ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನಿಜ ಸಂತ್ರಸ್ಥ ಜಾರಕಿಹೊಳಿನೂ ಅಲ್ಲ; ಸಿಡಿ ಲೇಡಿಯೂ ಅಲ್ಲ? ಮತ್ಯಾರು?
ರಮೇಶ್ ಜಾರಕಿಹೊಳಿ ಸಿಡಿ ಹೊರಬಂದು 23 ದಿನಗಳು ಕಳೆದರೂ ಶಂಕಿತ ಆರೋಪಿಗಳಾದ ನರೇಶ್ ಗೌಡ, ಶ್ರವಣ್ ಹಾಗೂ ಸಂತ್ರಸ್ತ ಯುವತಿಯನ್ನ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ರಚಿಸಿ ಶೋಧ ನಡೆಸುತ್ತಿದ್ದರೂ ಶಂಕಿತರ ಮಾತ್ರ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದ್ದ ಎಸ್ಐಟಿಯ ತಂಡವು ಹೊರರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ನಿಜ ಸಂತ್ರಸ್ಥರು ಯಾರು? ಇಲ್ಲಿ ನಿಜ ಸಂತ್ರಸ್ಥರು ರಮೇಶ್ ಜಾರಕಿಹೊಳಿನಾ? ಅಥವಾ ಸಿಡಿ ಲೇಡಿನಾ? ಎಂಬ ಪ್ರಶ್ನೆ ಎದ್ದಿದೆ. ಗೌರಿ ಲಂಕೇಶ್ ಪ್ರಕರಣ ಬೇಧಿಸಿದ ತಂಡಕ್ಕೆ ಈ ಕೇಸ್ ಯಾಕೆ ತಲೆ ನೋವಾಗಿದೆ? ಎಂಬ ಮಾಹಿತಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಕೇಸ್ನಲ್ಲಿ ನಿಜ ಸಂತ್ರಸ್ಥರಾಗಿರೋದು ರಮೇಶ್ ಜಾರಕಿಹೊಳಿ ಅಲ್ವೇ ಅಲ್ಲ. ಸಿಡಿ ಲೇಡಿಯೂ ಸಂತ್ರಸ್ಥೆಯಲ್ಲ, ಇಲ್ಲಿ ನಿಜ ಸಂತ್ರಸ್ಥರು ಎಸ್ಐಟಿ ಅಧಿಕಾರಿಗಳು. ನಾವು ಯಾಕೆ ಈ ರೀತಿ ಹೇಳ್ತಿದ್ದೀವಿ ಅಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಎಸ್ಐಟಿ ಅಧಿಕಾರಿಗಳು ನಿಜವಾದ ಸಂತ್ರಸ್ಥರಾಗಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದುವರೆಗೂ ಇದೊಂದು ಫೇಕ್ ಸಿಡಿ ಎಂದು ಗಂಟು ಬಿದ್ದಿದ್ದಾರೆ. ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ಫೇಕ್ ಸಿಡಿ ಅನ್ನೋದಕ್ಕೆ ಜೋತುಬಿದ್ದಿದ್ದಾರೆ. ಯುವತಿ ಜೊತೆ ಜಾರಕಿಹೊಳಿ ಸಂಪರ್ಕದಲ್ಲಿದ್ದಿದ್ದು ಸತ್ಯ. ಹನಿಟ್ರ್ಯಾಪ್ ಆಗಿರೋದು ಕೂಡ ರಮೇಶ್ ಜಾರಕಿಹೊಳಿಗೆ ಅರಿವಿಗಿದೆ. ವಿಡಿಯೋ ಇರೋದು ಸತ್ಯ ಅನ್ನೋದು ಕೂಡ ಗೊತ್ತಿರುವ ಸಂಗತಿನೇ. ಆದರೆ ನಿಜಕ್ಕೂ ಏನಾಗಿದೆ ಅನ್ನೋ ಸತ್ಯಸಂಗತಿ ಬಗ್ಗೆ ದೂರು ನೀಡಲು ರಮೇಶ್ ಹಿಂದೇಟು ಹಾಕುತ್ತಿದ್ದಾರಂತೆ. ನಡೆದ ಘಟನೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದು ಇದೇ ಎಸ್ಐಟಿಗೆ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.
