ಧಾರವಾಡ ರಂಗಾಯಣದ ವತಿಯಿಂದ ಮಾರ್ಚ್ 25 – 28 ರ ವರೆಗೆ ಮಹಿಳಾ ನಾಟಕೋತ್ಸವ

ಮಾರ್ಚ್ 25 ರಂದು ಸಂಜೆ 6.30 ಕ್ಕೆ ಕಾರ್ಯಕ್ರಮವನ್ನು ವೃತ್ತಿರಂಗಭೂಮಿ ಕಲಾವಿದೆ ಮಾಲತಿ ಸುಧೀರ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವೃತ್ತಿರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ ನಟಿ ಜಯಲಕ್ಷ್ಮಿ ಪಾಟೀಲ ಮತ್ತು ಬೆಂಗಳೂರಿನ ಸಂಗೀತ ಮತ್ತು ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಬನಶಂಕರಿ ಅಂಗಡಿ ಪಾಲ್ಗೊಳ್ಳಲಿದ್ದಾರೆ.

ಧಾರವಾಡ ರಂಗಾಯಣದ ವತಿಯಿಂದ ಮಾರ್ಚ್ 25 - 28 ರ ವರೆಗೆ ಮಹಿಳಾ ನಾಟಕೋತ್ಸವ
ಧಾರವಾಡ ರಂಗಾಯಣ
Follow us
sandhya thejappa
|

Updated on:Mar 26, 2021 | 11:30 AM

ಧಾರವಾಡ: ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಧಾರವಾಡ ರಂಗಾಯಣದ ವತಿಯಿಂದ ಮಾರ್ಚ್ 25 ರಿಂದ 28ರ ವರೆಗೆ ಗಾಂಧೀಜಿ -150, ಕಸ್ತೂರಬಾ ಮಹಿಳಾ ನಾಟಕೋತ್ಸವ, ವಿಚಾರ ಸಂಕಿರಣ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ರಂಗಾಯಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಮಾರ್ಚ್ 25 ರಂದು ಸಂಜೆ 6.30 ಕ್ಕೆ ಕಾರ್ಯಕ್ರಮವನ್ನು ವೃತ್ತಿರಂಗಭೂಮಿ ಕಲಾವಿದೆ ಮಾಲತಿ ಸುಧೀರ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವೃತ್ತಿರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ ನಟಿ ಜಯಲಕ್ಷ್ಮಿ ಪಾಟೀಲ ಮತ್ತು ಬೆಂಗಳೂರಿನ ಸಂಗೀತ ಮತ್ತು ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಬನಶಂಕರಿ ಅಂಗಡಿ ಪಾಲ್ಗೊಳ್ಳಲಿದ್ದಾರೆ. ರಂಗ ಸಮಾಜದ ಸದಸ್ಯರಾದ ಹೆಲನ್ ಹಾಗೂ ಹಿಪ್ಪರಗಿ ಸಿದ್ಧರಾಮ ಅವರು ಉಪಸ್ಥಿತರಿರುತ್ತಾರೆ. ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಥೆರೇಸಮ್ಮ ಡಿಸೋಜಾ, ರಂಗಭೂಮಿಯ ಹಿರಿಯ ಕಲಾವಿದೆ ಪುಷ್ಪಮಾಲಾ ಅಣ್ಣಿಗೇರಿ ಹಾಗೂ ರಂಗಭೂಮಿ ಕಲಾವಿದೆ ಆರತಿ ದೇವಶಿಕಾಮಣಿ ಅವರನ್ನು ಸನ್ಮಾನಿಸಲಾಗುವುದು. ನಂತರ ಜಯಲಕ್ಷ್ಮಿ ಪಾಟೀಲ ರಚಿಸಿ, ನಿರ್ದೇಶಿಸಿರುವ ಓಂ ನಮೋ ಗುರುಪುಟ್ಟರಾಜ ನಾಟಕವನ್ನು ಕರ್ನಾಟಕ ಕಲಾ ವೈಭವ ಸಂಘ ಪ್ರಸ್ತುತಪಡಿಸುವುದು.

ಗಾಂಧೀಜಿ-150, ಕಸ್ತೂರ ಬಾ ಹಾಗೂ ಬಾಪೂ ವಿಚಾರ ಸಂಕಿರಣ ಮಾರ್ಚ್ 26 ರಂದು ಬೆಳಿಗ್ಗೆ 10.30ಕ್ಕೆ ಗಾಂಧೀಜಿ-150, ಕಸ್ತೂರಬಾ ಹಾಗೂ ಬಾಪೂ ವಿಚಾರ ಸಂಕಿರಣ ಕಾರ್ಯಕ್ರಮವು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ನಡೆಯಲಿದ್ದು, ವಿವಿಯ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ ಅವರು ಉದ್ಘಾಟಿಸುವರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಸರಸ್ವತಿ ಕಳಸದ ಅತಿಥಿಯಾಗಿ ಪಾಲ್ಗೊಳ್ಳುವರು.

