ಸಿಡಿ ಗ್ಯಾಂಗ್, ಡಿಕೆ ಶಿವಕುಮಾರ್ ಅವರಿಂದ ನಮ್ಮ ಮಗಳ ರಕ್ಷಿಸಿ; ಮಗಳ ಪ್ರಾಣಕ್ಕೇ ಅಪಾಯವಿದೆ: ಎಸ್‌ಐಟಿ ಎದುರು ಕಣ್ಣೀರಾದ ಯುವತಿಯ ತಂದೆ-ತಾಯಿ
ಸಿಡಿ ಕಿಂಗ್ ಪಿನ್‌ಗಳ ವಿರುದ್ಧ ಸಿಡಿಯಲ್ಲಿದ್ದ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಐಟಿ ವಿಚಾರಣೆ ವೇಳೆ ಪೋಷಕರು ಆಕ್ರೋಶ ಹೊರಜಾಕಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಬಿರುಸಿನ ಬೆಳವಣಿಗೆಗಳಾಗುತ್ತಿದೆ. ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ಲಿಖಿತ ದೂರು ನೀಡಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿದೆ. ಎಸ್‌ಐಟಿ ಮುಂದೆ ಯುವತಿ ಪೋಷಕರು ಹೇಳಿದ್ದೇನು ಎಂಬ ಬಗ್ಗೆ ಉನ್ನತ ಮೂಲಗಳ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.
ಸಿಡಿ ಕಿಂಗ್ ಪಿನ್‌ಗಳ ವಿರುದ್ಧ ಸಿಡಿಯಲ್ಲಿದ್ದ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಐಟಿ ವಿಚಾರಣೆ ವೇಳೆ ಪೋಷಕರು ಆಕ್ರೋಶ ಹೊರಜಾಕಿದ್ದಾರೆ. ಮಗಳು ಹೊರಗೆ ಬಾರದಂತೆ ಅವರು ಚಿತ್ರಹಿಂಸೆ ನೀಡಿದ್ದಾರೆ. ಇತ್ತೀಚೆಗೆ ನಮ್ಮನ್ನು ಸಂಪರ್ಕಿಸಿದ್ದರು ಎಂದು SIT ಮುಂದೆ ಕಣ್ಣೀರಿಡುತ್ತಾ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮಗಳ ರಕ್ಷಣೆ ನಾನೇ ಮಾಡಿಕೊಳ್ಳುತ್ತೇನೆ. ದೇಶ ಸೇವೆ ಮಾಡಿದ್ದ ನನಗೆ ಮಗಳ ರಕ್ಷಣೆ ಗೊತ್ತು ಎಂದು ಸಿಡಿ ಯುವತಿ ತಂದೆ ತಿಳಿಸಿದ್ದಾರೆ. ಸಿಡಿ ಗ್ಯಾಂಗ್, ಡಿಕೆಶಿ ವಿರುದ್ಧ ಕೆಲವೊಂದು ಸಾಕ್ಷ್ಯ ಸಮೇತ ಪೋಷಕರು ಆಪಾದನೆ ಮಾಡಿದ್ದಾರೆ. ಮಗಳನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕಣ್ಣೀರಾಗಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಕೈತೋರಿಸಿದ್ರಾ ಪೋಷಕರು? ಎಸ್‌ಐಟಿ ಮುಂದೆ ವಿಚಾರಣೆ ವೇಳೆ ಡಿಕೆಶಿ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಂತ್ರಸ್ತ ಯುವತಿ ತಂದೆ, ತಾಯಿ, ತಮ್ಮಂದಿರಿಂದ ಡಿ.ಕೆ. ಶಿವಕುಮಾರ್, ಡಿ.ಕೆ. ಶಿವಕುಮಾರ್ ಕಡೆಯವರ ಪ್ರಸ್ತಾಪವಾಗಿದೆ. ಡಿ.ಕೆ. ಶಿವಕುಮಾರ್ ಹಾಗೂ ಅವರ ಕಡೆಯವರು ಇದ್ದಾರೆ ಎಂದು ಯುವತಿ ಹೇಳುತ್ತಿದ್ದಳು. ಎಲ್ಲಿದ್ದೀಯಾ ಎಂದಾಗ ಗೊತ್ತಾಗ್ತಿಲ್ಲವೆಂದು ಅಸಹಾಯಕತೆ ತೋರಿದ್ದಳು. ‘ಅವಳಿಗೆ ಡಿಕೆಶಿ ಕಡೆಯವರೇ ಚಿತ್ರಹಿಂಸೆ ನೀಡಿರಬಹುದು’ ಎಂದು ಸಂತ್ರಸ್ತೆಯ ಪೋಷಕರು ಎಸ್‌ಐಟಿ ಮುಂದೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಎಸ್ಐಟಿಗೆ ಆಡಿಯೋ-ವಿಡಿಯೋ ಸಾಕ್ಷ್ಯಗಳ ಸಲ್ಲಿಕೆ ಸಾಧ್ಯತೆ ಇದೆ. ಮಧ್ಯಾಹ್ನ 12 ಗಂಟೆಯಿಂದ, ಯುವತಿ ತಂದೆ, ತಾಯಿ ಹಾಗೂ ಸಹೋದರರಿಂದ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಸಿಡಿ ಗ್ಯಾಂಗ್, ಡಿಕೆಶಿ ಕಡೆಯವರಿಂದ ನಮ್ಮ ಮಗಳನ್ನು ರಕ್ಷಿಸಿ. ನಮ್ಮ ಮಗಳ ಪ್ರಾಣಕ್ಕೇ ಅಪಾಯವಿದೆ ಎಂದು ವಿಚಾರಣೆ ವೇಳೆ ಯುವತಿಯ ತಂದೆ-ತಾಯಿ ಅಲವತ್ತುಕೊಂಡಿದ್ದಾರೆ. ಈ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.\
ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು..
Published On - 3:48 pm, Sat, 27 March 21