Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today: ಯುಗಾದಿ ಹಬ್ಬಕ್ಕೆ ಚಿನ್ನದ ಉಡುಗೊರೆ; ಖರೀದಿಸುವ ಆಸೆ ಇದ್ದರೆ ದರ ವಿವರ ಇಲ್ಲಿದೆ!

Gold Silver Price in Bangalore: ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳುವುದಾದರೆ ದರ ಮಾಹಿತಿ ಇಲ್ಲಿದೆ. ಇಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ ಚಿನ್ನ ಕೊಳ್ಳುವತ್ತ ಯೋಚಿಸಿ.

Gold Rate Today: ಯುಗಾದಿ ಹಬ್ಬಕ್ಕೆ ಚಿನ್ನದ ಉಡುಗೊರೆ; ಖರೀದಿಸುವ ಆಸೆ ಇದ್ದರೆ ದರ ವಿವರ ಇಲ್ಲಿದೆ!
ಚಿನ್ನದ ಕಿವಿಯೋಲೆ (ಸಾಂದರ್ಭಿಕ ಚಿತ್ರ)
Follow us
shruti hegde
|

Updated on: Apr 12, 2021 | 8:00 AM

ಬೆಂಗಳೂರು: ಹಬ್ಬ ಬಂದಾಗ ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಯುಗಾದಿ ಹಬ್ಬ ಅಂದಾಕ್ಷಣ ಹೊಸ ಚೈತನ್ಯದ ಜೊತೆ ಹೊಸ ಭರವಸೆಗಳೊಂದಿಗೆ ಇಡೀ ವರ್ಷ ಕಳೆಯಲಿ ಎಂಬ ಭಾವನೆ. ಹೀಗಿದ್ದಾಗ ಹಬ್ಬದ ಸಂಭ್ರಮದ ಜೊತೆ ಬೇವು ಬೆಲ್ಲ ಸ್ವೀಕರಿಸಿ, ಮನೆಗೆ ಬಂದ ನೆಂಟರಿಗೆ ಹಬ್ಬದ ಉಡುಗೊರೆಯಾಗಿ ಏನಾದರೂ ಕೊಡಬೇಕು. ಜೊತೆಗೆ ಹಬ್ಬಕ್ಕೆ ನೀವು ವಿಶೇಷವಾಗಿ ಅಲಂಕಾರಗೊಳ್ಳಬೇಕು. ಹೀಗಿದ್ದಾಗ ಇಂದೇ ಅಂಗಡಿಗೆ ಹೋಗಿ ಹೊಸ ಡಿಸೈನ್​ನ ಚಿನ್ನದ ಹಾರವನ್ನೋ, ಉಂಗುರಗಳನ್ನೋ ಅಥವಾ ಹೊಸ ರೀತಿಯ ಕೈ ಬಳೆಗಳನ್ನು ಕೊಳ್ಳಿರಿ.‌ ಹಬ್ಬದ ಮೆರುಗು ಹೆಚ್ಚಿಸಲು ನಿಮ್ಮ ಮುಖದಲ್ಲಿ ಸಂತೋಷವಿರಬೇಕು. ಚಿನ್ನ ಖರೀದಿ ನಿಮಗೆ ಖುಷಿ ತರುವುದಾದರೆ ಮತ್ತೇಕೆ ತಡ?

ದೂರದಲ್ಲಿರುವವರು ಮನೆಗೆ ಹಬ್ಬಕ್ಕೆಂದು ಹೋಗುತ್ತಿರುತ್ತೀರಿ. ಮನೆಯ ಸದಸ್ಯರಿಗೆ ಚಿನ್ನ ಕೊಂಡೊಯ್ದರೆ ಬೆಲೆ ಬಾಳುವ ವಸ್ತುವೂ ಹೌದು, ಮನೆಯವರಿಗೆ ಹಬ್ಬಕ್ಕೆ ಕೊಟ್ಟ ಉಡುಗೊರೆಯೂ ಹೌದು. ಹಾಗಿದ್ದಾಗ ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ ಎಂಬುದರ ವಿವರ ಹೀಗಿದೆ. ಖರೀದಿಸುವ ಆಸೆ ಇದ್ದರೆ ದರ ಎಷ್ಟಿದೆ ಎಂಬುದನ್ನು ಗಮನಿಸಿ ಚಿನ್ನ ಕೊಳ್ಳುವತ್ತ ಯೋಚಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂ ಚಿನ್ನದ ದರ ನಿನ್ನೆ 4,340 ರೂಪಾಯಿಗೆ ಮಾರಾಟವಾಗಿದ್ದು ಇಂದು 4.341 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಇಂದು ಚಿನ್ನದ ದರ ಕೊಂಚ ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ನಿನ್ನೆ 34,720 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 34,728 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 43,400 ರೂಪಾಯಿಗೆ ಮಾರಾಟವಾಗಿದ್ದು ಇಂದು 43,410 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,34,000 ರೂಪಾಯಿ ಆಗಿದ್ದು ಇಂದು ದರ 4,34,100 ರೂಪಾಯಿ ಏರಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನದ ದರ ಮಾಹಿತಿ 1 ಗ್ರಾಂ ಚಿನ್ನ ದರ ನಿನ್ನೆ 4,735 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,736 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 37,880 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 37,888 ರೂಪಾಯಿ ಇದೆ. 10 ಗ್ರಾಂ ಚಿನ್ನದ ದರ ನಿನ್ನೆ 47,350 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 47,360 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,73,500 ರೂಪಾಯಿಗೆ ಮಾರಾಟವಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡಿದ್ದು, ಇಂದು ದರ 4,73,600 ರೂಪಾಯಿ ಆಗಿದೆ.

ಬೆಳ್ಳಿ ದರ ಮಾಹಿತಿ ದೈನಂದಿನ ದರ ಪರಿಶೀಲಿಸಿದಾಗ ಇಂದು ಬೆಳ್ಳಿ ದರದಲ್ಲಿಯೂ ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ನಿನ್ನೆ 67 ರೂಪಾಯಿಗೆ ಮಾರಾಟವಾಗಿದೆ. ಇಂದು ದರ ಏರಿಕೆಯ ನಂತರ 67.20ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿಯನ್ನು ನಿನ್ನೆ 536 ರೂಪಾಯಿಗೆ ಗ್ರಾಹಕರು ಖರೀದಿಸಿದ್ದು, ಇಂದು ದರ 537.60 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 670 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 672 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,700 ರೂಪಾಯಿ ಇದ್ದು, ಇಂದಿನ ದರ ಏರಿಕೆಯಿಂದ 6,720 ರೂಪಾಯಿಗೆ ಜಿಗಿದಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 67,000 ರೂಪಾಯಿ ಇದ್ದು, ಇಂದು 200 ರೂಪಾಯಿ ಏರಿಕೆಯ ನಂತರದಲ್ಲಿ 67,200 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ಚಿನ್ನ, ಬೆಳ್ಳಿ ದರ ಏರಿಕೆ.. ಆಭರಣ ಪ್ರಿಯರಿಗೆ ಮೇಲಿಂದ ಮೇಲೆ ನಿರಾಸೆ!

Gold Rate Today: ಇಂದೂ ಏರಿದೆ ಚಿನ್ನದ ಮೌಲ್ಯ.. ಇಲ್ಲಿದೆ ದರ ವಿವರ!