Ramesh Jarkiholi: ನಾಳೆಯಿಂದ ನಮ್ಮ ಆಟ ಶುರು; ಸರ್ಕಾರವನ್ನೇ ತೆಗೆದಿದ್ದೇವೆ, ಇದ್ಯಾವ ಲೆಕ್ಕ? ರಮೇಶ್ ಜಾರಕಿಹೊಳಿ ಸವಾಲ್
Ramesh Jarkiholi Reaction: ಸಿಡಿ ಲೇಡಿ ನೀಡಿದ ಲಿಖಿತ ದೂರಿಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಅವರು ಪ್ರಕರಣದ ಕೊನೆಯ ಅಸ್ತ್ರವನ್ನು ಬಿಟ್ಟಿದ್ದಾರೆ. ನಾನು ಯಾವುದಕ್ಕೂ ಅಂಜುವ ವ್ಯಕ್ತಿಯಲ್ಲ. ನಾನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿರುವೆ. ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ, ಇದ್ಯಾವ ಲೆಕ್ಕ ಎಂದು ಹೇಳಿದ್ದಾರೆ.
ಬೆಂಗಳೂರು: ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ. ಇನ್ನೂ 10 CDಗಳು ಬಂದರೂ ಎದುರಿಸಲು ಸಿದ್ಧರಿದ್ದೇವೆ. ಮಹಾನಾಯಕ ಯಾರೆಂದು ಗೊತ್ತಾಗಲಿದೆ ಎಂದು ಬೆಂಗಳೂರಿನಲ್ಲಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ, ವಕೀಲರ ಜೊತೆ 2 ಗಂಟೆಗಳ ಕಾಲ ಚರ್ಚಿಸಿ, ಸಹೋದರ ಬಾಲಚಂದ್ರ ಜಾರಕಿಹೊಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಇದೀಗ ಹೀಗೆ ಹೇಳಿಕೆ ಸವಾಲ್ ಹಾಕಿದ್ದಾರೆ.
ಸಿಡಿ ಲೇಡಿ ನೀಡಿದ ಲಿಖಿತ ದೂರಿಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಅವರು ಪ್ರಕರಣದ ಕೊನೆಯ ಅಸ್ತ್ರವನ್ನು ಬಿಟ್ಟಿದ್ದಾರೆ. ನಾನು ಯಾವುದಕ್ಕೂ ಅಂಜುವ ವ್ಯಕ್ತಿಯಲ್ಲ. ನಾನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿರುವೆ. ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ, ಇದ್ಯಾವ ಲೆಕ್ಕ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಪ್ರಕರಣ ಸಂಬಂಧ ನಾನು ಮೊದಲು ದೂರು ನೀಡಿದ್ದೇನೆ. ನನ್ನ ದೂರಿನ ಬಗ್ಗೆ ಏನಾಗಿದೆ ಎಂದು ಕೇಳುತ್ತೇನೆ. ಪೊಲೀಸ್ ಆಯುಕ್ತ ಕಮಲ್ ಪಂತ್‌ರನ್ನು ಕೇಳುತ್ತೇನೆ. ಮೊದಲು ನನ್ನ ಎಫ್‌ಐಆರ್ ಬಗ್ಗೆ ತನಿಖೆಯಾಗಬೇಕು. ನನ್ನ ವಿರುದ್ಧದ ಷಡ್ಯಂತ್ರದ ಬಗ್ಗೆ ಗೃಹ ಸಚಿವರಿಗೆ ಹೇಳಿದ್ದೇನೆ ಎಂದೂ ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇದನ್ನೂ ಓದಿ: 2 ಗಂಟೆ ಕಾಲ ವಕೀಲರ ಜೊತೆ ಚರ್ಚಿಸಿ, ಸಹೋದರ ಬಾಲಚಂದ್ರ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದ ರಮೇಶ್ ಜಾರಕಿಹೊಳಿ
ಯುವತಿ ಕೈ ಬರಹದಲ್ಲಿ.. ನನ್ನನ್ನು ಕೊಲೆ ಮಾಡುವುದಕ್ಕೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ದೂರು
Published On - 3:20 pm, Fri, 26 March 21