ದೂರಿನ ಬೆನ್ನಲ್ಲೇ ಅರೆಸ್ಟ್ ಆಗಿಬಿಡ್ತಾರಾ ರಮೇಶ್ ಜಾರಕಿಹೊಳಿ? ಎಸ್‌ಐಟಿ ಮುಂದಿನ ನಡೆ ಏನು?
ಅರೆಸ್ಟ್ ಆಗಿಬಿಡ್ತಾರಾ ಜಾರಕಿಹೊಳಿ? ಮಾಜಿ ಸಚಿವರಿಗೆ ನಿಜಕ್ಕೂ ಬಂಧನ ಭೀತಿ ಎದುರಾಗಿಬಿಡ್ತಾ? ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿಯಲ್ಲಿದ್ದ ಯುವತಿ ದೂರು ಲಿಖಿತ ದೂರು ನೀಡಿರುವ ಬೆನ್ನಲ್ಲೇ ಜಾರಕಿಹೊಳಿ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿದೆ.
ಬೆಂಗಳೂರು: ಅರೆಸ್ಟ್ ಆಗಿಬಿಡ್ತಾರಾ ಜಾರಕಿಹೊಳಿ? ಮಾಜಿ ಸಚಿವರಿಗೆ ನಿಜಕ್ಕೂ ಬಂಧನ ಭೀತಿ ಎದುರಾಗಿಬಿಡ್ತಾ? ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿಯಲ್ಲಿದ್ದ ಯುವತಿ ದೂರು ಲಿಖಿತ ದೂರು ನೀಡಿರುವ ಬೆನ್ನಲ್ಲೇ ಜಾರಕಿಹೊಳಿ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿದೆ. ದೂರಿನ ಆಧಾರದಲ್ಲಿ ಹೇಗಿರಲಿದೆ ಎಸ್‌ಐಟಿ ಮುಂದಿನ ನಡೆ ಎಂಬ ಬಗ್ಗೆ ಟಿವಿ9 ತನಿಖೆಯ ಮುಂದಿನ ಹಾದಿಯ ಸ್ಪಷ್ಟ ಚಿತ್ರಣ ತೆರೆದಿಡುತ್ತಿದೆ.
ಸದ್ಯಕ್ಕೆ ರಮೇಶ್ ಜಾರಕಿಹೊಳಿ ಅರೆಸ್ಟ್ ಸಾಧ್ಯತೆ ಕಡಿಮೆಯಾಗಿದೆ. ಯಾಕಂದ್ರೆ ಈ ರೀತಿ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಅಗತ್ಯ. ಸಂತ್ರಸ್ತ ಮಹಿಳೆಯ ವೈದ್ಯಕೀಯ ಪರೀಕ್ಷೆ ಆಗಲೇಬೇಕು. ಆನಂತರ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಬಹುಮುಖ್ಯವಾಗಿರುತ್ತದೆ. ಸಿಆರ್‌ಪಿಸಿ 164 ಪ್ರಕಾರ ಸಂತ್ರಸ್ತೆ ಹೇಳಿಕೆ ದಾಖಲಿಸಬೇಕು.
ಸಂತ್ರಸ್ತೆಯ ದೂರು, FIR ದಾಖಲು ಬಳಿಕ ಮುಂದೇನು? ಮೊದಲು ಠಾಣೆಯಿಂದ ಎಸ್‌ಐಟಿಗೆ ಕೇಸ್ ವರ್ಗಾವಣೆಯಾಗುತ್ತದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಮೂವರು ಮಹಿಳಾ ACPಗಳು ಇದ್ದು, ಎಸಿಪಿ ಶ್ರೇಣಿ ಮಹಿಳಾ ಅಧಿಕಾರಿ ಈ ತನಿಖೆಗೆ ನೇಮಕವಾಗಬೇಕು. ಸಂತ್ರಸ್ತೆಗೆ ನೋಟಿಸ್ ನೀಡಿ ಎಸಿಪಿ ತನಿಖೆ ಆರಂಭಿಸಲಿದ್ದಾರೆ. ಮೂರು ಮೂರು ದಿನ ಅಂತರದಲ್ಲಿ 3 ಬಾರಿ ನೋಟಿಸ್ ನೀಡಿ ಕೇಸ್ ಪ್ರಗತಿ ಬಗ್ಗೆ ನಿರಂತರವಾಗಿ ಕೋರ್ಟ್‌ಗೆ ಮಾಹಿತಿ ನೀಡಲಿದ್ದಾರೆ. SIT ಅಧಿಕಾರಿಗಳು ಕೇಸ್ ಡೈರಿ ಫೈಲ್ ಮಾಡಲಿದ್ದಾರೆ.
ರಮೇಶ ಜಾರಕಿಹೊಳಿ ನಿವಾಸಕ್ಕೆ ಬಾಲಚಂದ್ರ ಜಾರಕಿಹೊಳಿ ಭೇಟಿ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡುತ್ತಿದ್ದಂತೆ ರಮೇಶ್ ಜಾರಕಿಹೊಳಿಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿ ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ರಮೇಶ್ ನಿವಾಸಕ್ಕೆ ಬಾಲಚಂದ್ರ ಜಾರಕಿಹೊಳಿ ಬಂದು ಮಾತುಕತೆ ನಡೆಸಿದ್ದಾರೆ. ದೂರು ಸಂಬಂಧ ಜಾರಕಿಹೊಳಿ ಬ್ರದರ್ಸ್ ಮಾತುಕತೆ ಮಾಡಿದ್ದಾರೆ. ಮುಂದಿನ ನಡೆ ಬಗ್ಗೆಯೂ ಜಾರಕಿಹೊಳಿ ಬ್ರದರ್ಸ್ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಸಿಡಿ ಲೇಡಿ ದೂರು ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲು
ನಾಳೆಯಿಂದ ನಮ್ಮ ಆಟ ಶುರು; ಸರ್ಕಾರವನ್ನೇ ತೆಗೆದಿದ್ದೇವೆ, ಇದ್ಯಾವ ಲೆಕ್ಕ? ರಮೇಶ್ ಜಾರಕಿಹೊಳಿ ಸವಾಲ್
Published On - 4:15 pm, Fri, 26 March 21