AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಞಾತ ಸ್ಥಳದಲ್ಲಿದ್ದು ಬೆತ್ತಲೆ ಪ್ರದರ್ಶನಕ್ಕೆ ಸಿದ್ಧವಾಗಿರುವ ಯುವತಿ ಬಗ್ಗೆ ನಾನೇಕೆ ಹೆದರಬೇಕು? ಎದುರಿಸ್ತೇನೆ- ರಮೇಶ್ ಜಾರಕಿಹೊಳಿ

ಆ ಯುವತಿ ಯಾವ ಕೇಸ್ ದಾಖಲಿಸುವರೋ ದಾಖಲಿಸಲಿ. ನಾನು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧನಿದ್ದೇನೆ. ನಾನು ವಕೀಲರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ. ನಾನು ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಲು ಹೋಗುವುದಿಲ್ಲ: ಶಾಸಕ ರಮೇಶ್ ಜಾರಕಿಹೊಳಿ

ಅಜ್ಞಾತ ಸ್ಥಳದಲ್ಲಿದ್ದು ಬೆತ್ತಲೆ ಪ್ರದರ್ಶನಕ್ಕೆ ಸಿದ್ಧವಾಗಿರುವ ಯುವತಿ ಬಗ್ಗೆ ನಾನೇಕೆ ಹೆದರಬೇಕು? ಎದುರಿಸ್ತೇನೆ- ರಮೇಶ್ ಜಾರಕಿಹೊಳಿ
‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿ ಎದುರು ಹೇಳಿಕೆ ಕೊಟ್ಟ ನರೇಶ್
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Mar 26, 2021 | 12:55 PM

ಬೆಂಗಳೂರು: ‘ಜಗತ್ತಿಗೇ ತನ್ನ ಬೆತ್ತಲೆ ಫೋಟೋ ಪ್ರದರ್ಶಿಸಿರುವ ಯುವತಿ ನನ್ನ ವಿರುದ್ಧ ಹೇಳಿಕೆ ಕೊಡುವುದು ದೊಡ್ಡ ವಿಷಯವಲ್ಲ. ನಾನೇಕೆ ಇದಕ್ಕೆ ಹೆದರಬೇಕು, ಎಲ್ಲವನ್ನು ಎದುರಿಸುತ್ತೇನೆ’ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಯುವತಿ ಯಾವ ಕೇಸ್ ದಾಖಲಿಸುವರೋ ದಾಖಲಿಸಲಿ. ನಾನು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧನಿದ್ದೇನೆ. ನಾನು ವಕೀಲರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ. ನಾನು ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಬಿಡುಗಡೆಯಾಗಿದೆ ಮೂರನೇ ವಿಡಿಯೋ!

ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ. ವಕೀಲ ಜಗದೀಶ್ ಮೂಲಕ ದೂರು ನೀಡುತ್ತೇನೆ. 24 ದಿನದಿಂದ ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ಕಂಗಾಲಾಗಿದ್ದೆ. ಎಲ್ಲ ಪಕ್ಷದ ನಾಯಕರು, ಎಲ್ಲ ಸಂಘಟನೆಗಳು, ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ, ಈಗ ನನಗೆ ಧೈರ್ಯ ಬಂದಿದೆ. ನನಗೆ ಧೈರ್ಯ ಬಂದಿರುವುದರಿಂದ ದೂರು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡ್ತಿದ್ದೇನೆ’ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ.

ಪ್ರಕರಣ ದಾಖಲಿಸಲು ಯುವತಿಗೆ ಯಾರು ನೆರವಾಗಲಿದ್ದಾರೆ?

ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ. ದೂರಿನ ಪ್ರತಿಯನ್ನು ನಾನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತೇನೆ. ಆಕೆಗೆ ಭಯ ಇರುವ ಕಾರಣ ನನ್ನ ಮೂಲಕ ದೂರು ನೀಡುತ್ತಾಳೆ ಎಂದು ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಪರ ವಕೀಲ ಜಗದೀಶ್ ಟಿವಿ 9 ಕನ್ನಡಕ್ಕೆ ಹೇಳಿಕೆ ನೀಡಿದ್ದಾರೆ.ಯುವತಿ ಆರೋಪಿಸುತ್ತಿರುವ ವ್ಯಕ್ತಿ ಪ್ರಭಾವಶಾಲಿಯಾಗಿದ್ದಾರೆ. ಹೀಗಾಗಿ ಭದ್ರತೆಯ ಕಾರಣದಿಂದ ನಮ್ಮ ಮುಖಾಂತರ ದೂರು ಕೊಡಿಸುತ್ತಿದ್ದಾರೆ. ಈ ಮೊದಲೇ ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನನ್ನನ್ನೂ ಸೇರಿ 8 ವಕೀಲರು ಸಹಾಯ ಮಾಡುತ್ತಿದ್ದೇವೆ. ಸಿಡಿಯಲ್ಲಿರುವ ಯುವತಿ ಸಾಮಾನ್ಯ ಮಹಿಳೆಯಾಗಿದ್ದಾರೆ. ಹೀಗಾಗಿ ಆಕೆ ಪೊಲೀಸರಿಗೆ ಹೇಳಿಕೆ ನೀಡುವುದಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ ಎಂದು ವಕೀಲ ಜಗದೀಶ್ ಕೆ ಎನ್​ ಮಹದೇವ್​ ತಿಳಿಸಿದ್ದಾರೆ.

ಆಕೆಯ ಬಳಿ ಸಾಕ್ಷ್ಯಗಳು ಇವೆಯೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕೆ ಆ ಯುವತಿಗೆ ಸಹಾಯ ಮಾಡುತ್ತಿದ್ದೇವಷ್ಟೇ. ತನಿಖೆಯ ಮೂಲಕ ಸತ್ಯಾಂಶ ಹೊರಗಡೆ ಬರುತ್ತದೆ. ಕಳೆದ ಕೆಲವು ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ನಾನು ಫೇಸ್‌ಬುಕ್ ಮೂಲಕ ಮನವಿ ಮಾಡಿದ್ದೆ. ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನಮ್ಮನ್ನು ನಂಬಿ ಆ ಯುವತಿ ಮುಂದೆ ಬಂದಿದ್ದಾರೆ. ಒಂದೆರಡು ದಿನದಲ್ಲಿ ಆ ಯುವತಿ ಮುಂದೆ ಬರಬಹುದು. ಯುವತಿ ಹೊರಗೆ ಬರಬಹುದು ಎಂದು ಅನಿಸುತ್ತಿದೆ. ನಾನು ಯಾವುದೇ ರೀತಿಯ ದೂರು ನೀಡುತ್ತಿಲ್ಲ. ಆ ಯುವತಿ ಕೊಟ್ಟಿರುವ ದೂರಿನ ಪ್ರತಿಯನ್ನು ಮಧ್ಯಾಹ್ನ 2.30ಕ್ಕೆ ಆಯುಕ್ತರಿಗೆ ಸಲ್ಲಿಸ್ತಿದ್ದೇವೆ. ಮುಂದಿನ ನಿರ್ಧಾರ ಪೊಲೀಸ್ ಆಯುಕ್ತರಿಗೆ ಬಿಟ್ಟದ್ದು. CDಯಲ್ಲಿದ್ದ ಯುವತಿ ತಂದೆ-ತಾಯಿಗೆ ರಕ್ಷಣೆ ನೀಡಿದರೆ ನಾಳೆಯೇ ಯುವತಿ ಹೊರಗೆ ಬರಬಹುದು ಎಂದು ಯುವತಿ ಪರ ವಕೀಲ ಜಗದೀಶ್ ಕೆ ಎನ್​ ಮಹದೇವ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮೂರನೇ ಸಿಡಿ ಬಿಡುಗಡೆ: ಜೀವ ಬೆದರಿಕೆ ಇದೆ; ರಮೇಶ್ ಜಾರಕಿಹೊಳಿ ವಿರುದ್ಧ ಮಧ್ಯಾಹ್ನ ದೂರು ಕೊಡುವೆ ಎಂದ ಯುವತಿ

ಸಿಡಿ ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ; ಅದನ್ನು ಪೊಲೀಸ್ ಆಯುಕ್ತರಿಗೆ ಮಧ್ಯಾಹ್ನ ತಲುಪಿಸ್ತೇನೆ; ಯುವತಿ ಪರ ವಕೀಲ ಜಗದೀಶ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನಿಜ ಸಂತ್ರಸ್ಥ ಜಾರಕಿಹೊಳಿನೂ ಅಲ್ಲ; ಸಿಡಿ ಲೇಡಿಯೂ ಅಲ್ಲ? ಮತ್ಯಾರು?

Published On - 12:46 pm, Fri, 26 March 21

ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್