ಹಾಗಾದ್ರೆ ವಿಡಿಯೋದಲ್ಲಿರುವ ಯುವತಿ ನಿಜ ಸಂತ್ರಸ್ಥರಾ? ಸದ್ಯ ರಿಲೀಸ್ ಆದ ವಿಡಿಯೋದಲ್ಲಿ ಯುವತಿಗೆ ಬಲತ್ಕಾರ, ಕಿರುಕುಳ ಕೊಟ್ಟಿರೊ ರೀತಿಯೂ ಕಾಣಿಸುತ್ತಿಲ್ಲ. ಆಕೆಯೇ ಮಾಡಿರುವಂತ ವಿಡಿಯೋ ಸಾಕ್ಷಿ ಕೂಡ ಲಭ್ಯವಾಗಿದೆ. 5 ಬಾರಿ ನೋಟಿಸ್ ಕೊಟ್ಟರೂ ಸಿಡಿ ಲೇಡಿ ಎಸ್ಐಟಿ ಮುಂದೆ ಹಾಜರಾಗಿಲ್ಲ. ಸಿಡಿ ಲೇಡಿ ಬಂದು ಸರಿಯಾದ ದೂರನ್ನೂ ಕೂಡ ದಾಖಲಿಸ್ತಿಲ್ಲ. ವಿಡಿಯೋ ಮೂಲಕವೇ ಎಸ್ಐಟಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ವಿಡಿಯೋ ಮೂಲಕ ಪ್ರತ್ಯಕ್ಷವಾಗಿ ಕಾಣೆಯಾಗ್ತಿದ್ದಾರೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಸಿಡಿ ಲೇಡಿ ಕೂಡ ಸಂತ್ರಸ್ಥೆಯಲ್ಲ.
ರಮೇಶ್, ಯುವತಿ ನಡುವೆ ಸಿಕ್ಕಿ ಹಾಕಿಕೊಂಡ ಎಸ್ಐಟಿ ರಮೇಶ್ ಜಾರಕಿಹೊಳಿ, ಸಿಡಿ ಲೇಡಿಯದ್ದು ಈ ಕಥೆ ಆದ್ರೆ ಸರ್ಕಾರದ್ದು ಮತ್ತೊಂದು ರೀತಿಯ ಕಹಾನಿ. ಮೊದಲು ಎಸ್ಐಟಿ ರಚನೆ ಮಾಡಿದ್ರೂ ಅದಕ್ಕೆ ಪವರ್ ನೀಡಿರಲಿಲ್ಲ. ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ರೂ ಎಫ್ಐಆರ್ ಆಗಿರಲಿಲ್ಲ. ಎಫ್ಐಆರ್ ಮಾಡೋದು ಬೇಡ ಬೇಡ ಬೇಡ ಅಂತಾ ಪೊಲೀಸರಿಗೆ ಸರ್ಕಾರ ಹೇಳಿತ್ತು. ರಮೇಶ್ ಜಾರಕಿಹೊಳಿ, ಸಿಡಿ ಲೇಡಿ, ಸರ್ಕಾರದ ಮಧ್ಯೆ ಸಿಲುಕಿ ಬಡವಾಗಿರುವ ಎಸ್ಐಟಿ, ಸದ್ಯದ ಮಟ್ಟಿಗೆ ಇಲ್ಲಿ ಎಲ್ಲರಿಗಿಂತ ಅತಂತ್ರ ಪರಿಸ್ಥಿತಿಯಲ್ಲಿರೋದು ಎಸ್ಐಟಿ ಅಧಿಕಾರಿಗಳು. ಸಿಡಿ ಕೇಸ್ ಪ್ರಕರಣ ಎಸ್‌ಐಟಿಗೆ ನಿಜಕ್ಕೂ ತಲೆ ನೋವಾಗಿದೆ. ಎರಡನೇ ಸಿಡಿ ಬಿಡುಗಡೆ ಬಳಿಕ ಎಸ್‌ಐಟಿಗೆ ಶಾಕ್ ಆಗಿದ್ದು ನಿನ್ನೆ (ಮಾರ್ಚ್ 25) ಇಡೀ ದಿನ ಎಸ್‌ಐಟಿ ಅಧಿಕಾರಿಗಳು ಸಭೆ ಮಾಡಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿಯನ್ನ ಹಂಚಿಕೊಂಡಿದ್ದು ಇದುವರೆಗೂ ನಡೆದಿರುವ ಪ್ರಕರಣದ ತನಿಖೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಎಸ್‌ಐಟಿ ತನಿಖೆಯನ್ನ ಪ್ರಶ್ನೆ ಮಾಡಿದ ಸಿಡಿ ಲೇಡಿ ಇನ್ನು ಮಾರ್ಚ್ 25ರಂದು ಬಿಡುಗಡೆಯಾದ ಮತ್ತೊಂದು ವಿಡಿಯೋದಲ್ಲಿ ಸಿಡಿ ಲೇಡಿಯ ರಾಜ್ಯದ ಉತ್ತಮ ಅಧಿಕಾರಿಗಳ ತಂಡವನ್ನ ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಮಾಡಿರುವುದೇ ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ಪ್ರಗತಿ ನೋಡಿತಿದ್ದರೇ ಆಕೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಯುವತಿಯನ್ನ ಬಳಸಿಕೊಂಡು ಸಿಡಿ ಗ್ಯಾಂಗ್ ಹನಿ ಟ್ರ್ಯಾಪ್ ಮಾಡಿರುವ ಬಗ್ಗೆ ಸಾಕಷ್ಟು ಮಾಹಿತಿ ಕೂಡ ಸಿಕ್ಕಿದೆ. ಯುವತಿಯ ವಿರುದ್ಧವೇ ಸಾಕ್ಷಿಗಳು ಲಭ್ಯವಾಗಿರುವುದಕ್ಕೆ ದಾರಿ ತಪ್ಪಿಸುವ ಪ್ರಯತ್ನಕ್ಕೆ ಮತ್ತೊಂದು ಸಿಡಿ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ.
ಇನ್ನು ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿಯ ಆರೋಪವನ್ನ ಎಸ್ಐಟಿ ಕೇರ್ ಮಾಡುತ್ತಿಲ್ಲ. ಈಗಾಗಲೇ ಎಸ್ಐಟಿಯಿಂದ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಸಂಗ್ರಹಣೆ ಮಾಡಲಾಗಿದೆ. ಇದುವರೆಗೂ ಸೆಕ್ಷನ್ 164ರಡಿಯಲ್ಲಿ ನ್ಯಾಯಾಧೀಶರ ಮುಂದೆ ಐವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಸಾಕ್ಷಿ ನಂ: ಆಕಾಶ್ ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿಯ ಸ್ನೇಹಿತ ಆಕಾಶ್ ಶಂಕಿತರ ನೆರವಿನಿಂದ ಯುವತಿಯೊಂದಿಗೆ ಗೋವಾಕ್ಕೆ ತೆರಳಿದ್ದ. ಎಸ್ಐಟಿ ಮುಂದೆ ಈ ಬಗ್ಗೆ ಆಕಾಶ್ ಹೇಳಿಕೆ ನೀಡಿದ್ದಾನೆ.
