ಹೂವುಗಳ ಬೆಲೆ ಕುಸಿತ; ತಿಪ್ಪೆಗೆ ಸುರಿದು ಆಕ್ರೋಶಗೊಂಡ ಚಿಕ್ಕಬಳ್ಳಾಪುರ ರೈತರು

ಹೂವು, ಹಣ್ಣು, ತರಕಾರಿಗೆ ಫೇಮಸ್ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲರ್ ಕಲರ್ ಹೂವುಗಳನ್ನು ಬೆಳೆಯುತ್ತಾರೆ. ಕೊರೊನಾ ಲಾಕ್​ಡೌನ್ ಮಾಡಿದಾಗ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಈ ಬಾರಿಯಾದರು ಬೆಳೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹೂವು ಬೆಳೆಗಾರರು ಅಂದುಕೊಂಡಿದ್ದರು.

ಹೂವುಗಳ ಬೆಲೆ ಕುಸಿತ; ತಿಪ್ಪೆಗೆ ಸುರಿದು ಆಕ್ರೋಶಗೊಂಡ ಚಿಕ್ಕಬಳ್ಳಾಪುರ ರೈತರು
ಹೂವುಗಳನ್ನು ರೈತರು ಒಂದೆಡೆ ಸುರಿದಿದ್ದಾರೆ
Follow us
|

Updated on: Mar 27, 2021 | 2:18 PM

ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾ ಅದೇಷ್ಟೊ ಜನರ ಹೊಟ್ಟೆಗೆ ತಣ್ಣಿರು ಬಟ್ಟೆಯೂ ಇಲ್ಲದ ಹಾಗೆ ಮಾಡಿದೆ. ಇದರ ಆಟ ಎಲ್ಲಿಯವರೆಗೆ ತಲುಪುತ್ತದೆಯೋ ಗೊತ್ತಿಲ್ಲ. ಪ್ರಥಮ ಹಂತದ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್​ಡೌನ್ ಮಾಡಿದಾಗ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದರು. ಈಗ ಮುಂಬರುವ ಹಬ್ಬಕ್ಕಾದರೂ ನಾಲ್ಕು ಕಾಸು ಮಾಡಿಕೊಳ್ಳೋಣ ಅಂತ ಹೂವುಗಳನ್ನು ಬೆಳೆದಿದ್ದರು. ಅದರೆ ಸರ್ಕಾರ ಕೊರೊನಾ ಎರಡನೆ ಅಲೆ ನಿಯಂತ್ರಣಕ್ಕಾಗಿ ಸಭೆ, ಸಮಾರಂಭ, ಮದುವೆ, ಜಾತ್ರೆ, ಹಬ್ಬಗಳ ಆಚರಣೆಗೆ ಕಠಿಣ ನಿಯಮ ಜಾರಿ ಮಾಡಿದ್ದೆ ತಡ, ವರ್ತಕರು ಹೂಗಳತ್ತ ಮುಖ ಮಾಡುತ್ತಿಲ್ಲ. ಇದರಿಂದ ರೈತರು ಬೆಳೆದ ಹೂವುಗಳಿಗೆ ಬೆಲೆಯಿಲ್ಲದೆ ರೈತರು ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಹೂವು, ಹಣ್ಣು, ತರಕಾರಿಗೆ ಫೇಮಸ್ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲರ್ ಕಲರ್ ಹೂವುಗಳನ್ನು ಬೆಳೆಯುತ್ತಾರೆ. ಕೊರೊನಾ ಲಾಕ್​ಡೌನ್ ಮಾಡಿದಾಗ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಈ ಬಾರಿಯಾದರು ಬೆಳೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಯೋಚಿಸಿದ ಹೂವು ಬೆಳೆಗಾಗರಿಗೆ ಕೊರೊನಾದ ಎರಡನೇ ಸಂಕಷ್ಟವನ್ನು ತಂದೊಡ್ಡಿದೆ. ಈಗಾಗಲೇ ಸರ್ಕಾರ ಸಭೆ, ಸಮಾರಂಭ, ಮದುವೆ, ಜಾತ್ರೆ, ಹಬ್ಬಗಳ ಆಚರಣೆಗೆ ಕಠಿಣ ನಿಯಮ ಜಾರಿ ಮಾಡಿದ್ದು, ವರ್ತಕರು ಹೂವುಗಳ ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಇದರಿಂದ ರೈತರು ಬೆಳೆದ ಹೂವುಗಳನ್ನು ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಬಣ್ಣ ಬಣ್ಣದ ಸೇವಂತಿಗೆ ಹೂವುಗಳು

