ಸಿಡಿ ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ; ಅದನ್ನು ಪೊಲೀಸ್ ಆಯುಕ್ತರಿಗೆ ಮಧ್ಯಾಹ್ನ ತಲುಪಿಸ್ತೇನೆ; ಯುವತಿ ಪರ ವಕೀಲ ಜಗದೀಶ್

ನಾನು ಫೇಸ್‌ಬುಕ್ ಮೂಲಕ ಮನವಿ ಮಾಡಿದ್ದೆ. ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನಮ್ಮನ್ನು ನಂಬಿ ಆ ಯುವತಿ ಮುಂದೆ ಬಂದಿದ್ದಾರೆ. ಒಂದೆರಡು ದಿನದಲ್ಲಿ ಆ ಯುವತಿ ಮುಂದೆ ಬರಬಹುದು: ಯುವತಿ ಪರ ವಕೀಲ ಜಗದೀಶ್

ಸಿಡಿ ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ; ಅದನ್ನು ಪೊಲೀಸ್ ಆಯುಕ್ತರಿಗೆ ಮಧ್ಯಾಹ್ನ ತಲುಪಿಸ್ತೇನೆ; ಯುವತಿ ಪರ ವಕೀಲ ಜಗದೀಶ್
ಸಿಡಿಯಲ್ಲಿರುವ ಯುವತಿ ಮತ್ತು ವಕೀಲ ಜಗದೀಶ್
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Mar 26, 2021 | 12:32 PM

ಬೆಂಗಳೂರು: ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ. ದೂರಿನ ಪ್ರತಿಯನ್ನು ನಾನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತೇನೆ. ಆಕೆಗೆ ಭಯ ಇರುವ ಕಾರಣ ನನ್ನ ಮೂಲಕ ದೂರು ನೀಡುತ್ತಾಳೆ ಎಂದು ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಪರ ವಕೀಲ ಜಗದೀಶ್ ಟಿವಿ 9 ಕನ್ನಡಕ್ಕೆ ಹೇಳಿಕೆ ನೀಡಿದ್ದಾರೆ.ಯುವತಿ ಆರೋಪಿಸುತ್ತಿರುವ ವ್ಯಕ್ತಿ ಪ್ರಭಾವಶಾಲಿಯಾಗಿದ್ದಾರೆ. ಹೀಗಾಗಿ ಭದ್ರತೆಯ ಕಾರಣದಿಂದ ನಮ್ಮ ಮುಖಾಂತರ ದೂರು ಕೊಡಿಸುತ್ತಿದ್ದಾರೆ. ಈ ಮೊದಲೇ ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನನ್ನನ್ನೂ ಸೇರಿ 8 ವಕೀಲರು ಸಹಾಯ ಮಾಡುತ್ತಿದ್ದೇವೆ. ಸಿಡಿಯಲ್ಲಿರುವ ಯುವತಿ ಸಾಮಾನ್ಯ ಮಹಿಳೆಯಾಗಿದ್ದಾರೆ. ಹೀಗಾಗಿ ಆಕೆ ಪೊಲೀಸರಿಗೆ ಹೇಳಿಕೆ ನೀಡುವುದಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ ಎಂದು ವಕೀಲ ಜಗದೀಶ್ ಕೆ ಎನ್​ ಮಹದೇವ್​ ತಿಳಿಸಿದ್ದಾರೆ.

ಆಕೆಯ ಬಳಿ ಸಾಕ್ಷ್ಯಗಳು ಇವೆಯೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕೆ ಆ ಯುವತಿಗೆ ಸಹಾಯ ಮಾಡುತ್ತಿದ್ದೇವಷ್ಟೇ. ತನಿಖೆಯ ಮೂಲಕ ಸತ್ಯಾಂಶ ಹೊರಗಡೆ ಬರುತ್ತದೆ. ಕಳೆದ ಕೆಲವು ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ನಾನು ಫೇಸ್‌ಬುಕ್ ಮೂಲಕ ಮನವಿ ಮಾಡಿದ್ದೆ. ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನಮ್ಮನ್ನು ನಂಬಿ ಆ ಯುವತಿ ಮುಂದೆ ಬಂದಿದ್ದಾರೆ. ಒಂದೆರಡು ದಿನದಲ್ಲಿ ಆ ಯುವತಿ ಮುಂದೆ ಬರಬಹುದು. ಯುವತಿ ಹೊರಗೆ ಬರಬಹುದು ಎಂದು ಅನಿಸುತ್ತಿದೆ. ನಾನು ಯಾವುದೇ ರೀತಿಯ ದೂರು ನೀಡುತ್ತಿಲ್ಲ. ಆ ಯುವತಿ ಕೊಟ್ಟಿರುವ ದೂರಿನ ಪ್ರತಿಯನ್ನು ಮಧ್ಯಾಹ್ನ 2.30ಕ್ಕೆ ಆಯುಕ್ತರಿಗೆ ಸಲ್ಲಿಸ್ತಿದ್ದೇವೆ. ಮುಂದಿನ ನಿರ್ಧಾರ ಪೊಲೀಸ್ ಆಯುಕ್ತರಿಗೆ ಬಿಟ್ಟದ್ದು. CDಯಲ್ಲಿದ್ದ ಯುವತಿ ತಂದೆ-ತಾಯಿಗೆ ರಕ್ಷಣೆ ನೀಡಿದರೆ ನಾಳೆಯೇ ಯುವತಿ ಹೊರಗೆ ಬರಬಹುದು ಎಂದು ಯುವತಿ ಪರ ವಕೀಲ ಜಗದೀಶ್ ಕೆ ಎನ್​ ಮಹದೇವ್​ ತಿಳಿಸಿದ್ದಾರೆ.

ಬಿಡುಗಡೆಯಾಗಿದೆ ಮೂರನೇ ವಿಡಿಯೋ!

ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ. ವಕೀಲ ಜಗದೀಶ್ ಮೂಲಕ ದೂರು ನೀಡುತ್ತೇನೆ. 24 ದಿನದಿಂದ ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ಕಂಗಾಲಾಗಿದ್ದೆ. ಎಲ್ಲ ಪಕ್ಷದ ನಾಯಕರು, ಎಲ್ಲ ಸಂಘಟನೆಗಳು, ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ, ಈಗ ನನಗೆ ಧೈರ್ಯ ಬಂದಿದೆ. ನನಗೆ ಧೈರ್ಯ ಬಂದಿರುವುದರಿಂದ ದೂರು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡ್ತಿದ್ದೇನೆ’ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: ಮೂರನೇ ಸಿಡಿ ಬಿಡುಗಡೆ: ಜೀವ ಬೆದರಿಕೆ ಇದೆ; ರಮೇಶ್ ಜಾರಕಿಹೊಳಿ ವಿರುದ್ಧ ಮಧ್ಯಾಹ್ನ ದೂರು ಕೊಡುವೆ ಎಂದ ಯುವತಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನಿಜ ಸಂತ್ರಸ್ಥ ಜಾರಕಿಹೊಳಿನೂ ಅಲ್ಲ; ಸಿಡಿ ಲೇಡಿಯೂ ಅಲ್ಲ? ಮತ್ಯಾರು?