AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ಕಸ್ತೂರಬಾ ಮಹಿಳಾ ನಾಟಕೋತ್ಸವಕ್ಕೆ ಚಾಲನೆ

ಉದ್ಘಾಟನೆ ಬಳಿಕ ಮಾತನಾಡಿದ ಮಾಲತಿ ಸುಧೀರ್, ಮಹಿಳಾ ಕಲಾವಿದರನ್ನು ಗುರುತಿಸಿ, ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಧಾರವಾಡ ರಂಗಾಯಣ ಕಸ್ತೂರ ಬಾ ಹೆಸರಿನಲ್ಲಿ ಮಹಿಳಾ ನಾಟಕೋತ್ಸವ ಆಯೋಜಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಧಾರವಾಡದಲ್ಲಿ ಕಸ್ತೂರಬಾ ಮಹಿಳಾ ನಾಟಕೋತ್ಸವಕ್ಕೆ ಚಾಲನೆ
ನಾಟಕೋತ್ಸವದ ಮಡಿಕೆ ಪತ್ರ ಬಿಡುಗಡೆ
Follow us
sandhya thejappa
|

Updated on: Mar 26, 2021 | 11:42 AM

ಧಾರವಾಡ: ಧಾರವಾಡ ರಂಗಾಯಣವು ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಗಾಂಧೀಜಿ, ಕಸ್ತೂರಬಾ-150 ಮಹಿಳಾ ನಾಟಕೋತ್ಸವ, ವಿಚಾರ ಸಂಕಿರಣ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ವೃತ್ತಿ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ನಿನ್ನೆ (ಮಾರ್ಚ್ 25) ಉದ್ಘಾಟಿಸಿದರು. ಈ ಕಾರ್ಯಕ್ರಮವು ನಾಲ್ಕು ದಿನಗಳ ಕಾಲ ನಡೆಯಲಿದೆ.

ಮಹಿಳಾ ಕಲಾವಿದರನ್ನು ಗೌರವಿಸುವ ರಂಗಾಯಣದ ಕಾರ್ಯ ಸ್ತುತ್ಯಾರ್ಹ ಉದ್ಘಾಟನೆ ಬಳಿಕ ಮಾತನಾಡಿದ ಮಾಲತಿ ಸುಧೀರ್, ಮಹಿಳಾ ಕಲಾವಿದರನ್ನು ಗುರುತಿಸಿ, ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಧಾರವಾಡ ರಂಗಾಯಣ ಕಸ್ತೂರ ಬಾ ಹೆಸರಿನಲ್ಲಿ ಮಹಿಳಾ ನಾಟಕೋತ್ಸವ ಆಯೋಜಿಸಿರುವುದು ಸಂತಸ ತಂದಿದೆ ಎಂದು ಹೇಳಿದರು. ಡೆನ್ಮಾರ್ಕಿನ ಗಾರ್ಮೆಂಟ್ ಉದ್ಯಮದ ಮಹಿಳೆಯರು ಪ್ರಸೂತಿ ರಜೆಗಾಗಿ ಹೋರಾಟ ಮಾಡಿದರು. ಆ ಹೋರಾಟದ ಫಲವಾಗಿ ಮಾರ್ಚ್ 8 ರಂದು ಮಹಿಳಾ ಹಿತಕಾಯುವ ಆದೇಶ ಹೊರಡಿತು. ಆ ದಿನವನ್ನು ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಿಳಾ ಕಲಾವಿದರನ್ನು ಗೌರವಿಸುವ ಕಾರ್ಯವನ್ನು ಧಾರವಾಡ ರಂಗಾಯಣ ಮಾಡುತ್ತಿದೆ ಎಂದು ಹೇಳಿದರು.

ನಾಟಕೋತ್ಸವದ ಮಡಿಕೆ ಪತ್ರ ಬಿಡುಗಡೆ ನಾಟಕೋತ್ಸವದ ಮಡಿಕೆ ಪತ್ರ ಬಿಡುಗಡೆ ಮಾಡಿದ ವೃತ್ತಿ ರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ ನಟಿ ಜಯಲಕ್ಷ್ಮಿ ಪಾಟೀಲ್ ಮಾತನಾಡಿ, ಪ್ರೇಕ್ಷಕರು ಮುಗ್ಧ ಮನಸ್ಸಿನ ಕಲಾಪ್ರೇಮಿಗಳಾಗಿರುತ್ತಾರೆ. ನಾಟಕಗಳ ಮೂಲಕ ಸಹೃದಯರ ಮನಃಪರಿವರ್ತನೆ ಸಾಧ್ಯ ಎಂದರು. 1977ರ ಸಮಯದಲ್ಲಿ ಧಾರವಾಡದಲ್ಲಿ ಸುಳ್ಳದ ದೇಸಾಯರ ಕಂಪನಿಯು ಪ್ರದರ್ಶಿಸುತ್ತಿದ್ದ ಐತಿಹಾಸಿಕ ವೀರ ಸಿಂಧೂರ ಲಕ್ಷ್ಮಣ ನಾಟಕದಲ್ಲಿ ಅಭಿನಯಿಸಿದ ದಿನಗಳನ್ನು ಅವರು ನೆನಪಿಸಿಕೊಂಡರು.

ಸಾಧಕಿಯರಿಗೆ ಸನ್ಮಾನ ಮಾಡಲಾಯಿತು

ಹಿರಿಯ ವೃತ್ತಿ ರಂಗಭೂಮಿ ಕಲಾವಿದೆಯರಿಗೆ ಸನ್ಮಾನ ಈ ವೇಳೆ ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ ನಟಿ ಥೆರೇಸಮ್ಮ ಡಿಸೋಜ, ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಪುಷ್ಪಮಾಲಾ ಅಣ್ಣಿಗೇರಿ, ರಂಗಭೂಮಿ ಕಲಾವಿದೆ ಆರತಿ ದೇವಶಿಖಾಮಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್ ವಹಿಸಿದ್ದರು. ರಂಗ ಸಮಾಜದ ಸದಸ್ಯರಾದ ಹೆಲನ್ ಮೈಸೂರು, ಸಿದ್ಧರಾಮ ಹಿಪ್ಪರಗಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಗಣೇಶ ಪೂಜಾರ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಸ್ವಾಗತಿಸಿದರು. ಕೀರ್ತಿವತಿ ಕಾರ್ಯಕ್ರಮ ನಿರೂಪಿಸಿದರು.

ಜಯಲಕ್ಷ್ಮಿ ಪಾಟೀಲ್ ರಚಿಸಿ ಮತ್ತು ನಿರ್ದೇಶಿಸಿದ ‘ಓಂ ನಮೋ ಗುರುಪುಟ್ಟರಾಜ’ ನಾಟಕವನ್ನು ಕರ್ನಾಟಕ ಕಲಾ ವೈಭವ ಸಂಘದ ಕಲಾವಿದರು ಪ್ರದರ್ಶಿಸಿದರು.

ಇದನ್ನೂ ಓದಿ

ಮೈಸೂರು: ನಂಜನಗೂಡಿನಲ್ಲಿ ರಥೋತ್ಸವ ವೇಳೆ ವಿಘ್ನ; ಪ್ರದಕ್ಷಿಣೆ ಮುನ್ನವೇ ವಿಗ್ರಹ ಇಳಿಸಿದ ಅರ್ಚಕರು

ಧಾರವಾಡ ರಂಗಾಯಣದ ವತಿಯಿಂದ ಮಾರ್ಚ್ 25 – 28 ರ ವರೆಗೆ ಮಹಿಳಾ ನಾಟಕೋತ್ಸವ