ಮತ್ತೆ ಮಹಾನಾಯಕನ ಪ್ರಸ್ತಾಪ; ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಬಿಜೆಪಿ ಕರ್ನಾಟಕ ಮಹಾ ಪ್ರಶ್ನೆ

ರಾಜಕಾರಣದಲ್ಲಿ ಅತಿಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಪಕ್ಷಕ್ಕೆ ಬದ್ಧತೆ ಎನ್ನುವುದು ಇದ್ದರೆ ಮಹಾನಾಯಕ ರಾಜೀನಾಮೆ ಪಡೆಯಲಿ ಎಂದು ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ಮತ್ತೆ ಮಹಾನಾಯಕನ ಪ್ರಸ್ತಾಪ; ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಬಿಜೆಪಿ ಕರ್ನಾಟಕ ಮಹಾ ಪ್ರಶ್ನೆ
ಬಿಜೆಪಿ ಧ್ವಜ
Follow us
preethi shettigar
| Updated By: ಸಾಧು ಶ್ರೀನಾಥ್​

Updated on:Mar 27, 2021 | 12:51 PM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಷಡ್ಯಂತ್ರದ ಹಿಂದೆ ಮಹಾನಾಯಕನ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಇತರ ಆರೋಪಿಗಳಂತೆ ಮಹಾನಾಯಕನೂ ಆರೋಪಿಯಲ್ಲವೇ? ರಾಜಕಾರಣದಲ್ಲಿ ಅತಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಪಕ್ಷಕ್ಕೆ ಬದ್ಧತೆ ಎನ್ನುವುದು ಇದ್ದರೆ ಮಹಾನಾಯಕ ರಾಜೀನಾಮೆ ಪಡೆಯಲಿ (#DKShiMustResign) ಎಂದು ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ಈ ಮಧ್ಯೆ ಬೆಂಗಳೂರಿನ ಹೊರವಲಯದಲ್ಲಿ ಸಿಡಿ ಯುವತಿ ಪತ್ತೆಯಾಗಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಉದ್ಯಮಿ ಶಿವಕುಮಾರ್ ಅವರ ಕಾರು ಚಾಲಕ ಪರಶಿವ ಮೂರ್ತಿ ಜೊತೆಯಲ್ಲಿ ಸಿಡಿಯಲ್ಲಿರುವ ಯುವತಿ ಇದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಸಿಡಿ ಗ್ಯಾಂಗ್​ನ ನರೇಶ್ ಗೌಡ, ಶ್ರವಣ್ ಉತ್ತರ ಭಾರತದ ಭಾಗದಲ್ಲಿರುವ ಬಗ್ಗೆ ಮಾಹಿತಿ ಬಂದಿದ್ದು, ಬೆಂಗಳೂರಿನ ಹೊರಭಾಗದಿಂದಲೇ ಇಂದು ಯುವತಿ ವಿಡಿಯೋ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:

ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೋರ್ಟ್ ನಿಗಾದಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಹೈಕೋರ್ಟ್ ಗೆ ಮೊರೆ ಹೊಗುತ್ತೇವೆ – ವಕೀಲ ಜಗದೀಶ್

ಆರೋಪಿ ಜಾರಕಿಹೊಳಿ ಗೂಳಿ ಥರಾ ಓಡಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಅರೆಸ್ಟ್ ಮಾಡಿ: ಸಿಡಿ ಯುವತಿ ಪರ ವಕೀಲ ಎಫ್ ಬಿ ಲೈವ್ ಮೂಲಕ ಆಗ್ರಹ

Published On - 12:49 pm, Sat, 27 March 21