ಮಹಿಳಾ ನಾಟಕೋತ್ಸವಕ್ಕೆ ತಯಾರಿ ನಡೆಯುತ್ತಿದೆ

ನಂತರ 11 ಗಂಟೆಯಿಂದ 12.30ರ ವರೆಗೆ ಪ್ರಥಮ ಗೋಷ್ಠಿ ನಡೆಯಲಿದ್ದು, ರಂಗಭೂಮಿ, ಗಾಂಧಿ ಚಿಂತನೆಗಳು ವಿಷಯದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾ ನಾಡಿಗೇರ ಹಾಗೂ ರಂಗಕರ್ಮಿ ರಜನಿ ಗರುಡ ಅವರು ವಿಷಯ ಮಂಡಿಸಲಿದ್ದಾರೆ. ಜೊತಗೆ ಮಧ್ಯಾಹ್ನ 12.30 ರಿಂದ 1.30ರ ವರೆಗೆ ಸಂವಾದ ನಡೆಯಲಿದೆ. ಮಧ್ಯಾಹ್ನ 2.30 ರಿಂದ 4 ಗಂಟೆ ವರೆಗೆ ಎರಡನೇ ಗೋಷ್ಠಿ ನಡೆಯಲಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಹಾಗೂ ಮೈಸೂರಿನ ನಾಟಕಕಾರರಾದ ಡಾ.ಸುಜಾತಾ ಅಕ್ಕಿ ಅವರು ಕಸ್ತೂರ ಬಾ, ಮಹಿಳಾ ಸಶಕ್ತೀಕರಣದ ಕುರಿತು ವಿಷಯ ಮಂಡಿಸುತ್ತಾರೆ. ಸಂಜೆ 4 ರಿಂದ 4.30ರ ವರೆಗೆ ಸಂವಾದ ನಡೆಯುವುದು ಹಾಗೂ ನಂತರ ಹಿರಿಯ ರಂಗಕರ್ಮಿ ಡಾ.ಬಾಳಣ್ಣ ಶೀಗೀಹಳ್ಳಿ ಅವರು ಸಮಾರೋಪ ನುಡಿಗಳನ್ನಾಡುತ್ತಾರೆ.

ಅಂದು ಸಂಜೆ 6.30 ಕ್ಕೆ ಜಿ.ಜಿ.ಹೆಗಡೆ ರಚಿಸಿರುವ ಹಾಗೂ ಎಲ್.ಬಿ.ಶೇಖ್ ನಿರ್ದೇಶಿಸಿರುವ ಸತ್ಯ ಹರಿಶ್ಚಂದ್ರ ನಾಟಕವನ್ನು ವಿಜಯಪುರ ರಂಗ ಕಲಾತಂಡ ಪ್ರಸ್ತುತಪಡಿಸಲಿದ್ದು, ಹೂಲಿಕಟ್ಟಿ ಗ್ರಾಮದ ರಂಗಕಲಾವಿದೆ ಹಾಗೂ ಜಾನಪದ ಹಾಡುಗಾರ್ತಿ ಲಕ್ಷ್ಮಿಬಾಯಿ ಹರಿಜನ ಅವರು ನಾಟಕಕ್ಕೆ ಚಾಲನೆ ನೀಡುವರು. ಮಾಜಿ ಶಾಸಕಿ ಸೀಮಾ ಮಸೂತಿ ಅವರು ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ರಂಗಭೂಮಿ ಕಲಾವಿದರಾದ ಶಿಲ್ಪಾ ಪಾಂಡೆ, ಸುರೇಖಾ ಹಂಪಿಹೊಳಿ ಹಾಗೂ ಶೋಭಾ ಹೆಗಡೆ ಅವರನ್ನು ಸನ್ಮಾನಿಸಲಾಗುತ್ತದೆ.

