ಅತ್ಯಾಚಾರದ ಕೇಸ್ ದಾಖಲಿಸಿಕೊಂಡು ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ: ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್

ಪ್ರಕರಣದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು. ದಿಕ್ಕು ತಪ್ಪಿಸಲು ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳೇ ಸಾಕ್ಷಿ. ಇದಕ್ಕೆ ಅವಕಾಶ ನೀಡದಂತೆ ಕೂಡಲೇ ಬಂಧಿಸಲು ಆಗ್ರಹ ಮಾಡಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸಿ ಎಂದು ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್ ಮಾಡಿದೆ.

ಅತ್ಯಾಚಾರದ ಕೇಸ್ ದಾಖಲಿಸಿಕೊಂಡು ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ: ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್
ರಮೇಶ್​ ಜಾರಕಿಹೊಳಿ
Follow us
preethi shettigar
| Updated By: ganapathi bhat

Updated on: Mar 26, 2021 | 4:38 PM

ಬೆಂಗಳೂರು: ಯುವತಿ ನೀಡಿರುವ ದೂರಿನ ಬಗ್ಗೆ ರಮೇಶ್​ ಜಾರಕಿಹೊಳಿ ನೀಡಿರುವ ಹೇಳಿಕೆಗೆ ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್ ಮಾಡುವ ಖಾರವಾಗಿ ಪ್ರತಿಕ್ರಿಯಿಸಿದೆ. ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿಯವರೇ, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರೇ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೇ ದೂರು ಬರುವವರೆಗೂ, ಬರಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಿರಿ ಈಗ ದೂರು ಬಂದಿದೆ ಇನ್ನೂ ಏಕೆ ತಡ ಮಾಡುತ್ತಿದ್ದೀರಿ? ಯುವತಿಯ ದೂರಿನ ಪ್ರಕಾರ ಕ್ರಮ ಕೈಗೊಂಡು ಅತ್ಯಾಚಾರದ ಕೇಸ್ ದಾಖಲಿಸಿ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.

ಅಂತಹ ಸರ್ಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ, ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್​ ಘಟಕ ಅಂತಹ ಸರ್ಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ, ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ. ಇದು ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳು. ಪ್ರಕರಣದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು. ದಿಕ್ಕು ತಪ್ಪಿಸಲು ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳೇ ಸಾಕ್ಷಿ. ಇದಕ್ಕೆ ಅವಕಾಶ ನೀಡದಂತೆ ಕೂಡಲೇ ಬಂಧಿಸಲು ಆಗ್ರಹ ಮಾಡಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸಿ ಎಂದು ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್ ಮಾಡಿದೆ.

ಇದನ್ನೂ ಓದಿ:

ಅಜ್ಞಾತ ಸ್ಥಳದಲ್ಲಿದ್ದು ಬೆತ್ತಲೆ ಪ್ರದರ್ಶನಕ್ಕೆ ಸಿದ್ಧವಾಗಿರುವ ಯುವತಿ ಬಗ್ಗೆ ನಾನೇಕೆ ಹೆದರಬೇಕು? ಎದುರಿಸ್ತೇನೆ- ರಮೇಶ್ ಜಾರಕಿಹೊಳಿ

ನಾಳೆಯಿಂದ ನಮ್ಮ ಆಟ ಶುರು; ಸರ್ಕಾರವನ್ನೇ ತೆಗೆದಿದ್ದೇವೆ, ಇದ್ಯಾವ ಲೆಕ್ಕ? ರಮೇಶ್ ಜಾರಕಿಹೊಳಿ ಸವಾಲ್