ಹೂವುಗಳನ್ನು ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು

ಕಲರ್ ಕಲರ್ ಚೆಂಡು ಹೂ, ಸೇವಂತಿ, ತರೇವಾರಿ ರೋಜಾ, ಬಟನ್ ರೋಜ್, ಮೆರಾಬುಲ್ ಸೇರಿದಂತೆ ವಿವಿಧ ಹೂವುಗಳನ್ನು ರೈತರು ಚಿಕ್ಕಬಳ್ಳಾಪುರದ ಫ್ಲವರ್ ಮಾರುಕಟ್ಟೆಗೆ ತಂದಿದ್ದರು. ಹೋಳಿ ಹಬ್ಬ ಸೇರಿದಂತೆ ಎರಡು ಮೂರು ಹಬ್ಬಗಳು ಇರುವುದರಿಂದ ಮಾರುಕಟ್ಟೆಯಲ್ಲಿ ಹೂವುಗಳಿಗೆ ಒಳ್ಳೆಯ ಬೆಲೆ ಇರುತ್ತದೆ ಅಂತ ರೈತರು ಅಂದುಕೊಂಡಿದ್ದರು. ಆದರೆ ಮಾರುಕಟ್ಟೆಯಲ್ಲಿ ಕೆಜಿ ಚೆಂಡು ಹೂವಿಗೆ ಕೇವಲ 2 ರೂಪಾಯಿ, ಗುಣಮಟ್ಟದ ರೋಜಾ ಹೂವುಗಳಿಗೆ 10 ರೂಪಾಯಿ, ಗುಣಮಟ್ಟದ ಸೇವಂತಿಗೆ 20 ರೂಪಾಯಿ ಸಿಗುತ್ತಿದೆ. ಇದರಿಂದ ಮನನೊಂದ ರೈತರು ತಾವು ತಂದಿದ್ದ ಹೂವುಗಳನ್ನು ತಮ್ಮ ಕೈಯಾರೆ ತಿಪ್ಪೆಗೆ ಸುರಿದು ರೈತರ ಬಾಳೆ ಇಷ್ಟು ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲರ್ ಕಲರ್ ಗುಲಾಬಿಗೆ ಬೆಲೆ ಇಲ್ಲ

ಕೆಲವು ರೈತರು ಹೂವುಗಳನ್ನು ಬಿಡಿಸಿ ಮಾರುಕಟ್ಟೆಗೆ ತಂದರೆ.. ಕೆಜಿ ಹೂವಿಗೆ ಐದಾರು ರೂಪಾಯಿ ಖರ್ಚು ಬರುತ್ತದೆ. ಮೊದಲೆ ಹೂವುಗಳಿಗೆ ಬೆಲೆ ಇಲ್ಲ. ನಷ್ಟದ ಮೇಲೆ ಮತ್ಯಾಕೆ ನಷ್ಟ ಮಾಡಿಕೊಳ್ಳುವುದು ಅಂತ ಜಮೀನಿನಲ್ಲೆ ಹೂದೋಟ ಉಳುಮೆ ಮಾಡಿ ನಾಶಪಡಿಸುತ್ತಿದ್ದಾರೆ.

ಇದನ್ನೂ ಓದಿ

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಚಿಕಿತ್ಸೆ ಪುನಾರಂಭ.. ತಪ್ಪಿತು ಕ್ಯಾನ್ಸರ್ ರೋಗಿಗಳ ಪರದಾಟ

ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್​ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು..

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