ಮಾರ್ಚ್ 27 ರಂದು ಸಂಜೆ 5.45 ಕ್ಕೆ ರಂಗಾಯಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನ ಕಾರ್ಯಕ್ರಮದ ಅಂಗವಾಗಿ ರಂಗಾಯಣದ ರೆಪರ್ಟರಿ ಕಲಾವಿದರಿಂದ ರಂಗ ಸಂಗೀತ ನಡೆಯಲಿದ್ದು, ಮಕ್ಕಳ ಸಾಹಿತಿ ಕೆ.ಎಚ್.ನಾಯಕ ಅವರು ವಿಶ್ವ ರಂಗಭೂಮಿ ದಿನ ಸಂದೇಶ ನೀಡುವರು. ನಂತರ ವಿಶ್ವರಾಜ್ ಪಾಟೀಲ ನಿರ್ದೇಶಿಸಿರುವ ಅಕ್ಕ ಅನ್ನಪೂರ್ಣ ರಚಿಸಿರುವ ‘ವಚನಕಾರ್ತಿಯರ ಶರಣ ಸಿಂಚನ’ ನಾಟಕವನ್ನು ಕಲಬುರಗಿ ರೇಷ್ಮಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಪ್ರಸ್ತುತಪಡಿಸಲಿದ್ದು, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ನಾಟಕಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ರಂಗಭೂಮಿ ಕಲಾವಿದೆ ಜಯಶ್ರೀ ಜಾತಿಕರ್ತ, ಬೆಳಗಾವಿಯ ಕೆಎಲ್ಇ ವೇಣುಧ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕಿ ಸುನಿತಾ ಬಸವರಾಜ ದೇಸಾಯಿ ಪಾಲ್ಗೊಳ್ಳಲಿದ್ದಾರೆ. ರಂಗಭೂಮಿ ಹಿರಿಯ ಕಲಾವಿದರಾದ ಶಾಂತಾ ಆಚಾರ್ಯ ಹಾಗೂ ಸುನಂದಾ ನಿಂಬನಗೌಡರನ್ನು ಸನ್ಮಾನಿಸಲಾಗುವುದು.

ಮಾರ್ಚ್ 28 ಕ್ಕೆ ಸಮಾರೋಪ ಸಮಾರಂಭ ಮಾರ್ಚ್ 28 ರಂದು ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಬಿ.ಎಂ.ಶರಭೇಂದ್ರಸ್ವಾಮಿ ನಿರ್ದೇಶಿಸಿರುವ ಎಚ್.ಎಸ್.ವೆಂಕಟೇಶಮೂರ್ತಿ ರಚಿಸಿರುವ ‘ನಿನಗೆ ನೀನೇ ಗೆಳತಿ’ ನಾಟಕವನ್ನು ಮಂಗಳೂರಿನ ಆಕರಂ ತಂಡ ಪ್ರಸ್ತುತಪಡಿಸಲಿದ್ದು, ಹಿರಿಯ ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರು ನಾಟಕಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಯಾಗಿ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಪಾಲ್ಗೊಳ್ಳಲಿದ್ದಾರೆ. ಬೆಳಗಾವಿಯ ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಅವರು ಸಮಾರೋಪ ನುಡಿಗಳನ್ನಾಡುವರು. ರಂಗಸಮಾಜದ ಸದಸ್ಯರಾದ ಶ್ರೀಧರ ಹೆಗಡೆ, ಪ್ರಭುದೇವ ಕಪ್ಪಗಲ್ಲು ಉಪಸ್ಥಿತರಿರಲಿದ್ದು, ವೃತ್ತಿ ರಂಗಭೂಮಿಯ ಚಿತ್ರದುರ್ಗದ ಹಿರಿಯ ಕಲಾವಿದೆ ಎನ್.ಮಂಜಮ್ಮ, ಉತ್ತರ ಕನ್ನಡದ (ಭಾಗವತ) ವಿದ್ಯಾ ನಾಯ್ಕ ಹಾಗೂ ರಂಗಭೂಮಿ ಕಲಾವಿದೆ ಸನ್ಮತಿ ಅಂಗಡಿ ಅವರನ್ನು ಸನ್ಮಾನಿಸಲಾಗುವುದು.

ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣದ ನಿರ್ದೇಶಕರಾದ ರಮೇಶ ಎಸ್.ಪರವಿನಾಯ್ಕರ್ ವಹಿಸಲಿದ್ದಾರೆ.

ಇದನ್ನೂ ಓದಿ

Covid 19 Vaccination: ಏಪ್ರಿಲ್ 1ರಿಂದಲೇ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ; ಕೇಂದ್ರ ಸರ್ಕಾರದಿಂದ ಘೋಷಣೆ

ನೀವು ಹೇಳಿದ್ದು ನಾವು ಕೇಳಿದ್ದು: ಕೊರೊನಾ ಮಾರಿಯ ಮಣಿಸಲು ಜಾರಿಗೆ ತಂದ ಜನತಾ ಕರ್ಫ್ಯೂಗೆ ಒಂದು ವರ್ಷ

Published On - 3:43 pm, Tue, 23 March 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