೊನಾ ಬ್ಲಾಸ್ಟ್​: ಇಂದು ಒಂದೇ ದಿನ 184 ವಿದ್ಯಾರ್ಥಿಗಳಿಗೆ ವಕ್ಕರಿಸಿದ ವೈರಸ್​

ಮಣಿಪಾಲದ MIT ಕ್ಯಾಂಪಸ್​ನಲ್ಲಿ ಇಂದು ಒಂದೇ ದಿನ 184 ಕೊರೊನಾ ಕೇಸ್ ಪತ್ತೆಯಾಗಿದೆ. ಇದೀಗ, ಕಾಲೇಜಿನ ಪ್ರಕರಣಗಳನ್ನು ಸೇರಿದಂತೆ ಜಿಲ್ಲೆಯಲ್ಲಿ ಇಂದು 210 ಕೊರೊನಾ ಕೇಸ್​ ಪತ್ತೆಯಾಗಿದೆ.

MIT ಕ್ಯಾಂಪಸ್​ನಲ್ಲಿ ಕೊರೊನಾ ಬ್ಲಾಸ್ಟ್​: ಇಂದು ಒಂದೇ ದಿನ 184 ವಿದ್ಯಾರ್ಥಿಗಳಿಗೆ ವಕ್ಕರಿಸಿದ ವೈರಸ್​
ಮಣಿಪಾಲ್​ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿ
Follow us
KUSHAL V
|

Updated on:Mar 26, 2021 | 8:34 PM

ಉಡುಪಿ: ಮಣಿಪಾಲದ MIT ಕ್ಯಾಂಪಸ್​ನಲ್ಲಿ ಇಂದು ಒಂದೇ ದಿನ 184 ಕೊರೊನಾ ಕೇಸ್ ಪತ್ತೆಯಾಗಿದೆ. ಇದೀಗ, ಕಾಲೇಜಿನ ಪ್ರಕರಣಗಳನ್ನು ಸೇರಿದಂತೆ ಜಿಲ್ಲೆಯಲ್ಲಿ ಇಂದು 210 ಕೊರೊನಾ ಕೇಸ್​ ಪತ್ತೆಯಾಗಿದೆ. MIT ಕ್ಯಾಂಪಸ್​ನಲ್ಲಿ ಇದೀಗ ಸೋಂಕಿತರ ಸಂಖ್ಯೆ 706ಕ್ಕೆ ಏರಿದೆ.

ವಿಮ್ಸ್ ವಿದ್ಯಾರ್ಥಿಗಳಿಗೆ ಬೆಂಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಮ್ಸ್ ವಿದ್ಯಾರ್ಥಿಗಳಿಗೆ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ. ಇಂದು ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಮ್ಸ್​ನಲ್ಲಿ ಸೋಂಕಿತ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ 25 ಕ್ಕೆ ಏರಿದೆ. ಜೊತೆಗೆ, ವಸತಿ ನಿಲಯದಲ್ಲಿದ್ದ 88 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ.

ನೆಲಮಂಗಲ ತಾಲೂಕಿನಲ್ಲಿಂದು ಇಬ್ಬರಿಗೆ ಕೊರೊನಾ ದೃಢ ನೆಲಮಂಗಲ ತಾಲೂಕಿನಲ್ಲಿಂದು ಇಬ್ಬರಿಗೆ ಕೊರೊನಾ ದೃಢವಾಗಿದೆ. ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಕೆ.ಮಂಜುನಾಥ್ ಮಾಹಿತಿ ಕೊಟ್ಟಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಇಂದು 37 ಜನರಿಗೆ ಕೊರೊನಾ ಕೋಲಾರ ಜಿಲ್ಲೆಯಲ್ಲಿ ಇಂದು 37 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,405ಕ್ಕೇರಿದೆ. ಇದೀಗ, ಕೋಲಾರ ಜಿಲ್ಲೆಯಲ್ಲಿ ಒಟ್ಟು 136 ಸಕ್ರಿಯ ಪ್ರಕರಣಗಳಿದೆ. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾಗೆ 181 ಜನರು ಬಲಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿಂದು ಹೊಸದಾಗಿ 34 ಜನರಿಗೆ ಸೋಂಕು ಮಂಡ್ಯ ಜಿಲ್ಲೆಯಲ್ಲಿಂದು ಹೊಸದಾಗಿ 34 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19,875ಕ್ಕೆ ಏರಿದೆ. ಮಂಡ್ಯ ಜಿಲ್ಲೆಯಲ್ಲಿ ಇಂದು 18 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 19,545 ಜನರು ಗುಣಮುಖರಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಇಂದು 67 ಜನರಿಗೆ ಕೊರೊನಾ ದೃಢ ಇತ್ತ, ಅರಮನೆ ನಗರಿಯಲ್ಲಿ ಇಂದು 67 ಜನರಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55,207ಕ್ಕೇರಿದೆ. 55,207 ಸೋಂಕಿತರ ಪೈಕಿ 53,698 ಜನರು ಗುಣಮುಖರಾಗಿದ್ದಾರೆ. ಸೋಂಕಿತರ ಸಂಪರ್ಕದಿಂದ 49 ಜನರಿಗೆ ಕೊರೊನಾ ದೃಢವಾಗಿದೆ. ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ 13 ಜನರಿಗೆ ಕೊವಿಡ್​ ದೃಢವಾಗಿದೆ.

ಉಸಿರಾಟದ ಸಮಸ್ಯೆಯಿದ್ದ ಐವರಿಗೆ ಕೊರೊನಾ ಸೋಂಕು ಹರಡಿದೆ. ಮೈಸೂರು ಜಿಲ್ಲೆಯಲ್ಲಿಂದು ಕೊರೊನಾದಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ 1,047 ಜನರು ಬಲಿಯಾಗಿದ್ದಾರೆ. 457 ಸೋಂಕಿತರ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ಜಿಲ್ಲೆಯಲ್ಲಿಂದು 36 ಜನರಲ್ಲಿ ಕೊರೊನಾ ಪತ್ತೆ ವಿಜಯಪುರ ಜಿಲ್ಲೆಯಲ್ಲಿಂದು 36 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 191ಕ್ಕೆ ಏರಿದೆ. 38 ಕೊರೊನಾ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  153 ಕೊರೊನಾ ಸೋಂಕಿತರಿಗೆ ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ.

ಅತ್ತ, ರಾಜ್ಯದಲ್ಲಿಂದು ಹೊಸದಾಗಿ 2,566 ಜನರಿಗೆ ಕೊರೊನಾ ದೃಢವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,81,044ಕ್ಕೇರಿದೆ. ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 13 ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ ಕೊರೊನಾಗೆ 12,484 ಜನರು ಬಲಿಯಾಗಿದ್ದಾರೆ. ಸೋಂಕಿತರ ಪೈಕಿ 9,48,988 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ಧಾರೆ. 19,553 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 1,490 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 4,24,349ಕ್ಕೇರಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾಗೆ ಇದುವರೆಗೆ 4,572 ಜನರು ಅಸುನೀಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ‘ಸಿಡಿ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ.. ಕುಟುಂಬ ಚುನಾವಣೆ ಸ್ಪರ್ಧೆ ಮಾಡ್ತಿಲ್ಲ, ಪಕ್ಷ ಮಾಡುತ್ತಿದೆ’

Published On - 7:50 pm, Fri, 26 March 21