ಸಾಕ್ಷಿ ನಂ 2: ಸವಿತಾ ಗೋವಾದ ಹೋಟಲ್ವೊಂದರ ಮಾಲಕಿಯಾಗಿರುವ ಸವಿತಾ. ಯುವತಿ ಹಾಗೂ ಆಕೆಯ ಸ್ನೇಹಿತ ಆಕಾಶ್ಗೆ ಗೋವಾದಲ್ಲಿ ಆಶ್ರಯ ನೀಡಿದ್ದರು. ಸವಿತಾಗೆ ಕೆಲಸ ವಹಿಸಿದ್ದು ಶಂಕಿತ ಆರೋಪಿ ನರೇಶ್ ಆಪ್ತ ಶಿವಕುಮಾರ್. ಉದ್ಯಮಿ ಶಿವಕುಮಾರ್, ಸವಿತಾಗೆ ಪರಿಚಿತನಾಗಿದ್ದ. ಸದ್ಯ ಶಿವಕುಮಾರ್ ಸಹ ಎಸ್ಐಟಿ ಕೈಗೆ ಸಿಗದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಸವಿತಾ ಹೇಳಿಕೆಯನ್ನು ದಾಖಲಿಸಲಾಗಿದೆ.
ಸಾಕ್ಷಿ ನಂ 3: ಮೋಹನ್ ದೇವನಹಳ್ಳಿ ಬಳಿಯ ವಿಜಯಪುರದ ನಿವಾಸಿ ಮೋಹನ್, ಶಂಕಿತ ಆರೋಪಿ ಶ್ರವಣ್ ನಿಂದ ಹಣ ಪಡೆದು ಆತನ ಸಹೋದರ ಚೇತನ್ ಗೆ ಹಣ ನೀಡಿದ್ದ. ಬ್ಲ್ಯಾಕ್ ಮನಿಯನ್ನ ವೈಟ್ ಮನಿಯಾಗಿ ಚೇತನ್ಗೆ ಮೋಹನ್ ನೀಡಿದ್ದ. ಮೋಹನ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಸಾಕ್ಷಿ ನಂ 4: ಖಾಸಗಿ ಟ್ರಾವೆಲ್ಸ್ ಮಾಲೀಕ ನರೇಶ್ ಯುವತಿ ಹಾಗೂ ಆಕಾಶ್ರನ್ನ ಖಾಸಗಿ ಬಸ್ನಲ್ಲಿ ಗೋವಾಗೆ ಕಳಿಸಿದ್ದ. ಚರ್ಚ್ ಸ್ಟ್ರೀಟ್ ಬಳಿಯ ಖಾಸಗಿ ಟ್ರಾವೆಲ್ಸ್ ಒಂದರಲ್ಲಿ ಟಿಕೆಟ್ ಬುಕ್ ಮಾಡಿದ್ದ. ಎಸ್ಐಟಿ ಟ್ರಾವೆಲ್ಸ್ ಮಾಲೀಕನ ಹೇಳಿಕೆ ಪಡೆದಿದ್ದಾರೆ.
ಸಾಕ್ಷಿ ನಂ 5: ಇಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕ. ಎಸ್.ಪಿ ರಸ್ತೆಯ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನ ಹೇಳಿಕೆ ಸಹ ದಾಖಲಿಸಿಕೊಳ್ಳಲಾಗಿದೆ. ಫೆಬ್ರವರಿಯಲ್ಲಿ ಶಂಕಿತರಿಂದ 1 ಲಕ್ಷಕ್ಕೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣ ಖರೀದಿ ಮಾಡಲಾಗಿತ್ತು. ಖುದ್ದು ಶ್ರವಣ್ ಎಲೆಕ್ಟ್ರಾನಿಕ್ ಉಪಕರಣ ಖರೀದಿಸಿದ್ದ.
ಇದನ್ನೂ ಓದಿ: ಈಗ ನನ್ನ ಜೇಬಿನಲ್ಲಿಯೇ ಎವಿಡೆನ್ಸ್ ಇದೆ, ಬಿಡುಗಡೆ ಮಾಡಿದರೆ ನೀವೇ ಶಾಕ್ ಆಗ್ತೀರಿ: ರಮೇಶ್ ಜಾರಕಿಹೊಳಿ